ಬೇರೆ ದಾರಿಯೇ ಇರಲಿಲ್ಲ, ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳು: ನಟಿ ಶಿಲ್ಪಾ ಶಿಂದೆ ಸ್ಫೋಟಕ ಹೇಳಿಕೆ! Video
ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸುಳ್ಳಾಗಿತ್ತು. ಆದರೆ ಅಂದು ನನ್ನ ಬಳಿ ಬೇರೆ ಗಾರಿಯೇ ಇರಲಿಲ್ಲ ಎಂದು ಭಾಭೀಜಿ ಘರ್ ಪರ್ ಹೈ ನಟಿ ಹೇಳಿದ್ದಾರೆ.

ಮುಂಬೈ: ಈಗ್ಗೆ 6 ವರ್ಷಗಳ ಹಿಂದೆ ಬಾಲಿವುಡ್ ರಂಗದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ನಟಿ ಶಿಲ್ಪಾ ಶಿಂದೆ (Actress Shilpa Shinde) ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ನಟಿ ಶಿಲ್ಪಾ ಶಿಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸುಳ್ಳಾಗಿತ್ತು. ಆದರೆ ಅಂದು ನನ್ನ ಬಳಿ ಬೇರೆ ಗಾರಿಯೇ ಇರಲಿಲ್ಲ ಎಂದು ಭಾಭೀಜಿ ಘರ್ ಪರ್ ಹೈ ನಟಿ ಹೇಳಿದ್ದಾರೆ.
ನಿರೂಪಕಿ ಭಾರ್ತಿ ಅವರ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಶಿಲ್ಪಾ ಶಿಂದೆ, 'ಭಾಭೀಜಿ ಘರ್ ಪರ್ ಹೈ' ಧಾರಾವಾಹಿ ನಿರ್ಮಾಪಕ ಸಂಜಯ್ ಕೊಹ್ಲಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸುಳ್ಳಾಗಿತ್ತು. ಅಂದು ನನ್ನ ಬಳಿ ಬೇರೆ ದಾರಿಯೇ ಇರಲಿಲ್ಲ" ಎಂದು ಹೇಳಿಕೊಂಡಿದ್ದಾರೆ.

3ನೇ ಮದುವೆಗೆ ರೆಡಿಯಾದ ಆಮಿರ್ ಖಾನ್! ಜುಲೈ 5 ರಂದು ಬೆಂಗಳೂರಿನ ಗೆಳತಿ ಜತೆ ನಿಖಾ; ಯಾರು ಈ ಗೌರಿ ಸ್ಪ್ರಾಟ್?
ಇಷ್ಟಕ್ಕೂ ಆಗಿದ್ದೇನು?
ಕಿರುತೆರೆಗೆ ಕಾಲಿಟ್ಟಿದ್ದ ನಟಿ ಶಿಲ್ಪಾ ಶಿಂದೆ ಅಭಿನಯದ 'ಭಾಭೀಜಿ ಘರ್ ಪರ್ ಹೈ' ಧಾರಾವಾಹಿ ಭಾರಿ ಜನಪ್ರಿಯತೆ ಗಳಿಸಿತ್ತು. ಅದರಲ್ಲೂ ಭಾಭಿಜಿ ಪಾತ್ರದಲ್ಲಿ ನಟಿ ಶಿಲ್ಪಾ ಶಿಂಡೆ ಅಭಿನಯ ಎಲ್ಲರಿಗೂ ಇಷ್ಟವಾಗಿತ್ತು.
ಧಾರಾವಾಹಿ ಯಶಸ್ವಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲೇ ನಟಿ ಶಿಲ್ಪಾ ಶಿಂದೆ ಧಾರಾವಾಹಿಯಿಂದ ದಿಢೀರ್ ಹೊರ ನಡೆದಿದ್ದರು. ಧಾರಾವಾಹಿಯ ನಿರ್ಮಾಪಕರೊಂದಿಗೆ ಉಂಟಾದ ಒಪ್ಪಂದದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶಿಲ್ಪಾ ಶಿಂದೆ ಕಾರ್ಯಕ್ರಮವನ್ನು ತೊರೆದಿದ್ದರು.
ಇದರಿಂದ ನಿರ್ಮಾಪಕರಿಗೆ ಭಾರಿ ಹಿನ್ನಡೆಯುಂಟಾಗಿ, ಭಾರಿ ನಷ್ಟಕೂಡ ಆಗಿತ್ತು. ಹೀಗಾಗಿ ನಿರ್ಮಾಪಕರು ಈ ಧಾರವಾಹಿಯಲ್ಲಿ ಭಾಬಿಜಿ ಪಾತ್ರಕ್ಕೆ ಬೇರೊಬ್ಬರನ್ನು ತಂದರೂ ಧಾರಾವಾಹಿ ಟಿಆರ್ ಪಿ ಮೇಲೇಳಲೇ ಇಲ್ಲ. ಇದರಿಂದಾಗಿ ಸಿಟ್ಟಿಗೆದ್ದ ನಿರ್ಮಾಪರ ಸಂಜಯ್ ಕೊಹ್ಲಿ ನಟಿ ಶಿಲ್ಪಾ ಶಿಂದೆ ವಿರುದ್ಧ ದೂರು ದಾಖಲಿಸಿದರು.
