ಕಮಲ ಚಿನ್ನಿ...ಬೆಳ್ಳಿ...

'ಗೊಂಬೆಗಳ ಲವ್' ಚಿತ್ರದಲ್ಲಿ ಕಾಣಿಸಿಕೊಂಡ ಗೊಂಬೆ ಈ ಪಾವನಾ. ಈಕೆ ಗೊಂಬೆಗಳ ಲವ್ ನ ಕಮಲ, ಅದ್ವೈತನ ಚಿನ್ನಿ, ಮತ್ತು ಜಟ್ಟನ ಬೆಳ್ಳಿ. ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದ ಪಾವನಾ, ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ ಕ್ಯಾಂಪ್ ಸೇರಿದಂತೆ ಹಲವು ಕಡೆ ನಟನಾ ತರಬೇತಿ ಪಡೆದು ನಟಿಯಾಗುವ ಕೆಲಸಕ್ಕೆ ಮುಂದಾದವರು. ಗೊಂಬೆಗಳ ಲವ್ ಎಂಬ ಹೊಸಬರ ಚಿತ್ರಕ್ಕೆ ಹೋದ ಪ್ರೇಕ್ಷಕರಿಗೆ ಮೊದ ಮೊದಲ ದೃಶ್ಯಗಳಲ್ಲಿ ತುಂಟ ಹುಡುಗಿಯಾಗಿ ಕಾಣಿಸಿಕೊಳ್ಳುವ ಪಾವನಾ ಕ್ರಮೇಣ ಈ ಹುಡುಗಿಯನ್ನು ಲೈಟ್ ಆಗಿ ತೆಗೆದುಕೊಳ್ಳುವಂತಿಲ್ಲ ಎಂಬ ಭರವಸೆ ಹುಟ್ಟಿಸುವ ಮಟ್ಟಕ್ಕೆ ಬೆಳೆಯುತ್ತಾರೆ. ಗ್ಲಾಮರ್ನ ಅಂಶವೇ ಇಲ್ಲದ ಪಾತ್ರದಲ್ಲಿ ನಾಯಕ ಅರುಣ್ ಜೊತೆ ಪಾವನಾ ನಿಜಕ್ಕೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರಾಗಿದ್ದರು. ಆದರೆ ಪಾವನಾ ಅವರ ಅಭಿನಯದ ಇನ್ನೊಂದು ಮಜಲು ಗೊತ್ತಾಗಿದ್ದು ಗಿರಿರಾಜ್ ನಿರ್ದೇಶನದ ಜಟ್ಟ ಚಿತ್ರದಲ್ಲಿ. ಜಟ್ಟನ ಹೆಂಡತಿ ಬೆಳ್ಳಿಯಾಗಿ ಬಂಗಾರದಂಥ ಅಭಿನಯ ನೀಡಿರುವ ಪಾವನಾ ಬೆಳ್ಳಿತೆರೆಯ ಮೇಲೆ ದೀರ್ಘಕಾಲ ಬಾಳಿಕೆ ಬರುವ ನಟಿ ಎಂಬ ನಂಬಿಕೆ ಹುಟ್ಟಿಸಿದ್ದಾರೆ. ಅಚ್ಚ ಕನ್ನಡದ ನಾಯಕಿಯರ ಕೊರತೆ ನೀಗಿಸುವ ಎಲ್ಲ ಲಕ್ಷಣಗಳೂ ಈಕೆಗಿವೆ. 'ಗೊಂಬೆಗಳ ಲವ್'ನಂಥ ಒಂದು ಚಿತ್ರದ ಹೆಸರನ್ನು ಬೆನ್ನಿಗೆ ಇಟ್ಟುಕೊಂಡು, ಜಟ್ಟ ಚಿತ್ರದಲ್ಲಿ ಬೆಳ್ಳಿಯಾಗಿರುವ ಪಾವನಾ ಒಂದು ಚಿತ್ರದ ಅನುಭವದಲ್ಲಿ ನಿಜಕ್ಕೂ ಬ್ರಿಲಿಯಂಟ್ ಎನ್ನುವ ಮಟ್ಟಕ್ಕೆ ಬೆಳೆದಿದ್ದು ಎಲ್ಲರ ಗಮನಕ್ಕೂ ಬಂತು. ಹಾಗೆ ನೋಡಿದರೆ, ಜಟ್ಟ ಚಿತ್ರದಲ್ಲಿ ನಾಯಕಿಯಾದ ಸುಕೃತಾ ವಾಗ್ಲೆ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇತ್ತು. ಚಿತ್ರದ ಪೋಸ್ಟರ್ಗಳಲ್ಲಿ ರಾರಾಜಿಸಿದ್ದೂ ಅವರ ಚಿತ್ರಗಳೇ. ಆದರೆ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಸುಕೃತಾ ಅವರಷ್ಟೇ ಇಷ್ಟವಾಗುವುದು ಪಾವನಾ. ತಮ್ಮ ಪೆದ್ದು, ಮುದ್ದು ಮತ್ತು ನೇರ, ಪ್ರಾಮಾಣಿಕ ಮಾತುಗಳಿಂದ ತಮ್ಮ ವಿಭಿನ್ನ ಮುಖಭಾವದಿಂದ ಜಟ್ಟ ಚಿತ್ರಕ್ಕೆ ಒಂದು ವಿಶೇಷ ಕಳೆತಂದುಕೊಟ್ಟ ಪಾವನಾ ಈ ಹಿಂದೆ ಇದೇ ಗಿರಿರಾಜ್ ಅವರ 'ಅದ್ವೈತ' ಚಿತ್ರದಲ್ಲೂ ಅಭಿನಯಿಸಿದ್ದರು. ಆದರೆ ಅದಿನ್ನೂ ತೆರೆಕಂಡಿಲ್ಲ. ಆದರೆ ಜಟ್ಟ ಚಿತ್ರ ನೋಡಿದ ಪ್ರೇಕ್ಷಕರು ಈಕೆಯ ಮುಂದಿನ ಚಿತ್ರ ಯಾವುದು ಎಂದು ಕಾತರದಿಂದ ನಿರೀಕ್ಷಿಸುವ ಮಟ್ಟಕ್ಕೆ ಈ ಚಿತ್ರದಲ್ಲಿ ಪಾವನಾ ಅಭಿನಯಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
- ಹರಿ
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


