ಬಾಲಿವುಡ್

1 ಕೋಟಿ ರೂ ಸಾಲ ತೀರಿಸಲು 'ನನ್ನ ಆತ್ಮವನ್ನೇ ಮಾರಿಕೊಂಡೆ'; 'ಸಿ-ಗ್ರೇಡ್' ಸಿನಿಮಾದಲ್ಲೂ ಮಾಡ್ದೆ: ಜೀವನದ ಕರಾಳ ಅಧ್ಯಾಯ ಬಿಚ್ಚಿಟ್ಟ ನಟಿ ಸುಶ್ಮಿತಾ ಮುಖರ್ಜಿ!

ಅನೇಕ ಮೆಚ್ಚುಗೆ ಪಡೆದ ಸಿನಿಮಾಗಳು ಮತ್ತು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿರುವ ಇವರು, ತಮ್ಮ ಕುಟುಂಬದ ನಿರ್ಮಾಣ ಸಂಸ್ಥೆಯು 1 ಕೋಟಿ ರೂ. ಸಾಲದ ಹೊರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದಾಗ ನಂತರ ನನಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳಿದ್ದಾರೆ.

1 ಕೋಟಿ ರೂ ಸಾಲ ತೀರಿಸಲು 'ನನ್ನ ಆತ್ಮವನ್ನೇ ಮಾರಿಕೊಂಡೆ'; 'ಸಿ-ಗ್ರೇಡ್' ಸಿನಿಮಾದಲ್ಲೂ ಮಾಡ್ದೆ: ಜೀವನದ ಕರಾಳ ಅಧ್ಯಾಯ ಬಿಚ್ಚಿಟ್ಟ ನಟಿ ಸುಶ್ಮಿತಾ ಮುಖರ್ಜಿ!
ಬಾಲಿವುಡ್ ಹಿರಿಯ ನಟಿ ಸುಶ್ಮಿತಾ ಮುಖರ್ಜಿ
Published On :

ಹಿರಿಯ ಬಾಲಿವುಡ್ ನಟಿ ಸುಶ್ಮಿತಾ ಮುಖರ್ಜಿ ತಮ್ಮ ಜೀವನದ ಅತ್ಯಂತ ಕಠಿಣ ಹಂತವೊಂದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಣಕಾಸಿನ ತೊಂದರೆಯಿಂದ ತಮಗೆ ಇಷ್ಟವಿಲ್ಲದಿದ್ದರೂ 'ಸಿ-ಗ್ರೇಡ್' (ಕಳಪೆ ಮಟ್ಟದ) ಸಿನಿಮಾಗಳಲ್ಲಿ ನಟಿಸಬೇಕಾದ ಅನಿವಾರ್ಯತೆ ಎದುರಿಸಿದ್ದನ್ನು ಹೇಳಿಕೊಂಡಿದ್ದಾರೆ.

ಅನೇಕ ಮೆಚ್ಚುಗೆ ಪಡೆದ ಸಿನಿಮಾಗಳು ಮತ್ತು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿರುವ ಇವರು, ತಮ್ಮ ಕುಟುಂಬದ ನಿರ್ಮಾಣ ಸಂಸ್ಥೆಯು 1 ಕೋಟಿ ರೂ. ಸಾಲದ ಹೊರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದಾಗ ನಂತರ ನನಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳಿದ್ದಾರೆ.

