'ಡಾನ್ 3' ಚಿತ್ರದ ವಿವಾದದ ನಡುವೆ ₹6.36 ಕೋಟಿ ಮೌಲ್ಯದ ಐಷಾರಾಮಿ ಫೆರಾರಿ ಕಾರು ಖರೀದಿಸಿದ ರಣವೀರ್ ಸಿಂಗ್!
ರಣವೀರ್ ಸಿಂಗ್ ಅವರ ಬಳಿ ಈಗಾಗಲೇ ಸಾಕಷ್ಟು ಕಾರುಗಳಿದ್ದು, ಫೆರಾರಿ 296 GTB ಸೇರ್ಪಡೆಯು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಹೊಸ ಐಷಾರಾಮಿ ಫೆರಾರಿ ಕಾರು ಖರೀದಿಸುವ ಮೂಲಕ ಬಾಲಿವುಟ್ ನಟ ರಣವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಮವಾರ, ಮುಂಬೈ ಬೀದಿಗಳಲ್ಲಿ ನಟ ಹೊಸ ಫೆರಾರಿ ಕಾರನ್ನು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗಳು ಹರಿದಾಡಲು ಪ್ರಾರಂಭಿಸಿವೆ.
ವರದಿಗಳ ಪ್ರಕಾರ, ಈ ಕಾರು ಫೆರಾರಿ 296 GTB ಆಗಿದ್ದು, ಇದರ ಮೌಲ್ಯ ಸುಮಾರು ₹6.36 ಕೋಟಿ ಎನ್ನಲಾಗಿದೆ.
ರಣವೀರ್ ಸಿಂಗ್ ಅವರ ಬಳಿ ಈಗಾಗಲೇ ಸಾಕಷ್ಟು ಕಾರುಗಳಿದ್ದು, ಫೆರಾರಿ 296 GTB ಸೇರ್ಪಡೆಯು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಕಾರಿನ ಬೆಲೆ ಆನ್ಲೈನ್ನಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಅಭಿಮಾನಿಗಳು ಈ ವಾಹನವು ಮುಂಬೈನಲ್ಲಿರುವ ಹಲವಾರು ಐಷಾರಾಮಿ ಮನೆಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ ಎಂದು ಗಮನಿಸಿದ್ದಾರೆ.
ಡಾನ್ 3 ಚಿತ್ರದ ಸುತ್ತ ನಡೆಯುತ್ತಿರುವ ಚರ್ಚೆಗಳ ಮಧ್ಯೆ ಹೊಸ ಕಾರು ಖರೀದಿ ಸುದ್ದಿಯಾಗಿದೆ.
'ಡಾನ್ 3' ಚಿತ್ರದಿಂದ ಕೊನೆಯ ಕ್ಷಣದಲ್ಲಿ ನಿರ್ಗಮಿಸಿದ್ದಕ್ಕಾಗಿ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ರಣವೀರ್ ಸಿಂಗ್ ವಿರುದ್ಧ ನಾನ್-ಕೋಆಪರೇಟಿವ್ ಡೈರೆಕ್ಟೀವ್ ಹೊರಡಿಸಿ, ಆಕ್ರೋಶ ವ್ಯಕ್ತಪಡಿಸಿದೆ. ನಿರ್ಮಾಪಕ ಫರ್ಹಾನ್ ಅಖ್ತರ್ ನಟನ ವಿರುದ್ಧ ₹45 ಕೋಟಿ ನಷ್ಟವನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ನಂತರ ರಣವೀರ್ ಅವರಿಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ. ರಣವೀರ್ ಸಿಂಗ್ ಮಾಧ್ಯಮಗಳೊಂದಿಗೆ ನೇರವಾಗಿ ಮಾತನಾಡಿಲ್ಲ. ಆದರೆ, ತಮ್ಮ ವಕ್ತಾರರ ಮೂಲಕ 'ಮೌನವನ್ನು ಪಾಲಿಸುತ್ತೇನೆ' ಎಂದು ಹೇಳಿಕೆ ನೀಡಿದ್ದಾರೆ.
ಈ ವಿವಾದವನ್ನು ಈಗ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (IMPAA) ಪರಿಶೀಲಿಸುವ ನಿರೀಕ್ಷೆಯಿದೆ.
ರಣವೀರ್ ಸಿಂಗ್ ಕೊನೆಯ ಬಾರಿಗೆ 'ಧುರಂಧರ್: ದಿ ರಿವೆಂಜ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಹಲವು ದಾಖಲೆಗಳನ್ನು ಬರೆದಿದ್ದು, ₹3,000 ಕೋಟಿ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



