ಸಿನಿಮಾ ಲೇಖನ

ಅಣ್ಣನ ರೀತಿ, ಸಚಿವರ ಸಿನಿಮಾ ಪ್ರೀತಿ

ಅಣ್ಣನ ರೀತಿ, ಸಚಿವರ ಸಿನಿಮಾ ಪ್ರೀತಿ
Published On :

ಒಂದು ಕಾಲದಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೇ ಹೆಚ್ಚು ಬಂದವು. ಈಗಿನ ಹೊಸ ಅಲೆಯಲ್ಲಿ ಅಂಥ ಚಿತ್ರಗಳು ಕಡಿಮೆಯಾಗಿದ್ದರೂ, ಅಪರೂಪಕ್ಕೆ ಆಗೀಗ ಅಂಥ ಸಿನಿಮಾಗಳು ಬರುತ್ತಿವೆ. 'ಮಹಾಶರಣ ಹರಳಯ್ಯ' ಚಿತ್ರವೇ ಅದಕ್ಕೆ ಸಾಕ್ಷಿ. ನಟ ರಮೇಶ್ ಅರವಿಂದ್ ಬಸವಣ್ಣರಾಗಿ, ಶ್ರೀಧರ್ ಹರಳಯ್ಯನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ನಿರ್ದೇಶಕರು ಬಿ.ಎ. ಪುರುಷೋತ್ತಮ್.

ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ನಡೆಯಿತು. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿದ್ದರು. 'ಈಗಿನ ಕಾಲದಲ್ಲೂ ಇಂಥ ಪೌರಾಣಿಕ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಿರುವುದು ಒಳ್ಳೆಯದು. ಸಮಾಜಕ್ಕೆ ಸಂದೇಶ ನೀಡುವಂಥ ಚಿತ್ರ ಮಾಡಿದ ಈ ಚಿತ್ರಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ಕೊಡಿಸುತ್ತೇನೆ' ಎಂದು ಸಚಿವರು ಭರವಸೆ ನೀಡಿದರು. ಕಾರ್ಯಕ್ರಮದ ಮುಗಿಯುವವರೆಗೂ ಇರುವ ಮೂಲಕ ತಮ್ಮ ಸಿನಿಮಾ ಪ್ರೀತಿಯನ್ನು ತೋರಿಸಿಕೊಂಡ ಆಂಜನೇಯ,  ಸಿನಿಮಾ ಅಭಿರುಚಿ, ಕೆಟ್ಟ ಚಿತ್ರಗಳಿಗೆ ಸಹಾಯಧನ ನೀಡದಿರುವುದರ ಬಗ್ಗೆ, ತಾವು ನಟನಾಗಲು ಸಾಹಸ ಮಾಡಿದ್ದರ ಕುರಿತು ಹೇಳಿಕೊಂಡರು.

ವಿಶೇಷ ಅಂದರೆ ಈ ಚಿತ್ರದ ವಿತರಣೆ ಹಕ್ಕುಗಳನ್ನು ಹರಳಯ್ಯ ಸಮಾಜ ಟ್ರಸ್ಟ್‌ನ ಧರ್ಮದರ್ಶಿ ಸದಾನಂದ ಬಿ. ತೇರದಾಳ ರು. 1.5 ಕೋಟಿಗೆ ತೆಗೆದುಕೊಂಡಿದ್ದಾರೆ. ಇಂಥ ಸಿನಿಮಾಗಳು ಅದ್ಭುತ ಪ್ರದರ್ಶನ ಕಾಣುತ್ತವೆ ಎಂಬುದಕ್ಕೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಉತ್ತಮ ನಿದರ್ಶನ ಎಂಬುದು ನಿರ್ದೇಶಕರ ಮಾತು.  ಮುಂದಿನ ವರ್ಷಾರಂಭದಲ್ಲಿ ಅಂದರೆ ಜನವರಿ ಮೊದಲ ವಾರ ಚಿತ್ರ ಬಿಡುಗಡೆಯಾಗಲಿದೆ. ದೇವರಾಜ್, ರವಿಚಂದ್ರನ್, ವೆಂಕಟೇಶ್ ಚಿತ್ರದ ನಿರ್ಮಾಪಕರು. ಗೌರಿವೆಂಕಟೇಶ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. 'ಒಂದು ಚಿತ್ರ ನೋಡುಗರನ್ನು ಸೆಳೆಯುವುದಕ್ಕೆ ಬೇಕಾದ ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ಹರಳಯ್ಯನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ' ಎಂದು ನಟ ರಮೇಶ್ ಅರವಿಂದ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.