ಬಾಲಿವುಡ್

ಕಾಂತಾರಾ ಅಪಹಾಸ್ಯ ಪ್ರಕರಣ: ನಟ Ranveer Singh ಗೆ ಬಿಗ್ ರಿಲೀಫ್; ಮಾರ್ಚ್ 9 ರವರೆಗೂ 'ಬಲವಂತದ ಕ್ರಮ ಇಲ್ಲ'!

ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದ್ದು, ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9 ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

ಕಾಂತಾರಾ ಅಪಹಾಸ್ಯ ಪ್ರಕರಣ: ನಟ Ranveer Singh ಗೆ ಬಿಗ್ ರಿಲೀಫ್; ಮಾರ್ಚ್ 9 ರವರೆಗೂ 'ಬಲವಂತದ ಕ್ರಮ ಇಲ್ಲ'!
ನಟ ರಣವೀರ್ ಸಿಂಗ್
Published On :

ಬೆಂಗಳೂರು: ನಟಿ ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಚಿತ್ರದ ಕುರಿತು ತುಂಬಿದ ವೇದಿಕೆಯಲ್ಲೇ ಅಪಹಾಸ್ಯ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಕರ್ನಾಟಕ ಹೈಕೋರ್ಟ್ ನಿಂದ್ ದೊಡ್ಡ ರಿಲೀಫ್ ಸಿಕ್ಕಿದೆ.

ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದ್ದು, ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9 ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

ಗೋವಾದಲ್ಲಿ ಸಿನಿಮಾ ಫೆಸ್ಟಿವಲ್ ವೇಳೆ ಕಾಂತಾರ ಸಿನಿಮಾ ಕುರಿತು ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪವಿತ್ತು. ನಟ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ದೈವವನ್ನು ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನೀಡಿದ್ದ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ.

ಇಂಗ್ಲೆಂಡ್ ನಲ್ಲೇ ಉಳಿದಿರುವ ನಟನ ಪರ ವಕೀಲರು

ಇರಾನ್- ಇಸ್ರೇಲ್ ಯುದ್ಧದಿಂದಾಗಿ ರಣವೀರ್ ಸಿಂಗ್ ಪರ ವಕೀಲರು ಇಂಗ್ಲೆಂಡ್‌ನಲ್ಲೇ ಉಳಿದಿದ್ದಾರೆ. ವಿಮಾನವಿಲ್ಲದೇ ಭಾರತಕ್ಕೆ ವಾಪಸಾಗುತ್ತಿಲ್ಲವೆಂದು ಸಜನ್ ಪೂವಯ್ಯ ಹೇಳಿದ್ದಾರೆ. ‘ರಣವೀರ್ ಸಿಂಗ್‌ಗೆ ನೋಟಿಸ್ ನೀಡಿದ್ದೇವೆ, ಸಮಯ ಕೇಳಿದ್ದಾರೆ’ ಎಂದು ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ವಾದ ಮಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.