ಬಾಲಿವುಡ್

ತಾಳ್ಮೆ ಕಳೆದುಕೊಂಡ ಶಾರುಖ್ ಖಾನ್; ಭಯಭೀತರಾದ ಸೈಫ್, ಪ್ರೀತಿ ಜಿಂಟಾ! ಹಳೆಯ Video ವೈರಲ್

ಇದರಲ್ಲಿ ಶಾರುಖ್ ಖಾನ್ ಅವರೊಂದಿಗೆ ಪ್ರೀತಿ ಜಿಂಟಾ, ಅರ್ಜುನ್ ರಾಂಪಾಲ್, ಪ್ರಿಯಾಂಕಾ ಚೋಪ್ರಾ ಮತ್ತು ರಾಣಿ ಮುಖರ್ಜಿ ಮತ್ತಿತರರು ಇದ್ದಾರೆ.

ತಾಳ್ಮೆ ಕಳೆದುಕೊಂಡ ಶಾರುಖ್ ಖಾನ್; ಭಯಭೀತರಾದ ಸೈಫ್, ಪ್ರೀತಿ ಜಿಂಟಾ! ಹಳೆಯ Video ವೈರಲ್
ಶಾರುಖ್ ಖಾನ್
Published On :

ಶಾರುಖ್ ಖಾನ್ ಅವರ ಹಲವು ಹಳೆಯ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ 2004ರ ಟೆಂಪ್ಟೇಶನ್ (Temptation Tour) ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದರಲ್ಲಿ ಶಾರುಖ್ ಖಾನ್ ಅವರೊಂದಿಗೆ ಪ್ರೀತಿ ಜಿಂಟಾ, ಅರ್ಜುನ್ ರಾಂಪಾಲ್, ಪ್ರಿಯಾಂಕಾ ಚೋಪ್ರಾ ಮತ್ತು ರಾಣಿ ಮುಖರ್ಜಿ ಮತ್ತಿತರರು ಇದ್ದಾರೆ. ಅತ್ಯಂತ ಜನಪ್ರಿಯವಾದ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆಯಲ್ಲಿ ತಂಡದೊಂದಿಗೆ ಶಾರುಖ್ ಖಾನ್ ಕೂಗಾಟ (ಫ್ರಾಂಕ್) ನಡೆಸಿರುವ ವಿಡಿಯೋ ಇದಾಗಿದೆ.

ಪ್ರದರ್ಶನ ಸಮಯದಲ್ಲಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ಶಾರುಖ್ ಖಾನ್ ಕೋಪಗೊಂಡಂತೆ ಕಾಣುತ್ತದೆ. ತಪ್ಪಾದ ಸಂದರ್ಭದಲ್ಲಿ ಯಾಕೆ "ಚೈಯ್ಯಾ ಚೈಯಾ" ಹಾಡು ಹಾಕಲಾಯಿತು. ಶೋ ವೇಳೆಯಲ್ಲಿ AV ಸೆಟಪ್ ಯಾಕೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿತು ಎಂದು ಪ್ರಶ್ನಿಸುತ್ತಾರೆ.

ಕಾಫಿ ಕಫ್ ಮತ್ತು ಸಿಗರೇಟನ್ನು ಕೈಯಲ್ಲಿ ಹಿಡಿದುಕೊಂಡಿರುವ ಶಾರುಖ್, ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇವೆ. AV ಕೂಡಾ ತಪ್ಪಾಗಿ ಹೋಯಿತು. ನನಗೆ ಅವಮಾನವಾಗಿದೆ. ಏನಿದು ನಾನ್ ಸೆನ್ಸ್ ಶೋ ಎಂದು ಕೂಗಾಡುತ್ತಾರೆ. ಅಷ್ಟೇ ಅಲ್ಲದೇ ನಿಮಗೆ ಏನು ಪ್ರಜ್ಞೆ ಇರಲಿಲ್ಲವೇ? ಶೋ ಮಾಡುವಾಗ ಕುಡಿದಿದ್ರಾ? ಏನಿದು ಅಂತಾ ಪ್ರಶ್ನಿಸುತ್ತಾರೆ.

ತಾಂತ್ರಿಕ ಸಮಸ್ಯೆಯಿಂದಾಗಿ ಹೀಗೆ ಆಯಿತು ಅಂತಾ ತಂಡ ಹೇಳಲು ಪ್ರಯತ್ನಿಸುತ್ತದೆ. ಆದರೆ ಅವರು ಮಾತನಾಡಲು ಬಿಡದ ಶಾರುಖ್ ಖಾನ್, ತಾಂತ್ರಿಕ ವಿಷಯಗಳು... ಇದು ಹತ್ತನೇ ಕಾರ್ಯಕ್ರಮ, ಇದು ಮೊದಲ ಕಾರ್ಯಕ್ರಮವಲ್ಲ ಅಂತಾ ರೇಗಾಡುತ್ತಾರೆ. ಸೈಫ್ ಅಲಿಖಾನ್ ಹಾಗೂ ಅರ್ಜುನ್ ರಾಂಪಲ್ ಇದರಲ್ಲಿ ಸೇರುತ್ತಾರೆ.

ಕೆಲವು ನಿಮಿಷಗಳ ವರೆಗೂ ಸ್ಟಾರ್ ಗಳು ನಿಜವಾಗಿಯೂ ಕೋಪಗೊಂಡಿದ್ದಾರೆ ಅಂತ ಇಡೀ ತಂಡ ಅಂದುಕೊಂಡಿರುತ್ತೆ. ಆದರೆ ಕೊನೆಗೆ ಶಾರುಖ್ ಖಾನ್ ನಗು ನಗುತ್ತಾ ಇದು ಫ್ರಾಂಕ್ ಎಂದು ಬಹಿರಂಗಪಡಿಸತ್ತಾರೆ. ನಂತರ ಎಲ್ಲರೂ ಖುಷಿಯಿಂದ ತಬ್ಬಿಕೊಳ್ಳುತ್ತಾರೆ. ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಶಾರುಖ್ ಖಾನ್ ವ್ಯಕ್ತಿತ್ವವನ್ನು ಗುಣಗಾನ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.