ಸಿನಿಮಾ ಲೇಖನ

ಕ್ರೇಜಿ ರಿಯಾಲಿಟಿ ಶೋಗಳು

ಕ್ರೇಜಿ ರಿಯಾಲಿಟಿ ಶೋಗಳು
Published On :

ಎದ್ದಿದ್ರೆ ಕಾಸು ಮಲಗಿದ್ರೆ ಲಾಸು. ಇದು ಚಾಲೆಂಜ್ ಎಂಬ ಹೆಸರಿನ ಹೊಸ ರಿಯಾಲಿಟಿ ಷೋನ ಟ್ಯಾಗ್ ಲೈನ್. ಹೌದು ಎಪ್ಪತ್ತೆರಡು ಗಂಟೆ 'ನಿದಿರೇಗು ರಜಾ ..' ಹಾಕುವ ತಾಕತ್ತಿದ್ದವರು ಗರಿಷ್ಠ ಒಂದುಲಕ್ಷ ರುಪಾಯಿಗಳನ್ನು ತಮ್ಮ ಜೇಬಿಗಿಳಿಸಬಹುದು. ಅಂದಹಾಗೆ ಇದರಲ್ಲಿ ಹದಿನೆಂಟರಿಂದ ಮೂವತ್ತರ ಒಳಗಿನವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ. ನಿದ್ದೆ ಬಾರದ ವಯಸ್ಸಿನವರಿಗೇ ಸ್ಪರ್ಧೆ ಇಟ್ಟಿರುವುದರಿಂದ ಕಾಂಪಿಟಿಷನ್ ಜೋರಾಗಿಯೇ ಇರುವ ನಿರೀಕ್ಷೆ ಇದೆ. ವಾರಾಂತ್ಯದ ಮೂರು ದಿನ ಪ್ರಸಾರವಾಗಲಿರುವ ಈ ಷೋ ಒಟ್ಟು ಹದಿಮೂರು ವಾರ ವೀಕ್ಷಕರ ನಿದ್ದೆಗೆಡಿಸಲಿದೆ.
ಕಿರುತೆರೆಯ ಜನಪ್ರಿಯ ನಿರೂಪಕ ಸೃಜನ್ ಅವರ ಲೋಕೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಾಲೆಂಜ್ ಮಾಡಲಾಗುತ್ತಿದ್ದು, ತೇಜಸ್ವಿ ಈ ಷೋನ ನಿರ್ದೇಶನದ ಭಾರ ಹೊತ್ತಿದ್ದಾರೆ.
 ರೆಸಾರ್ಟ್ ಒಂದರಲ್ಲಿ ಆರು ಜನ ಸ್ಪರ್ಧಿಗಳನ್ನು ಜಮೆ ಮಾಡಲಾಗುತ್ತದೆ. ಷೋ ಶುರುವಿನಲ್ಲಿ ಆರು ಜನ ಸ್ಪರ್ಧಿಗಳಿಗೂ ತಲಾ ಒಂದು ಲಕ್ಷ ಕೊಡಲಾಗುತ್ತದೆ. ಎಪ್ಪತ್ತೆರಡು ಗಂಟೆಗಳ ಕಾಲ ನಿದ್ದೆ ಮಾಡದೆಯೇ ಎಲ್ಲರಿಗಿಂತ ಕಡಿಮೆ ದುಡ್ಡು ಖರ್ಚು ಮಾಡಿಕೊಂಡು ಉಳಿದವನೇ ಚಾಂಪಿಯನ್. ನಟರಂಗ ರಾಜೇಶ್ ಈ ಸ್ಪರ್ಧೆಯ ಆ್ಯಂಕರ್.
ಝೀ ಟಿವಿಯ ಇನ್ನೊಂದು ಹೊಸ ರಿಯಾಲಿಟಿ ಶೋ ಕೂಡ ಆರಂಭವಾಗುತ್ತಿದ್ದು, ನಟಿ ಪದ್ಮಜಾರಾವ್ ಇದರ ನೇತೃತ್ವ ವಹಿಸಿದ್ದಾರೆ. ಡಿಸೆಂಬರ್ 28ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ ಹತ್ತರವರೆಗೆ ಪ್ರಸಾರವಾಗುವ ಕ್ರೇಜಿ ಕಪಲ್ ಎಂಬ ಈ ಶೋನಲ್ಲಿ  ನವ ದಂಪತಿಗಳು, ಯುವ ಪ್ರೇಮಿಗಳು ಭಾಗವಹಿಸಬಹುದಂತೆ. ಹಿರಿಯ ನಟಿ ಊರ್ವಶಿ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಇಲ್ಲಿ ಪುರುಷರು ಟಾಸ್ಕ್ ಎದುರಿಸಿದರೆ ಮಹಿಳೆಯರು ಜಡ್ಜ್‌ಗಳಾಗಿ ಭಾಗವಹಿಸುತ್ತಾರೆ. ರೋಮಿಯೋಗೆ ಟೆಸ್ಟ್ ಜೂಲಿಯಟ್‌ಗೆ ರೆಸ್ಟ್ ಎಂಬ ಕಾನ್ಸೆಪ್ಟ್ ಮೇಲೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂಬುದು ಪದ್ಮಜಾರಾವ್ ಅವರ ಅಭಿಪ್ರಾಯ. 13 ವಾರಗಳ ಕಾಲ 26 ಕಂತುಗಳಲ್ಲಿ ಈ ಶೋ ಪ್ರಸಾರವಾಗಲಿದೆ.

- ನವೀನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.