ಐಎಎನ್‌ಎಸ್ (IANS) ಜೊತೆ ಮಾತನಾಡಿದ ಸುಶ್ಮಿತಾ, ತಮ್ಮ ಜೀವನದ ಆ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಈಗಲೂ ನೋವಿನ ಸಂಗತಿ ಎನ್ನುತ್ತಾರೆ. ಸಿ- ಗ್ರೇಡ್ ಸಿನಿಮಾ ಯಾಕೆ ಮಾಡಿದೆ ಎಂದು ಜನರು ಆಗಾಗ್ಗೆ ಕೇಳುತ್ತಾರೆ. ಮಹಿಳಾ ವಿರೋಧಿ ಮತ್ತು ಲಿಂಗಭೇದದ ಧೋರಣೆಯುಳ್ಳ 'ಸಿ-ಗ್ರೇಡ್' ಚಿತ್ರಗಳಲ್ಲಿ ನಟಿಸಿದ್ದನ್ನು ಹಿಂತಿರುಗಿ ನೋಡುವುದು ಮತ್ತು ನೆನಪಿಸಿಕೊಳ್ಳುವುದು ನನಗೆ ಬೇಸರವನ್ನುಂಟುಮಾಡುತ್ತದೆ. ಆದರೆ ನಾನು ಅನೇಕ ಉತ್ತಮ ಚಿತ್ರಗಳ ಭಾಗವೂ ಆಗಿದ್ದೇನೆ. ನಾನು ಎಂದಿಗೂ ಅಶ್ಲೀಲ (ಪಾರ್ನೋಗ್ರಫಿ) ಚಿತ್ರಗಳಲ್ಲಿ ಕೆಲಸ ಮಾಡಿಲ್ಲ. ಬೇರೆ ಆಯ್ಕೆ ಇಲ್ಲದ ಕಾರಣ ನಾನು ಕೆಲವು ಕಳಪೆ ನಿರ್ಧಾರಗಳನ್ನು ತೆಗೆದುಕೊಂಡಿದ್ದೆ ಅಷ್ಟೇ ಎಂದು ಅವರು ಹೇಳಿದರು.

ನಾನು ನನ್ನ ಆತ್ಮವನ್ನೇ ಮಾರಿಕೊಂಡೆ. ಆ ಸಿನಿಮಾಗಳಲ್ಲಿ ಮಾಡುವಾಗ ನಿಜವಾಗಿಯೂ ಖುಷಿ ಇರಲಿಲ್ಲ. ಆ ದಿನಗಳನ್ನು ನೆನಪಿಸಿಕೊಳ್ಳುವುದನ್ನೂ ನಾನು ಇಷ್ಟಪಡುವುದಿಲ್ಲ. ಆದರೆ ಅದು ಅನಿವಾರ್ಯವಾಗಿತ್ತು ಎಂದು ತಿಳಿಸಿದರು. ಸುಶ್ಮಿತಾ ಅವರು 'ಕಿಂಗ್ ಅಂಕಲ್', 'ಖಲ್ನಾಯಕ್', 'ಗೋಲ್ಮಾಲ್' ಮತ್ತು 'ದೋಸ್ತಾನಾ' ಸೇರಿದಂತೆ ಹಲವಾರು ಜನಪ್ರಿಯ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಶಾರುಖ್ ಖಾನ್, ಸಂಜಯ್ ದತ್, ಅಜಯ್ ದೇವಗನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತಹ ತಾರೆಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಎದುರಾಗಿದ್ದ ಹಣಕಾಸಿನ ತೊಂದರೆ ಬಗ್ಗೆ ವಿವರಿಸಿದ ಸುಶ್ಮಿತಾ, 2002ರಲ್ಲಿ ತಮ್ಮ ಪತಿಯೊಂದಿಗೆ ನಡೆಸುತ್ತಿದ್ದ 'ಪ್ರಯಾಸ್ ಪ್ರೊಡಕ್ಷನ್ಸ್' ಎಂಬ ನಿರ್ಮಾಣ ಸಂಸ್ಥೆಯು, ಉದ್ಯಮದಲ್ಲಿನ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ವಿಫಲವಾದ ನಂತರ ದಿವಾಳಿಯಾಯಿತು. ಇದರಿಂದಾಗಿ ಕುಟುಂಬವು 1 ಕೋಟಿ ರೂ. ಸಾಲದ ಹೊರೆಗೆ ಸಿಲುಕಿಕೊಂಡಿತು. ಸಾಲಗಾರರ ನಿತ್ಯ ಮನೆಗೆ ಬಂದು ಬೈಯಲು ಶುರು ಮಾಡಿದ್ದರು. ಆ ಸಂದರ್ಭದಲ್ಲಿ ಮಕ್ಕಳು ಇನ್ನೂ ಚಿಕ್ಕವರಾಗಿದ್ದರು. ಹೀಗಾಗಿ ಯಾವುದೇ ಪಾತ್ರ ಸಿಕ್ಕರೂ ಒಪ್ಪಿಕೊಂಡು ಮಾಡ್ದೆ. ಬಳಿಕ ಮೂರ್ನಾಲ್ಕು ವರ್ಷಗಳಲ್ಲಿ ಎಲ್ಲ ಸಾಲವನ್ನು ತೀರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.