ಸಿನಿಮಾ ಲೇಖನ

ಏನ್ ಹುಡುಗರೋ ಇದ್ಯಾಕಿಂಗ್ ಆಡ್ತಾರೋ

ಇದೊಂಥರಾ ವಿಚಿತ್ರ. ಚಿತ್ರದ ಹೆಸರು 'ಬಾಯ್ಸ್‌'. ಆದರೆ ಚಿತ್ರದ ಪೋಸ್ಟರ್‌ಗಳಲ್ಲಿ, ಮುಹೂರ್ತದ ಸಮಾರಂಭದಲ್ಲಿ ಗರ್ಲ್ಸ್ ಕಾಣಿಸಿದ್ದೇ ಹೆಚ್ಚು. ಹೌದು ವಿಚಿತ್ರ ಇರಲೇಬೇಕು ...

ಏನ್ ಹುಡುಗರೋ ಇದ್ಯಾಕಿಂಗ್ ಆಡ್ತಾರೋ
Published On :

ಇದೊಂಥರಾ ವಿಚಿತ್ರ. ಚಿತ್ರದ ಹೆಸರು 'ಬಾಯ್ಸ್‌'. ಆದರೆ ಚಿತ್ರದ ಪೋಸ್ಟರ್‌ಗಳಲ್ಲಿ, ಮುಹೂರ್ತದ ಸಮಾರಂಭದಲ್ಲಿ ಗರ್ಲ್ಸ್ ಕಾಣಿಸಿದ್ದೇ  ಹೆಚ್ಚು. ಹೌದು ವಿಚಿತ್ರ ಇರಲೇಬೇಕು ಬಿಡಿ. ಏಕೆಂದರೆ ಇದು ಶಂಕರ್‌ಗೌಡ ನಿರ್ದೇಶನದ ಮೊದಲ ಚಿತ್ರ. ಚಿತ್ರದಲ್ಲಿ ಹೆಣ್ಣುಮಕ್ಕಳೇ ಜಾಸ್ತಿ ಎಂಬ ಕಾರಣಕ್ಕಲ್ಲದಿದ್ದರೂ,
ತಮ್ಮ ಆತ್ಮೀಯರು ಎಂಬ ಕಾರಣಕ್ಕೆ ಅಂದು ಮುಹೂರ್ತ ಸಮಾರಂಭಕ್ಕೆ ಸುದೀಪ್ ಅವರನ್ನು ಕರೆಸಿದ್ದರು  ಶಂಕರ್‌ಗೌಡ. ಅವರ ಜೊತೆಯಲ್ಲಿ ಬಾಯ್ಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮಾಲಾಶ್ರೀ ಮತ್ತು ಹುಡುಗಿಯರ ತಂಡ.  
ಸುಮಾರು ಒಂದೂವರೆ ವರ್ಷದಿಂದ ಈ ಚಿತ್ರಕಥೆಯನ್ನು ಸಿದ್ಧಪಡಿಸಿರುವ ಶಂಕರ್‌ಗೌಡ ಅವರ ಸ್ಕ್ರಿಪ್ಟ್ ನೋಡಿ ನಟ ಸುದೀಪ್ ಸಿನಿಮಾ ಮಾಡು ಎಂದು ಉತ್ತೇಜಿಸಿದ್ದರ ಫಲವಾಗಿ ಇಂದು ಶಂಕರ್‌ಗೌಡ ನಿರ್ದೇಶಕರಾಗಿದ್ದಾರೆ. ಹಾಗಾಗಿ ತಿರುಪತಿ ವೆಂಕಟೇಶ್ವರನ ಮೇಲೆ ಭಾರ ಹಾಕಿ, ತಮ್ಮ ತಲೆಗೂದಲಿನ ಭಾರ ಕಳೆದುಕೊಂಡು, ತಲೆಯ ಮೇಲೆ ನಿರ್ದೇಶಕರ ಕ್ಯಾಪ್ ಹಾಕಿಕೊಂಡಿದ್ದಾರೆ. ಹಾಗಾಗಿ  ಶಂಕರ್ ಗೌಡ ಅವರು ಈಗ ಕ್ಯಾಪ್‌ಮೋರೆ ಹಾಕಿಕೊಂಡಿದ್ದಾರೆ ಎನ್ನಬಹುದು.
ಮೊನ್ನೆ ಕಂಠೀರವ ಸ್ಟುಡಿಯೋದಲ್ಲಿ ಬಾಯ್ಸ್..ಬಿವೇರ್ ಆಫ್ ಗರ್ಲ್ಸ್ ಎನ್ನುವ ಈ ಚಿತ್ರಕ್ಕೆ ಸುದೀಪ್ ಕ್ಲಾಪ್ ಮಾಡಿ ಚಾಲನೆ  ನೀಡಿದರು. ಇದು ಸಾಮಾಜಿಕ ಕಾಳಜಿ ಇರುವ ನೈಜ ಘಟನೆಗಳನ್ನೊಳಗೊಂಡ ಚಿತ್ರ ಎನ್ನುವ ಶಂಕರ್‌ಗೌಡ ಚಿತ್ರಕ್ಕಾಗಿ ಬೆಂಗಳೂರು, ಗೋವಾ, ಮಂಗಳೂರು, ಬ್ಯಾಂಕಾಕ್‌ನಲ್ಲಿ ಒಟ್ಟು 75 ದಿನಗಳ ಚಿತ್ರೀಕರಣ ಮಾಡಲಿದ್ದಾರಂತೆ. ಬಾಯ್ಸ್ ಚಿತ್ರದಲ್ಲಿ ನಾಲ್ಕು ಜನ ಹುಡುಗಿಯರ ಜೊತೆ ಟಫ್ ಪೈತ್ರದಲ್ಲಿ ಮಾಲಾಶ್ರೀ ಕಾಣಿಸಿಕೊಳ್ಳುತ್ತಾರಂತೆ. ಅಖಿಲಾ ಕಿಶೋರ್, ಕಾಜಲ್, ಮಾಯಾ, ಮತ್ತಿಬ್ಬರು ಹೊಸ ಬೆಡಗಿಯರ ಜೊತೆ ಮನೋಜ್, ಡ್ಯಾನಿ, ರಾಜೀವ್, ಮಂಜು ಎಂಬ ನಾಲ್ಕು ಜನ ಹುಡುಗರೂ ಇದ್ದಾರೆ ಎಂಬುದು ಚಿತ್ರದ ತಾರಾಗಣದ ವಿವರ. ಇದೊಂದು ಫ್ಯಾಮಿಲಿ ಚಿತ್ರ. ಪ್ರತಿಯೊಂದು ಕುಟುಂಬವೂ ಈ ಚಿತ್ರ ನೋಡಬೇಕು ಎಂಬುದು ಮಾಲಾಶ್ರೀ ಅವರು ಹೇಳುವ ಬಾಯ್ಸ್ ಚಿತ್ರದ ಪ್ರವರ. ಉಳಿದಂತೆ ರಾಜೇಶ್ ಕಟ್ಟ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಬಾಯ್ಸ್ ಚಿತ್ರಕ್ಕಿದೆ.  

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.