Amir Khan 3ನೇ ಮದುವೆ: ಆಮಿರ್ ಖಾನ್ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ? ಚರ್ಚೆಗೆ ಗ್ರಾಸವಾದ ಮಿಸ್ಟರ್ ಪರ್ಫೆಕ್ಟ್ ವಿವಾಹ!
ಹೌದು, ನಾವು ಈ ಬಾರಿ ವಧುವಿನ ಮೂಗುತಿ, ಸರ ಅಥವಾ ಕಿವಿಯೋಲೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ವರ ಧರಿಸಿದ್ದ ಭಾರವಾದ ಬೆಳ್ಳಿಯ ಕಾಲ್ಗೆಜ್ಜೆಯ ಬಗ್ಗೆ ಮಾತನಾಡುತ್ತಿದ್ದೇವೆ.

ಮುಂಬೈ: ಕೆಲವು ವರ್ಷಗಳ ಹಿಂದಷ್ಟೇ ಕಿರಣ್ ರಾವ್ ಅವರಿಗೆ ಡಿವೋರ್ಸ್ ಕೊಟ್ಟಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರು ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ.
ಜುಲೈ 5 ರಂದು ಭಾನುವಾರ ನಡೆದ ಖಾಸಗಿ ಸಮಾರಂಭದಲ್ಲಿ ಬೆಂಗಳೂರಿನ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ 61 ವರ್ಷದ ಬಾಲಿವುಡ್ ನಟ ಅಮಿರ್ ಖಾನ್ ಅವರು ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆ ಮುಂಬೈನ ತಮ್ಮ ನಿವಾಸದಲ್ಲಿಅತ್ಯಂತ ಸರಳ ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ಅಮಿರ್ ಖಾನ್ ಹಾಗೂ ಗೌರಿ ಅವರು ಧರಿಸಿದ್ದ ಸಾಂಪ್ರದಾಯಿಕ ಉಡುಪುಗಳು ಎಲ್ಲರ ಗಮನ ಸೆಳೆದವು.
ಈ ವೇಳೆ ನಿಜವಾಗಿಯೂ ಎದ್ದು ಕಾಣಿಸಿದ್ದು ಆಮಿರ್ ಖಾನ್ ಅವರು ಧರಿಸಿದ್ದ ಬೆಳ್ಳಿ ಕಾಲುಂಗುರ ಹಾಗೂ ಕಾಲ್ಗೆಜ್ಜೆ. ಹೌದು, ನಾವು ಈ ಬಾರಿ ವಧುವಿನ ಮೂಗುತಿ, ಸರ ಅಥವಾ ಕಿವಿಯೋಲೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ವರ ಧರಿಸಿದ್ದ ಭಾರವಾದ ಬೆಳ್ಳಿಯ ಕಾಲ್ಗೆಜ್ಜೆಯ ಬಗ್ಗೆ ಮಾತನಾಡುತ್ತಿದ್ದೇವೆ.
61 ವರ್ಷದ ವರ ಆಮಿರ್ ಖಾನ್, ತಮ್ಮ ಸಾಂಪ್ರದಾಯಿಕ ಧೋತಿ ಶೈಲಿಯನ್ನು ಈ ಮದುವೆಯಲ್ಲೂ ಮುಂದುವರಿಸಿದ್ದರು. ಕ್ಲಾಸಿಕ್ ಬಿಳಿ ಬಣ್ಣದ ಧೋತಿಯ ಜೊತೆಗೆ ಸರಳ ಕುರ್ತಾ ಧರಿಸಿದ್ದ ಅವರು, ಅದಕ್ಕೆ ಆಕರ್ಷಕ ಬ್ರೋಚ್ ಧರಿಸಿ ಮಿಂಚಿದರು. ಆದರೆ, ಈ ಎಲ್ಲದರ ನಡುವೆ ಅವರು ಕಾಲಿಗೆ ಧರಿಸಿದ್ದ ಬೆಳ್ಳಿಯ ಕಾಲುಂಗುರ ಅಥವಾ ಕಾಲಿನ ಸರವೇ ಇಡೀ ಮದುವೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮತ್ತೊಂದೆಡೆ ವಧು ಗೌರಿ ಸ್ಪ್ರ್ಯಾಟ್ ಹೆವಿ ಚೋಕರ್, ಸಾಂಪ್ರದಾಯಿಕ ಲೇಯರ್ಡ್ ನೆಕ್ಲೇಸ್ ಮತ್ತು ಅದಕ್ಕೆ ಹೊಂದುವ ಕಿವಿಯೋಲೆಗಳೊಂದಿಗೆ ಅತ್ಯಂತ ಸುಂದರವಾಗಿ ಕಂಗೊಳಿಸಿದರು. ಬೇಬಿ ಬ್ರೆತ್ ಹೂವುಗಳಿಂದ ಅಲಂಕರಿಸಲ್ಪಟ್ಟ ಜಡೆ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ಈ ಆಪ್ತ ವಿವಾಹ ಮಹೋತ್ಸವದಲ್ಲಿ ಕೇವಲ 150 ಕ್ಕೂ ಹೆಚ್ಚು ಗಣ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಸಂಭ್ರಮಕ್ಕೆ ಆಮೀರ್ ಖಾನ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಸಾಕ್ಷಿಯಾದರೆ, ಗೌರಿ ಅವರ ಪುತ್ರ ಕೂಡ ವಿವಾಹದ ವಿಧಿವಿಧಾನಗಳಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿದ್ದನು. ಚಿತ್ರರಂಗ, ರಾಜಕೀಯ ಮತ್ತು ಉದ್ಯಮ ರಂಗದ ಪ್ರಮುಖ ಗಣ್ಯರಾದ ಮುಕೇಶ್ ಅಂಬಾನಿ, ರಾಜ್ ಠಾಕ್ರೆ, ಅಶುತೋಷ್ ಗೋವಾರಿಕರ್ ಮತ್ತು ವೀರ್ ದಾಸ್ ಸೇರಿದಂತೆ ಹಲವರು ಈ ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಹರಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



