ಸಿನಿಮಾ ಲೇಖನ

ಉದಯೋನ್ಮುಖ ಖಳನಟ

ಉದಯೋನ್ಮುಖ ಖಳನಟ
Published On :

ನೀವು 'ಜಯಮ್ಮನ ಮಗ' ಸಿನಿಮಾ ನೋಡಿದ್ದರೆ 'ಝಲಕು, ಝಲಕು, ಝಲಕು ಜಯಮ್ಮಾ' ಎಂದು ಅಬ್ಬರಿಸುವ ಈ ವಿಲನ್‌ನನ್ನು ಮರೆಯುವುದು ಸಾಧ್ಯವೇ ಇಲ್ಲ. ನಟ ದುನಿಯಾ ವಿಜಿ ಅವರ ಜೊತೆಗಿದ್ದುಕೊಂಡು ಸಿನಿಮಾರಂಗದ ಫ್ಲೇವರ್ ನೋಡಿದ್ದ ರಾಘವ ಉದಯ್ 'ಜಯಮ್ಮನ ಮಗ' ಚಿತ್ರದಿಂದ ಬಹಳ ದಿನಗಳಿಂದ ಖಾಲಿ ಇದ್ದ ಅಪ್ಪಟ ಕನ್ನಡದ ಖಳನಟನ ಜಾಗ ತುಂಬುವ ಎಲ್ಲ ಭರವಸೆಗಳನ್ನೂ ತೋರಿಸಿದ್ದಾರೆ. ಜಯಮ್ಮನ ಮಗ ಚಿತ್ರ ಹಿಟ್ ಆಗಿದ್ದರೆ ಅದರಲ್ಲಿ ರಾಘವ್ ಉದಯ್ ಅವರ ಪಾತ್ರವೂ ದೊಡ್ಡದು.
ದುನಿಯಾ ವಿಜಯ್ ಅವರ ಹುಡುಗ ಎಂದೇ ಗುರುತಿಸಿಕೊಂಡಿದ್ದ ಉದಯ್ ಚಿತ್ರರಂಗಕ್ಕೆ ಹೊಸಬರೇನಲ್ಲ.  ಇದುವರೆಗೂ ಸುಮಾರು 125 ಚಿತ್ರಗಳಲ್ಲಿ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ ಉದಯ್. ಆದರೆ, ಪಾತ್ರ ಅಂತ ಸಿಕ್ಕಿದ ಅವಕಾಶಗಳು ಕಡಿಮೆ. ದುನಿಯಾ ಚಿತ್ರದಿಂದ ಶುರುಮಾಡಿ 'ಯುಗ', 'ಸಾರಥಿ', 'ಶಂಕರ್ ಐಪಿಎಸ್‌' ಮುಂತಾದ ಅನೇಕ ಚಿತ್ರಗಳಲ್ಲಿ ಉದಯ್ ಅಭಿನಯದ ಝಲಕ್ ಇತ್ತು. ಆದರೆ ಅವೆಲ್ಲವೂ ಸಣ್ಣಪುಟ್ಟ ಪಾತ್ರಗಳಾಗಿದ್ದವು. ಆದರೆ 'ಜಯಮ್ಮನ ಮಗ' ಚಿತ್ರ ಮುಖ್ಯ ವಿಲನ್ ಪಾತ್ರ ಅವರ ಪೂರ್ಣಪ್ರಮಾಣದ ಪ್ರತಿಭೆಯನ್ನು ಎಲ್ಲರೂ ಗುರುತಿಸುವಂತೆ ಮಾಡಿದೆ. ಶ್ರೀಕಾಂತ್ ಅಭಿನಯದ 'ರಂಗ ದಿ ದೊಂಗ' ಚಿತ್ರದಲ್ಲೂ ಉದಯ್ ಅಭಿನಯಿಸಿದ್ದಾರೆ. ಅದಲ್ಲದೆ ಕನ್ನಡದಲ್ಲಿ ತಮಿಳಿನಿಂದ ರಿಮೇಕ್ ಆಗಿದ್ದ 'ಕಲ್ಪನಾ' ಚಿತ್ರದ ಶ್ರೀಲಂಕನ್ ಅವತರಣಿಕೆಯಲ್ಲಿ ಉದಯ್ ಕಾಣಿಸಿಕೊಂಡಿದ್ದು ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಅವರಿಂದಾಗಿ. ಈಗ ಜಯಮ್ಮನ ಮಗ ಹಿಟ್ ಆದಮೇಲೆ ಉದಯ್‌ಗೆ ಪ್ರಮುಖ ಪಾತ್ರಗಳು ಸಿಗುತ್ತಿವೆ. 'ರಾಟೆ', 'ಅಂಬರೀಶ', 'ಡಾರ್ಲಿಂಗ್‌' ಮುಂತಾದ ಚಿತ್ರಗಳಲ್ಲಿ ಉದಯ್ ಮತ್ತೊಮ್ಮೆ ಖಳನಾಯಕನವಾಗಿ ಅಬ್ಬರಿಸಲು ತಯಾರಾಗಿದ್ದಾರೆ.  'ಇಷ್ಟು ವರ್ಷ ನಾನು ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಎನಿಸುತ್ತಿದೆ. ಜಯಮ್ಮನ ಮಗ ಚಿತ್ರ ನನಗೆ ಹೆಸರು ತಂದುಕೊಟ್ಟಿದೆ. ಆದರೆ ಇದೆಲ್ಲದಕ್ಕೂ ಆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಮತ್ತು ದುನಿಯಾ ವಿಜಿ ಅವರ ಪ್ರೀತಿ ಕಾರಣ. ವಿಜಿಯವರಿಗೆ ನಾನು ಬದುಕಿರುವವರೆಗೂ ಋಣಿಯಾಗಿರುತ್ತೇನೆ. ಅವರು ನನ್ನನ್ನು ಬೆಳೆಸದಿದ್ದರೆ ನಾನು ಈ ಮಟ್ಟಕ್ಕೆ ಬರುವುದು ಸಾಧ್ಯವೇ ಇರಲಿಲ್ಲ' ಎಂಬುದು ರಾಘವ್ ಉದಯ್ ಹೃದಯಪೂರ್ವಕವಾಗಿ ಹೇಳುವ ಮಾತು.

- ಹರಿ
- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.