ಸಿನಿಮಾ ಲೇಖನ

ಯಾರ್ದೋ ಸಿನಿಮಾ, ಎಲ್ಲಮ್ಮನ ಜಾತ್ರೆ

Published On :

ಬೆಂಗಳೂರಿನಂಥ ಮಹಾನಗರದಲ್ಲಿ ಬಹಳ ದಿನ ನಿಮ್ಮ ನಿವೇಶನವನ್ನು ಖಾಲಿ ಬಿಟ್ಟರೆ ನಿಮಗೇ ಅರಿವಿಲ್ಲದಂತೆ ಅಲ್ಲಿ ಬೇರೆ ಯಾರೋ ಮನೆಕಟ್ಟಿಕೊಳ್ಳಬಹುದು. ಇದೂ ಕೂಡ ಅದೇ ರೀತಿಯ ಕಥೆ. ಆದರೆ ಇದು ಗಾಂಧಿನಗರಕ್ಕೆ ಸಂಬಂಧಪಟ್ಟಿದ್ದು. ತಮ್ಮ ಚಿತ್ರದ ಸ್ಯಾಟಲೈಟ್ ಪ್ರಸಾರದ ಹಕ್ಕುಗಳನ್ನು ಯಾವ ಟಿವಿ ವಾಹಿನಿಗೂ ಮಾರದೇ ಇದ್ದರೂ, ನಿರ್ಮಾಪಕ ಕೃಷ್ಣರಾಜು ಅವರ ನಿರ್ಮಾಣದ ಹಲವು  ಚಿತ್ರಗಳು ಟಿವಿ ವಾಹಿನಿಗಳಲ್ಲಿ ರಾಜಾರೋಷವಾಗಿ ಪ್ರಸಾರವಾಗುತ್ತಿವೆ. ಇದು ತಡವಾಗಿ ಕೃಷ್ಣರಾಜು ಅವರ ಗಮನಕ್ಕೆ ಬಂದಿದೆ. ಹಾಗಾಗಿ  ಈ ವಿಷಯದಲ್ಲಿ ಕೃಷ್ಣರಾಜು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಈಗ ಕೃಷ್ಣರಾಜು ನಿರ್ಮಾಣದ ಸಿ.ಬಿ.ಐ ಶಂಕರ್, ಎಸ್.ಪಿ.ಸಾಂಗ್ಲಿಯಾನ ಭಾಗ 2, ಶಿವರಾಜ್, ಸಂಘರ್ಷ, ಶೃಂಗಾರರಾಜ ಮುಂತಾದ ಚಿತ್ರಗಳ ಪ್ರಸಾರವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸೆಪ್ಟೆಂಬರ್ 17ರಂದು ಕೇಸಿನ ವಿಚಾರಣೆ ನಡೆಯಲಿದೆ.

ಗಾಂಧಿನಗರದಲ್ಲಿ ಒಂದು ಎರಡು ಸಿನಿಮಾ ಮಾಡಿ ಮಾಯವಾದ ನಿರ್ಮಾಪಕರು ಅನೇಕ. ಹಾಗಾಗಿ ಅವರಿಗೆ ಸಿನಿಮಾ ವ್ಯಾಪಾರದ ಬಗ್ಗೆ ಏನೂ ಗೊತ್ತಿರುವುದಿಲ್ಲ. ಅಲ್ಲದೆ ಯಾವುದೋ ಕಾಲದಲ್ಲಿ ಸಿನಿಮಾ ಮಾಡಿ ಈಗ ಗಾಂಧಿನಗರಕ್ಕೆ ತಲೆಯೂ ಹಾಕದ ಹಲವು ಜನ ನಮ್ಮ ಲ್ಲಿದ್ದಾರೆ. ಹಾಗಾಗಿ ಅಂಥವರ  ಚಿತ್ರಗಳನ್ನು ಯಾರು ಬೇಕಾದರೂ ಬಳಸಿಕೊಳ್ಳುವಂಥ ಪರಿಸ್ಥಿತಿ ಉಂಟಾಗಿದೆ. ಆದರೆ ಕೃಷ್ಣರಾಜು ಅಂಥ  ಒಂದೆರಡು ಚಿತ್ರಗಳ ನಿರ್ಮಾಪಕರೇನೂ ಅಲ್ಲ. ಒಂದು ಕಾಲದಲ್ಲಿ ದೊಡ್ಡ ಸ್ಟಾರ್‌ಗಳ ಸಿನಿಮಾಗಳನ್ನು ಮಾಡಿ ಅದ್ಯಾವುದೋ ಕಹಿ  ಘಳಿಗೆಯಲ್ಲಿ ಆದ ಕೆಟ್ಟ ಅನುಭವದಿಂದ ಅವರು ಚಿತ್ರರಂಗದಿಂದ ದೂರವಾಗಿದ್ದಾರೆ. ಆದರೆ ಅವರ ಚಿತ್ರಗಳಿಗೆ ಟಿವಿ ವಾಹಿನಿಗಳಲ್ಲಿ ಜೀವ ಬಂದಿರುವುದು ಅವರಿಗೆ ಇತ್ತೀಚೆಗೆ ಗೊತ್ತಾಗಿದೆ. ಹಾಗಾಗಿ ತಕ್ಷಣವೇ ಕಾರ್ಯೋನ್ಮುಖರಾದ ಅವರು, ತಮ್ಮ ಚಿತ್ರಗಳನ್ನು ತಮ್ಮ ಅನುಮತಿ ಇಲ್ಲದೆ ಪ್ರದರ್ಶಿಸುತ್ತಿರುವ ಟಿವಿ ವಾಹಿನಿಯ ಮೇಲೆ ಕೇಸು ಹಾಕಿದ್ದಾರೆ.

ಕೋರ್ಟ್‌ನಲ್ಲಿ ವಿಚಾರಣೆ ನಡೆಯುವವರೆಗೆ ನನ್ನ ಚಿತ್ರಗಳನ್ನು ಪ್ರದರ್ಶಿಸದಂತೆ ತಡೆಯಾಜ್ಞೆ ಸಿಕ್ಕಿದೆ. ಆದರೆ ಇದು ಕೇವಲ ನನ್ನೊಬ್ಬನ ಸಮಸ್ಯೆ ಅಲ್ಲ. ಸಿನಿಮಾರಂಗದ ಬಗ್ಗೆ ಏನೂ ಗೊತ್ತಿಲ್ಲದೆ ಸಿನಿಮಾ ಮಾಡಿ ಈಗ ಚಿತ್ರರಂಗದಿಂದ ದೂರವಾಗಿರುವ ಅನೇಕ ನಿರ್ಮಾಪಕರ ಚಿತ್ರಗಳನ್ನು ಟಿವಿ ವಾಹಿನಿಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣದಿಂದ ಅಂಥ ಎಲ್ಲ ನಿರ್ಮಾಪಕರೂ ಎಚ್ಚೆತ್ತುಕೊಂಡು ತಮಗಾಗುತ್ತಿರುವ
ಅನ್ಯಾಯದ ವಿರುದ್ಧ ಪ್ರತಿಭಟಿಸುವಂತಾದರೆ ಸಾಕು ಎನ್ನುತ್ತಾರೆ ಕೃಷ್ಣರಾಜು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.