ಲೈಂಗಿಕ ಕಿರುಕುಳ ದೂರು ನೀಡಿದ ನಟಿ
ಅತ್ತ ನಿರ್ಮಾಪಕರು ನಟಿ ವಿರುದ್ಧ ದೂರು ನೀಡುತ್ತಲೇ ಈ ವಿಚಾರ ವ್ಯಾಪಕ ವೈರಲ್ ಆಗ ತೊಡಗಿತು. ಈ ವಿವಾದವು 2016-17ರಲ್ಲಿ ಆರಂಭವಾಗಿತ್ತು. ನಿರ್ಮಾಣ ತಂಡವು ತಮ್ಮನ್ನು ಮಾನಸಿಕವಾಗಿ ಕಿರುಕುಳ ನೀಡಿದೆ ಎಂದು ಆರೋಪಿಸಿದ್ದ ಅವರು, ನಿರ್ಮಾಪಕ ಸಂಜಯ್ ಕೊಹ್ಲಿ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.
ವರ್ಷಗಳ ಬಳಿಕ ಸತ್ಯಾಂಶ ಹೊರಕ್ಕೆ
ಇದೀಗ ಆ ಪ್ರಕರಣದ ಕುರಿತು ಮಾತನಾಡಿರುವ ಶಿಲ್ಪಾ, ತಮ್ಮನ್ನು ಚಿತ್ರರಂಗದಿಂದ ದೂರ ಮಾಡುವುದಾಗಿ ಹಾಗೂ ಕೆಲಸ ಸಿಗದಂತೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಆ ಸಂದರ್ಭದಲ್ಲಿ ತಾವು ಸಂಪೂರ್ಣವಾಗಿ ಏಕಾಂಗಿಯಾಗಿದ್ದೆ ಮತ್ತು ತೀವ್ರ ಒತ್ತಡದಲ್ಲಿದ್ದ ಕಾರಣದಿಂದಲೇ ಆ ರೀತಿಯ ದೂರು ದಾಖಲಿಸಬೇಕಾಯಿತು ಎಂದು ಹೇಳಿದ್ದಾರೆ. ಅದು ನಿಜವಾದ ಲೈಂಗಿಕ ಕಿರುಕುಳದ ಘಟನೆ ಅಲ್ಲ, ಬದಲಿಗೆ ಪರಿಸ್ಥಿತಿಯ ಒತ್ತಡದಿಂದ ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಶಿಲ್ಪಾಶಿಂಢೆ ಒಪ್ಪಿಕೊಂಡಿದ್ದಾರೆ.
ಪೂಜಾಬೇಡಿ, ಹೀನಾ ಖಾನ್ ಕಿಡಿ
ಶಿಲ್ಪಾ ಶಿಂದೆ ಅವರ ಈ ಹೇಳಿಕೆ ಕಿರುತೆರೆ ಹಾಗೂ ಮನರಂಜನಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಟಿ ಪೂಜಾ ಬೇಡಿ, ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳ ದುರುಪಯೋಗವು ನಿಜವಾದ ಸಂತ್ರಸ್ತೆಯರ ನ್ಯಾಯ ಹೋರಾಟಕ್ಕೆ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ ನಟಿ ಹಿನಾ ಖಾನ್, ಈ ಬೆಳವಣಿಗೆಯನ್ನು "ಅತ್ಯಂತ ನಾಚಿಕೆಗೇಡಿನ ಸಂಗತಿ" ಎಂದು ಬಣ್ಣಿಸಿ, ಈ ಪ್ರಕರಣದಲ್ಲಿ ನಿರ್ಮಾಪಕನೇ ನಿಜವಾದ ಸಂತ್ರಸ್ತ ಎಂದು ಹೇಳಿದ್ದಾರೆ.
ಆದರೆ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳಿಗೆ ಶಿಲ್ಪಾ ಶಿಂದೆ ಹೆಚ್ಚಿನ ಮಹತ್ವ ನೀಡಿಲ್ಲ. ಈ ವಿಚಾರದಲ್ಲಿ ಬರುತ್ತಿರುವ ಟೀಕೆಗಳು ತಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಶಿಲ್ಪಾ ಅವರ ಈ ಬಹಿರಂಗ ಒಪ್ಪಿಗೆಯು, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು, ಅವುಗಳ ಸತ್ಯಾಸತ್ಯತೆ ಪರಿಶೀಲನೆಯ ಅಗತ್ಯತೆ ಹಾಗೂ ನಿಜವಾದ ಸಂತ್ರಸ್ತೆಯರಿಗೆ ನ್ಯಾಯ ದೊರಕುವಂತೆ ಮಾಡುವ ಮಹತ್ವದ ಕುರಿತು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



