'ಪಾಕಿಸ್ತಾನ ನಮ್ಮ ಉತ್ತಮ ನೆರೆಯ ದೇಶ, ಕಸಬ್ ಜಂಟಲ್ಮ್ಯಾನ್'? Dhurandhar ಸಮಯದಲ್ಲಿ ಏನಿದು ಹೊಸ ವಿವಾದ? Video
ಈಗ ನಮ್ಮ ದೇಶದಲ್ಲಿ ಚಿತ್ರಪ್ರೇಮಿಗಳೆಲ್ಲಾ ಮಾತನಾಡುತ್ತಿರುವ ವಿಷಯ Dhurandhar: The Revenge ಚಿತ್ರದ ಬಗ್ಗೆ. ಚಿತ್ರಪ್ರೇಮಿಗಳು ರಣವೀರ್ ಸಿಂಗ್ ನಾಯಕನಾಗಿ ಅಭಿನಯಿಸಿರುವ ಪಾಕಿಸ್ತಾನ ವಿರುದ್ಧದ ಕ್ರೂರ ಪ್ರತೀಕಾರದ ಕಥೆಯನ್ನು ಆಸ್ವಾದಿಸುತ್ತಿದ್ದಾರೆ.

ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ, ಡಿಜಿಟಲ್ ಪಾರದರ್ಶಕತೆಯ ನಡುವೆ, ಸೆಲೆಬ್ರಿಟಿಗಳು, ರಾಜಕಾರಣಿಗಳು ಆಡುವ ಮಾತುಗಳು, ನಡೆದುಕೊಳ್ಳುವ ರೀತಿ ಸುದ್ದಿಯಾಗುತ್ತದೆ, ಟ್ರೋಲ್ ಆಗುತ್ತವೆ. ಎಷ್ಟೋ ವರ್ಷಗಳ ಹಿಂದೆ ನೀಡಿದ ಹೇಳಿಕೆಗಳು ಇಂದು ವೈರಲ್ ಆಗಿ ಟ್ರೋಲ್ ಆಗುತ್ತವೆ. ಒಮ್ಮೆ ನೀಡಿದ ಹೇಳಿಕೆ ಶಾಶ್ವತವಾಗಿ ಉಳಿಯುತ್ತದೆ.
ಈಗ ನಮ್ಮ ದೇಶದಲ್ಲಿ ಚಿತ್ರಪ್ರೇಮಿಗಳೆಲ್ಲಾ ಮಾತನಾಡುತ್ತಿರುವ ವಿಷಯ Dhurandhar: The Revenge ಚಿತ್ರದ ಬಗ್ಗೆ. ಚಿತ್ರಪ್ರೇಮಿಗಳು ರಣವೀರ್ ಸಿಂಗ್ ನಾಯಕನಾಗಿ ಅಭಿನಯಿಸಿರುವ ಪಾಕಿಸ್ತಾನ ವಿರುದ್ಧದ ಕ್ರೂರ ಪ್ರತೀಕಾರದ ಕಥೆಯನ್ನು ಆಸ್ವಾದಿಸುತ್ತಿದ್ದಾರೆ. Dhurandhar 2 ವಿಶ್ವದಾದ್ಯಂತ 1400 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಈ ಸಂದರ್ಭದಲ್ಲಿ ಶಾರೂಕ್ ಖಾನ್ ಅವರ ಹಳೆಯ ವಿಡಿಯೊ ವೈರಲ್ ಆಗಿದ್ದು ಅದರಲ್ಲಿ ಅವರು ಹೇಳಿದ್ದ ಜಂಟಲ್ಮ್ಯಾನ್ ಎಂಬ ಒಂದು ಶಬ್ದವನ್ನಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.
ಶಾರುಖ್ ಖಾನ್ ಪಾಕಿಸ್ತಾನವನ್ನು ಹೊಗಳಿ ಭಯೋತ್ಪಾದಕ ಅಜ್ಮಲ್ ಕಸಬ್ ನನ್ನು ‘ಜಂಟಲ್ಮ್ಯಾನ್’ ಎಂದು ಕರೆದಿದ್ದು ಹಳೆಯ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಶಾರುಖ್ ಖಾನ್ ಪಾಕಿಸ್ತಾನವನ್ನು ಉತ್ತಮ ನೆರೆಯ ರಾಷ್ಟ್ರ ಎಂದರೇ?
