ನವೀನ್ ಕೃಷ್ಣ ಸ್ಪೀಕಿಂಗ್ ಬಾದರದಿನ್ನಿ ಬ್ರದರ್ಸ್

ಅದು 'ಬಿಡಲಾರೆ ಎಂದೂ ನಿನ್ನ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಇತ್ತೀಚೆಗೆ ಕಾಶೀನಾಥ್ ಬ್ಯಾನರ್‌ನ '12 ಎ.ಎಂ' ಚಿತ್ರದ ನಂತರ ಪ್ರೇಕ್ಷಕರನ್ನು ಹೆದರಿಸಲು ಮತ್ತೊಂದು ದೆವ್ವದ ಚಿತ್ರ ತಯಾರಾಗಿದೆ. ಅಂದು, ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರದ ಬಿಡುಗಡೆಯ ವಿಷಯವನ್ನು ಹೇಳಿಕೊಂಡು ಪತ್ರಕರ್ತರನ್ನು ಎದುರಿಸುವ ಕೆಲಸಕ್ಕೆ ಮುಂದಾಗಿದ್ದುದು ಚಿತ್ರದ ನಾಯಕ ನವೀನ್‌ಕೃಷ್ಣ, ನಿರ್ದೇಶಕ ಉಮೇಶ್ ಬಾದರದಿನ್ನಿ, ನಿರ್ಮಾಪಕ ಮುರಳಿ, ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ಕರಿಸುಬ್ಬು, ಚಿತ್ರದ ನಾಯಕಿ ಸ್ವಾತಿ ಮುಂತಾದವರು. ಇವೆಲ್ಲಕ್ಕೂ ಕಳಶವಿಟ್ಟಂತೆ ಅಂದು ಅಪರೂಪದ ಅತಿಥಿಗಳಾಗಿದ್ದವರು ಹಿರಿಯ ನಟ ಅಶೋಕ್ ಬಾದರದಿನ್ನಿ.
'ನಾನೇನೂ ಮಾತಡಂಗಿಲ್ರೀ, ಎಲ್ಲವನ್ನೂ ಸಿನಿಮಾ ತಂಡವನ್ನೇ ಕೇಳಿ' ಎನ್ನುತ್ತಾ ಮಾತು ಶುರುಮಾಡಿದ ಅಶೋಕ್ ಬಾದರದಿನ್ನಿ ನನ್ನ ತಮ್ಮನ ನಿರ್ದೇಶನದ ಚಿತ್ರ ಇದು. ಚೆನ್ನಾಗಿ ಮಾಡಿದ್ದಾನೆ ಎನ್ನುವ ನಂಬಿಕೆ ಇದೆ. ಎಲ್ಲರ ಸಹಕಾರ ಇರಲಿ' ಎಂದರು.
ಕನ್ನಡ ಚಿತ್ರರಂಗದ ಆಲ್‌ರೌಂಡರ್ ಎಂದೇ ಖ್ಯಾತರಾಗಿರುವ ನವೀನ್‌ಕೃಷ್ಣ ಅವರ ಕೊಡುಗೆ ಕೇವಲ ಚಿತ್ರದಲ್ಲಷ್ಟೇ ಅಲ್ಲ, ಪತ್ರಿಕಾಗೋಷ್ಠಿ ಮತ್ತು ಅಲ್ಲಿ ಪ್ರದರ್ಶಿಸಲಾದ ಚಿತ್ರದ ಟ್ರೈಲರ್‌ಗಳಲ್ಲೂ ಇದೆ ಎಂದು ಕಂಡುಬಂದಿದ್ದು ಅಂದಿನ ವಿಶೇಷ. ತಮ್ಮ ವಿಭಿನ್ನ ಸಂಭಾಷಣೆಯ ಖದರ್ ಅನ್ನು ಚಿತ್ರದ ಟ್ರೈಲರ್‌ಗಳಿಗೂ ತುಂಬಿ, ನಟ, ನಿರ್ಮಾಪಕರಾದ ಕರಿಸುಬ್ಬು, ಜೈಜಗದೀಶ್ ಅವರ ಕಾಲೆಳೆಯುವ ಮಾತುಗಳು ಮತ್ತು ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳುವ ಮಾತುಗಳನ್ನು ಟ್ರೈಲರ್‌ಗೆ ತುಂಬಿದ್ದ ನವೀನ್ ನಾನು ಕೇವಲ ನಾಯಕ ಅಷ್ಟೇ ಅಲ್ಲ ಎನ್ನುತ್ತಾ 'ಬಿಡಲಾರಕೆ ಎಂದೂ ನಿನ್ನ' ಚಿತ್ರಕ್ಕೆ ತಮಗಿರುವ ಕಮಿಟ್‌ಮಿಂಟ್ ಅನ್ನು ತೋರಿಸಿದರು.
ಅಶೋಕ್ ಬಾದರದಿನ್ನಿಯೊಂದಿಗಿನ ಗೆಳೆತನಕ್ಕೆ ಬೆಲೆಕೊಟ್ಟು ಈ ದೆವ್ವದ ಚಿತ್ರದ ಬೆನ್ನಿಗೆ ನಿಂತಿದ್ದ ಕರಿಸುಬ್ಬು, ನಿರ್ದೇಶಕರ ಉತ್ಸಾಹ ಮೊದಲ ದಿನದಷ್ಟೇ ಫ್ರೆಷ್ ಆಗಿದೆ. ಹಾಗಾಗಿ ಸಿನಿಮಾ ಕೂಡಾ ಫ್ರೆಷ್ ಆಗಿರುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ನಿರ್ದೇಶಕ ಉಮೇಶ್ ಬಾದರದಿನ್ನಿ, ಎಲ್ಲರೂ ತಮ್ಮ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಾರೆ. ಆದರೆ ನಾನು ಪ್ರಾಮಾಣಿಕವಾಗಿ ನನ್ನ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತೇನೆ, ಚಿತ್ರ ನೋಡಿದ ಪ್ರೇಕ್ಷಕರು ನನ್ನ ಮಾತನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು. ಚಿತ್ರಕ್ಕೆ ಸೆನ್ಸಾರ್‌ನವರು 'ಎ' ಸರ್ಟಿಫಿಕೆಟ್ ಕೊಟ್ಟಾಗ ಬೇಜಾರಾಯಿತು. ಆದರೆ ತೊಂದರೆಯಿಲ್ಲ, ಈಗ 'ಎ' ಸರ್ಟಿಫಿಕೆಟ್ ಕೊಡೋದು ಕಾಮನ್ ಆಗಿದೆ. ಹಾಗಂತ ನಮ್ಮ ಚಿತ್ರದಲ್ಲಿ ಕಾಮದ ಎಲಿಮೆಂಟ್ ಇದೆ ಎಂದುಕೊಳ್ಳಬೇಕಿಲ್ಲ ಇದು ಕೇವಲ ದೆವ್ವದ ಚಿತ್ರ ಎಂಬುದು ಉಮೇಶ್ ಬಾದರದಿನ್ನಿ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


