ನಾನು ಪಾಕಿಸ್ತಾನಿ ಅಲ್ಲ, ಭಯೋತ್ಪಾದಕನಂತೂ ಅಲ್ಲವೇ ಅಲ್ಲ: 'ಧುರಂಧರ್ 2' ಚಿತ್ರದ ನಟ ವಿವೇಕ್ ಸಿನ್ಹಾ
ಧುರಂಧರ್ನಲ್ಲಿ ಜಹೂರ್ ಮಿಸ್ತ್ರಿ ಪಾತ್ರವನ್ನು ನಟ ವಿವೇಕ್ ಸಿನ್ಹಾ ನಿರ್ವಹಿಸಿದ್ದು, ನಿಜವಾಗಿಯೂ ಇವರೇ ಕುಖ್ಯಾತ ಭಯೋತ್ಪಾದಕ ಎನಿಸುವಷ್ಟು ಪ್ರಭಾವಶಾಲಿಯಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ.
ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಧುರಂಧರ್ 2' ಚಿತ್ರವು ಮಾರ್ಚ್ 19ರಂದು ದೇಶದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈ ಬೆನ್ನಲ್ಲೇ ಚಿತ್ರದಲ್ಲಿ ನಟಿಸಿರುವ ನಟನನ್ನು ಕೆಲವು ಆನ್ಲೈನ್ ಬಳಕೆದಾರರು ಗುರಿಯಾಗಿಸಿಕೊಂಡಿದ್ದಾರೆ. 'ಹಿಂದೂಗಳು ಹೇಡಿಗಳು. ನಾವು ಅವರ ನೆರೆಹೊರೆಯಲ್ಲಿ ವಾಸಿಸುತ್ತಿದ್ದೇವೆ, ಉತ್ತಮ ಬಲವನ್ನು ಬಳಸಿ ಮತ್ತು ಅವರನ್ನು ನಾಶ ಮಾಡುತ್ತೇವೆ' ಎಂದು ಧುರಂಧರ್ ಚಿತ್ರದಲ್ಲಿನ ಕಂದಹಾರ್ ಅಪಹರಣಕಾರ ಜಹೂರ್ ಮಿಸ್ತ್ರಿ ಈ ಡೈಲಾಗ್ಗಳನ್ನು ಹೇಳುವುದನ್ನು ಕೇಳಿದಾಗ ಕೆಲವು ಭಾರತೀಯರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.
ಧುರಂಧರ್ನಲ್ಲಿ ಜಹೂರ್ ಮಿಸ್ತ್ರಿ ಪಾತ್ರವನ್ನು ನಟ ವಿವೇಕ್ ಸಿನ್ಹಾ ನಿರ್ವಹಿಸಿದ್ದು, ನಿಜವಾಗಿಯೂ ಇವರೇ ಕುಖ್ಯಾತ ಭಯೋತ್ಪಾದಕ ಎನಿಸುವಷ್ಟು ಪ್ರಭಾವಶಾಲಿಯಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ. ಇದೇ ಕಾರಣಕ್ಕೆ ಅನೇಕರು ಅವರನ್ನು ಆನ್ಲೈನ್ನಲ್ಲಿ ಗುರಿಯಾಗಿಸಲು ಪ್ರಾರಂಭಿಸಿದ್ದಾರೆ. 'ಧುರಂಧರ್ 2' ಚಿತ್ರದ ಟ್ರೈಲರ್ 1999ರ IC814 ಕಂದಹಾರ್ ಹೈಜಾಕ್ನ ದುಃಸ್ವಪ್ನವನ್ನು ಮರಳಿ ತಂದ ನಂತರ ಈ ದಾಳಿಗಳು ತೀವ್ರಗೊಂಡಿವೆ. ಈಗಾಗಲೇ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಧುರಂಧರ್ ಚಿತ್ರದ ಸೀಕ್ವೆಲ್ನ ಟ್ರೇಲರ್ ಜಹೂರ್ ಮಿಸ್ತ್ರಿ ಭಾರತೀಯ ಅಧಿಕಾರಿಗಳಿಗೆ ಸವಾಲೆಸೆಯುವಲ್ಲಿನಿಂದ ಪ್ರಾರಂಭವಾಗುತ್ತದೆ.