2010ರ ಒಂದು ಸಂದರ್ಶನ ಕ್ಲಿಪ್ ನಲ್ಲಿ, ಶಾರುಖ್ ಖಾನ್ ಪಾಕಿಸ್ತಾನವನ್ನು ಹೊಗಳುತ್ತಾ, ಯುವಕರು ರಾಜಕೀಯ ಮತ್ತು ದ್ವೇಷದಾಚೆ ಯೋಚಿಸಬೇಕು ಎಂದು ಹೇಳಿದ್ದಾರೆ. ತಮ್ಮ ಕುಟುಂಬದ ಮೂಲ ಪಾಕಿಸ್ತಾನದಲ್ಲಿದೆ ಎಂದು ಹೇಳುತ್ತಾ, ಪಾಕಿಸ್ತಾನವನ್ನು “ಉತ್ತಮ ನೆರೆ ದೇಶ” ಎಂದು ಕರೆಯುತ್ತಾ, “ಎರಡೂ ಕಡೆಗೂ ತಮ್ಮದೇ ದೃಷ್ಟಿಕೋನ ಇದೆ. ರಾಜಕೀಯದಾಚೆಗೆ ಹೋಗಿ, ನಾವು ಉತ್ತಮ ನೆರೆ ದೇಶಗಳಾಗಿ ಪರಸ್ಪರ ಪ್ರೀತಿಯಿಂದ ಬದುಕೋಣ” ಎಂದು ಹೇಳಿದ್ದಾರೆ.
ಅಜ್ಮಲ್ ಕಸಾಬ್ ನ್ನು ‘ಜೆಂಟಲ್ಮನ್’ ಎಂದಾಗ
ಇನ್ನೊಂದು ಹಳೆಯ ಸಂದರ್ಶನದಲ್ಲಿ, 26/11ರ ಮುಂಬೈ ಉಗ್ರ ದಾಳಿಯ ನಂತರದ ಪರಿಸ್ಥಿತಿಯನ್ನು ಚರ್ಚಿಸುವ ವೇಳೆ, ಶಾರುಖ್ ಖಾನ್ ಉಗ್ರ ಕಸಬ್ ಬಗ್ಗೆ ಮಾತನಾಡುತ್ತಾ ‘ಜಂಟಲ್ಮ್ಯಾನ್’ ಎಂಬ ಪದ ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಂದರ್ಶಕಿ ಭಾರತೀಯ ಮುಸ್ಲಿಮರು ಅಸಮಾಧಾನದಲ್ಲಿರುವ ಕಾರಣದಿಂದ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಹೇಳಿದಾಗ, ಶಾರೂಕ್ ಖಾನ್ ಕಸಬ್ ನನ್ನು ತೀವ್ರವಾಗಿ ಟೀಕಿಸಿದ್ದಾರೆ. ಉಗ್ರವಾದವನ್ನು ಪ್ರೋತ್ಸಾಹಿಸಬಾರದು ಎಂದು ಕೂಡ ಹೇಳಿದ್ದಾರೆ.
ಬಾಂಬ್ ಎಸೆಯುವವನು ಯಾರು ಸಂತೋಷದಲ್ಲಿದ್ದಾನೆ ಅಥವಾ ಇಲ್ಲ ಎಂದು ಯೋಚಿಸುವುದಿಲ್ಲ.ಕಸಬ್ ಅಥವಾ ಇನ್ಯಾರೋ ಉಗ್ರ ಆಗಿರಲಿ, ಅವನಲ್ಲಿ ಯಾವ ತತ್ವಶಾಸ್ತ್ರ, ಲಾಜಿಕ್, ಸಂವೇದನೆ ಇರುತ್ತದೆ ಹೇಳಿ ಎಂದು ಕೂಡ ಶಾರೂಕ್ ಖಾನ್ ಹೇಳಿದ್ದಾರೆ.
ಆದರೆ,ಕಸಬ್ ನನ್ನು ‘ಜಂಟಲ್ಮ್ಯಾನ್’ ಎಂದು ಸಂಬೋಧಿಸಿದ್ದು, ಆ ನಿರ್ದಿಷ್ಟ ಶಬ್ದವನ್ನಿಟ್ಟುಕೊಂಡು ಇಂದು ಟ್ರೋಲ್ ಮಾಡುತ್ತಿದ್ದಾರೆ.
ಶಾರುಖ್ ಖಾನ್, ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಥ್ರಿಲ್ಲರ್ ಕಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಇದೇ ವರ್ಷ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


