ಸಿನಿಮಾ ಲೇಖನ

ಮತ್ತೆ ಜನವರಿ

ಸಾಮಾನ್ಯವಾಗಿ ಜನವರಿ ಆದ ಮೇಲೆ ಫೆಬ್ರವರಿ ಬರುತ್ತೆ. ಆದರೆ ಫೆಬ್ರವರಿ ಮುಗಿಯುತ್ತ ಬಂದಿರುವ ಈ ಸಂದರ್ಭದಲ್ಲಿ ಮತ್ತೆ ಜನವರಿ ಬಂದಿದೆ! ಅಚ್ಚರಿಯಾದರೂ ಇದು ನಿಜ...

ಮತ್ತೆ ಜನವರಿ
Published On :

ಸಾಮಾನ್ಯವಾಗಿ ಜನವರಿ ಆದ ಮೇಲೆ ಫೆಬ್ರವರಿ ಬರುತ್ತೆ. ಆದರೆ ಫೆಬ್ರವರಿ ಮುಗಿಯುತ್ತ ಬಂದಿರುವ ಈ ಸಂದರ್ಭದಲ್ಲಿ ಮತ್ತೆ ಜನವರಿ ಬಂದಿದೆ!

ಅಚ್ಚರಿಯಾದರೂ ಇದು ನಿಜ. ಅಂದ ಹಾಗೆ ಈ ಜನವರಿ, ಕ್ಯಾಲೆಂಡರ್‌ಗೆ ಸಂಬಂಧಿಸಿದ್ದಲ್ಲ. ಗಾಂಧಿನಗರದ್ದು. ಹೌದು 'ಜನವರಿ 1 ಬಿಡುಗಡೆ' ಎನ್ನುವ ಥ್ರಿಲ್ಲರ್ ಚಿತ್ರವೊಂದು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದು ನಿಮಗೆ ನೆನಪಿರಬೇಕು. ಆ ಚಿತ್ರ ಇದೀಗ ಚಿತ್ರೀಕರಣವೆಂಬ  ಮಹಾ ದಂಡಯಾತ್ರೆ ಮುಗಿಸಿಕೊಂಡು ಆಡಿಯೋ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಅದರ ಹಾಡುಗಳು ಅನಾವರಣಗೊಂಡವು.  ಚಿತ್ರದ ಪ್ರಧಾನ ಪಾತ್ರಧಾರಿ ಪೂಜಾಗಾಂಧಿ, ಮತ್ತೊಂದು ಪಾತ್ರದಲ್ಲಿ ನಟ ದೀಪಕ್ ಇದ್ದಾರೆ. ಗೋಪಿ ವರ್ಮಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಯುಗೇಂದರ್ ಚಿತ್ರದ ನಿರ್ಮಾಪಕ. ವರ್ಮಾ ಶ್ರೀನಿವಾಸ್ ನಿರ್ದೇಶಕ. ಇದೇ ವರ್ಷ 'ಜನವರಿ...' ಚಿತ್ರ ಬಿಡುಗಡೆಯಾಗಲಿದೆಯಂತೆ. 20 ನಿಮಿಷದ ಗ್ರಾಫಿಕ್ಸ್, ಚಿತ್ರದ ಹೈಲೆಟ್. ನಟಿ ಪೂಜಾಗಾಂಧಿ ಇಲ್ಲಿ ಕ್ರೈಮ್ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ತಯಾರಿಯ ಹಿಂದೆ ಇರುವವರೆಲ್ಲ ತೆಲುಗಿನವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.