ಅಭಿಮಾನಿಗಳು ತಮ್ಮನ್ನು ಈ ರೀತಿ ಗುರಿಯಾಗಿಸಿಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ವಿವೇಕ್ ಸಿನ್ಹಾ, ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, ಅದೆಂಥ ಸಿಟ್ಟು, ಎಷ್ಟೊಂದು ಕಾಮೆಂಟ್ಗಳು. ಪ್ರತಿ ಕಾಮೆಂಟ್ ಏನು ಹೇಳುತ್ತದೆ ಎಂದು ನಿಮಗೆ ತಿಳಿದಿದೆಯೇ? 'ನೀನು ಭಯೋತ್ಪಾದಕನಂತೆ ಕಾಣುತ್ತೀಯ', 'ನಿನ್ನನ್ನು ಪರದೆಯಲ್ಲಿಯೇ ಥಳಿಸಬೇಕೆಂದು ಅನಿಸುತ್ತಿದೆ', 'ನಮ್ಮನ್ನು ಕೆರಳಿಸಿರುವೆ'... ನಿನಗೆ ನಾನು ತಕ್ಕ ಪಾಠ ಕಲಿಸುತ್ತೇನೆ ಎಂದೆಲ್ಲ ನನಗೆ ಹೇಳಿದ್ದಾರೆ. ಈ ದೇಶಪ್ರೇಮಕ್ಕೆ ನಾನು ವಂದಿಸುತ್ತೇನೆ. 'ನಾನು ಪಾಕಿಸ್ತಾನಕ್ಕೆ ಬರುತ್ತೇನೆ ಮತ್ತು ನಿಮಗೆ ಹೊಡೆಯುತ್ತೇನೆ' ಎಂದಿದ್ದಾರೆ ಎಂದು ನಟ ಹೇಳಿದ್ದಾರೆ.
ಬಳಿಕ ವಿವೇಕ್ ಸಿನ್ಹಾ, ತಾನು ಪಾಕಿಸ್ತಾನಿ ಅಲ್ಲ ಎಂದು ಪರಿಚಯಿಸಿಕೊಂಡಿದ್ದಾರೆ.
'ಭಾಯ್, ನಾನು ಪಾಕಿಸ್ತಾನದವನಲ್ಲ, ಬದಲಿಗೆ ನಾನು ಬಿಜ್ನೋರ್ನವನು. ಧಾಮ್ಪುರ ನನ್ನ ಊರು ಮತ್ತು ನಾನು ಮುಂಬೈನಲ್ಲಿ ವಾಸಿಸುತ್ತಿದ್ದೇನೆ. ನಿಮ್ಮಲ್ಲಿ ಒಬ್ಬರು, 'ಸರ್ ನೀವು ಚಿತ್ರದಲ್ಲಿ ಇಷ್ಟು ಉತ್ತಮವಾಗಿ ಪಾತ್ರವನ್ನು ಮಾಡಿದ್ದರಿಂದ ನಿಮ್ಮನ್ನು ನಿಂದಿಸಬೇಕೆಂದು ನನಗೆ ಅನಿಸುತ್ತಿದೆ' ಎಂದಿದ್ದೀರಿ. ನೀವೂ ನನ್ನನ್ನು ನಿಂದಿಸಬಹುದು. ಅದರಿಂದ ನನಗೆ ತುಂಬಾ ಪ್ರೀತಿ ಸಿಗುತ್ತಿದೆ' ಎಂದು ನಟ ಹೇಳಿದ್ದಾರೆ.
ಕೊನೆಯಲ್ಲಿ, ವಿವೇಕ್ ಸಿನ್ಹಾ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಧುರಂಧರ್ 2 ಚಿತ್ರವನ್ನು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.
'ನನ್ನ ಹೆಸರು ವಿವೇಕ್ ಸಿನ್ಹಾ (ಮತ್ತು) ನಾನು ಭಯೋತ್ಪಾದಕನಲ್ಲ' ಎಂದು ನಟ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಶಾರುಖ್ ಖಾನ್ ಅಭಿನಯದ ಮೈ ನೇಮ್ ಈಸ್ ಖಾನ್ (2010) ಚಿತ್ರದ ಜನಪ್ರಿಯ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ.
ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧಾರ್ ನಿರ್ದೇಶನದ ಧುರಂಧರ್ 2 ಈಗಾಗಲೇ ಮುಂಗಡ ಬುಕಿಂಗ್ನಲ್ಲಿ ₹130 ಕೋಟಿ ಗಳಿಸಿದೆ. ಸ್ಪೈ ಆ್ಯಕ್ಷನ್ ಥ್ರಿಲ್ಲರ್ನ ಪೇಯ್ಡ್ ಪ್ರೀವ್ಯೂಗಳು ನಾಳೆ ಮಾರ್ಚ್ 18 ರಂದು ಪ್ರಾರಂಭವಾಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


