ನಾನಿಲ್ಲದೆ ನೀನು 'ರಾಜಾ ಶಿವಾಜಿ' ಚಿತ್ರ ಮಾಡಲು ಹೇಗೆ ಸಾಧ್ಯ?: ರಿತೇಶ್ ದೇಶಮುಖ್ ಗೆ ಸಲ್ಮಾನ್ ಪ್ರಶ್ನೆ
‘ರಾಜಾ ಶಿವಾಜಿ’ ಎಂಬ ಚಿತ್ರವನ್ನು ಜಿಯೋ ಸ್ಟುಡಿಯೊಸ್ ಪ್ರಸ್ತುತಪಡಿಸಿದ್ದು, ಮುಂಬೈ ಫಿಲ್ಮ್ ಕಂಪನಿ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ಮತ್ತು ಜೆನೆಲಿಯಾ ದೇಶಮುಖ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಬಾಲಿವುಡ್ ನಟ ರಿತೇಶ್ ವಿಲಾಸ್ರಾವ್ ದೇಶ್ಮುಖ್ ‘ಶಿವಾಜಿ’ಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
‘ರಾಜಾ ಶಿವಾಜಿ’ ಎಂಬ ಚಿತ್ರವನ್ನು ಜಿಯೋ ಸ್ಟುಡಿಯೊಸ್ ಪ್ರಸ್ತುತಪಡಿಸಿದ್ದು, ಮುಂಬೈ ಫಿಲ್ಮ್ ಕಂಪನಿ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ಮತ್ತು ಜೆನೆಲಿಯಾ ದೇಶಮುಖ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ರಿತೇಶ್ ಅವರೇ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜಾ ಶಿವಾಜಿ ಚಿತ್ರಕ್ಕಾಗಿ, ರಿತೇಶ್ ಆರಂಭದಲ್ಲಿ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲಿಲ್ಲ ಎಂದು ಹೇಳಿದ್ದಾರೆ. ನಾನು ಈ ಚಿತ್ರದಲ್ಲಿ ಪಾತ್ರ ಮಾಡುವಂತೆ ಸಲ್ಮಾನ್ ಖಾನ್ ಅವರ ಬಳಿ ಹೋಗಿರಲಿಲ್ಲ, ಹೊಸ ವರ್ಷ ದಿನದಂದು ನಾವು ಒಟ್ಟಿಗೆ ಇದ್ದೆವು.
ಈ ವೇಳೆ ಸಿನಿಮಾದ ಚಿತ್ರೀಕರಣ ಪ್ರಾರಂಭಿಸುವ ಬಗ್ಗೆ ಅವರು ಕೇಳಿದರು. ನಾನು, 'ಇದು ಈ ತಿಂಗಳು ಪ್ರಾರಂಭವಾಗುತ್ತಿದೆ' ಎಂದು ಹೇಳಿದೆ. ಕೂಡಲೇ ಅವರು ಚಿತ್ರದಲ್ಲಿ ನನ್ನ ಪಾತ್ರವೇನು ಎಂದು ಪ್ರಶ್ನಿಸಿದರು.
ಆದರೆ ರಿತೇಶ್ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪಾತ್ರ ಮಾಡುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದಾಗ, "ಇಲ್ಲ, ಇಲ್ಲ, ಇಲ್ಲ... ನಾನಿಲ್ಲದೆ ನೀನು ಸಿನಿಮಾ ಮಾಡಲು ಸಾಧ್ಯವಿಲ್ಲ. ನಾನು ಅದರಲ್ಲಿ ಇರಬೇಕು ಎಂದು ಹೇಳಿದ್ದಾಗಿ ರಿತೇಶ್ ತಿಳಿಸಿದ್ದಾರೆ.
ಸಲ್ಮಾನ್ ಅವರ ಆ ಆತ್ಮೀಯತೆಯ ಭಾವನೆಗೆ ನಾನು ಮನಸೋತೆ.. ಆದರೆ ನಾನು ಇನ್ನೂ ಅದರ ಬಗ್ಗೆ ಯೋಚಿಸಿರಲಿಲ್ ಎಂದು ರಿತೇಶ್ ಹೇಳಿದ್ದಾರೆ. ಸಲ್ಮಾನ್ ಖಾನ್ ರಿತೇಶ್ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ನಾನು 'ಲಾಯ್ ಭಾರಿ' ಮಾಡಿದಾಗ, ಸಲ್ಮಾನ್ ಖಾನ್ ಅದರಲ್ಲಿದ್ದರು. ಆ ಸಮಯದಲ್ಲಿ, ಅವರು 'ನಾನು ಒಂದು ದೃಶ್ಯವನ್ನು ಮಾಡಲು ಬಯಸುತ್ತೇನೆ' ಎಂದು ಕೇಳಿದರು. ನಾನು ವೇದ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ನಾನು ಅವರಿಗೆ ಕರೆ ಮಾಡಿ, 'ಬ್ರದರ್, ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ' ಎಂದು ಹೇಳಿದೆ.
ಆಗ ಅವರು 'ಯಾವ ಪಾತ್ರಕ್ಕಾಗಿ? ನೀವು ಭೇಟಿಯಾಗಲು ಬಯಸುತ್ತೀರಿ ಎಂದು ಹೇಳಿದರು. ಅವರು, 'ಎಷ್ಟು ದಿನಗಳ ಚಿತ್ರೀಕರಣ?' ಎಂದು ಕೇಳಿದರು, ನಾನು, 'ಎರಡು ದಿನಗಳು' ಎಂದು ಹೇಳಿದೆ, ಮತ್ತು ಅವರು, 'ಆಯಿತು' ಎಂದು ಹೇಳಿದ್ದನ್ನು ರಿತೇಶ್ ಸಂದರ್ಶನದಲ್ಲಿ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


