ನನ್ನ ಗರ್ಭಾವಸ್ಥೆ ತುಂಬಾ ಕ್ಲಿಷ್ಟವಾಗಿತ್ತು, ನಾನು ಬಹಳಷ್ಟು ಕಷ್ಟ ಅನುಭವಿಸಿದ್ದೇನೆ: ದೀಪಿಕಾ ಪಡುಕೋಣೆ
ಮೇರಿ ಕ್ಲೇರ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ನಟಿ, ಗರ್ಭಾವಸ್ಥೆಯಲ್ಲಿ ಮತ್ತು ಹೊಸ ತಾಯಿಯಾಗಿ ತಮ್ಮ ಪ್ರಯಾಣದ ಕುರಿತು ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಅವರು ತಮ್ಮ ಮಗಳಿಗೆ ದುವಾ ಎಂದು ಹೆಸರಿಟ್ಟಿದ್ದು, ತನ್ನ ಗರ್ಭಧಾರಣೆ ಎಷ್ಟು ಕಷ್ಟದಿಂದ ಕೂಡಿತ್ತು ಎಂಬುದನ್ನು ಬಾಲಿವುಡ್ ನಟಿ ದೀಪಿಕಾ ಇದೀಗ ಬಹಿರಂಗಪಡಿಸಿದ್ದಾರೆ.
ಮೇರಿ ಕ್ಲೇರ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ದೀಪಿಕಾ, ಗರ್ಭಾವಸ್ಥೆಯಲ್ಲಿ ಮತ್ತು ಹೊಸ ತಾಯಿಯಾಗಿ ತಮ್ಮ ಪ್ರಯಾಣದ ಕುರಿತು ಹಂಚಿಕೊಂಡಿದ್ದಾರೆ. 'ನಾನು ಗರ್ಭಿಣಿಯಾಗಿ ಎಂಟು, ಒಂಬತ್ತು ತಿಂಗಳುಗಳಲ್ಲಿ ಮತ್ತು ಹೆರಿಗೆ ವೇಳೆಯಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದೆ' ಎಂದು ಹೇಳಿದರು.
ತಮ್ಮ ಮಗಳಿಗೆ ಹೆಸರಿಟ್ಟ ಕುರಿತು ಮಾತನಾಡಿದ ದೀಪಿಕಾ, 'ಆರಂಭಿಕ ದಿನಗಳಲ್ಲಿ ನಮಗೆ ಹೆಚ್ಚು ಮುಖ್ಯವಾಗಿದ್ದು ಅವಳೊಂದಿಗೆ ನಾವು ಇರುವುದಾಗಿತ್ತು. ಅವಳು ಜಗತ್ತನ್ನು ನೋಡುವುದು ಮತ್ತು ತನ್ನದೇ ಆದ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡುವುದಾಗಿತ್ತು. ಅವಳನ್ನು ಹಿಡಿದುಕೊಳ್ಳುವ ಅನುಭವ, ಅವಳನ್ನು ಮೊದಲ ಬಾರಿಗೆ ನೋಡುವುದು ಮತ್ತು ಅವಳು ನಮ್ಮ ಜೀವನಕ್ಕೆ ತರುವ ಪ್ರೀತಿ ಮತ್ತು ಅರ್ಥದ ಪರಿಪೂರ್ಣ ಪ್ರಾತಿನಿಧ್ಯದಂತೆ ಭಾಸವಾಯಿತು ಎಂದರು.
ದೀಪಿಕಾ ಮತ್ತು ರಣವೀರ್ ಸೆಪ್ಟೆಂಬರ್ 8, 2024 ರಂದು ತಮ್ಮ ಮಗಳನ್ನು ಸ್ವಾಗತಿಸಿದರು. ದೀಪಾವಳಿಯಂದು, ಅವರು ತಮ್ಮ ಮಗಳ ಫೋಟೊವನ್ನು ಹಂಚಿಕೊಂಡರು ಮತ್ತು ಆಕೆಯ ಹೆಸರನ್ನು ಬಹಿರಂಗಪಡಿಸಿದರು.
ಮಗಳಿಗೆ ಇಟ್ಟಿರುವ ಹೆಸರಿನ ಹಿಂದಿನ ಆಲೋಚನೆಯನ್ನು ಹಂಚಿಕೊಂಡ ದಂಪತಿ, 'ದುವಾ: ಅಂದರೆ ಪ್ರಾರ್ಥನೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ' ಎಂದು ಬರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



