ಬಾಲಿವುಡ್

ಮುಂಬೈನಲ್ಲಿ 8 ಕೋಟಿ ರೂ ಗೆ 2,100 ಚದರ ಅಡಿ ಕಚೇರಿ ಜಾಗ ಖರೀದಿಸಿದ ಸನ್ನಿ ಲಿಯೋನ್

"ಕರೆನ್‌ಜಿತ್ ಕೌರ್ ವೆಬರ್(ಸನ್ನಿ ಲಿಯೋನ್) ಮುಂಬೈನ ಓಶಿವಾರಾದಲ್ಲಿ 8 ಕೋಟಿ ರೂ.ಗೆ ಕಚೇರಿ ಸ್ಥಳವನ್ನು ಖರೀದಿಸಿದ್ದಾರೆ" ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈನಲ್ಲಿ 8 ಕೋಟಿ ರೂ ಗೆ 2,100 ಚದರ ಅಡಿ ಕಚೇರಿ ಜಾಗ ಖರೀದಿಸಿದ ಸನ್ನಿ ಲಿಯೋನ್
ಮಾಜಿ ನೀಲಿ ತಾರೆ, ಮಾದಕ ನಟಿ ಸನ್ನಿ ಲಿಯೋನ್
Published On :

ಮುಂಬೈ: ಸದ್ಯ ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅವರು ಮುಂಬೈನ ಪ್ರತಿಷ್ಠಿತ ಪ್ರದೇಶದಲ್ಲಿ ಸುಮಾರು 2,100 ಚದರ ಅಡಿ ಕಚೇರಿ ಜಾಗವನ್ನು 8 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ಬುಧವಾರ ತಿಳಿಸಿದೆ.

"ಕರೆನ್‌ಜಿತ್ ಕೌರ್ ವೆಬರ್(ಸನ್ನಿ ಲಿಯೋನ್) ಮುಂಬೈನ ಓಶಿವಾರಾದಲ್ಲಿ 8 ಕೋಟಿ ರೂ.ಗೆ ಕಚೇರಿ ಸ್ಥಳವನ್ನು ಖರೀದಿಸಿದ್ದಾರೆ" ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆಸ್ತಿಯನ್ನು ಫೆಬ್ರವರಿ 2025 ರಲ್ಲಿ ನೋಂದಾಯಿಸಲಾಗಿದೆ. ಈ ಆಸ್ತಿ ನೋಂದಣಿ ದಾಖಲೆಗಳನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಲಾಗಿದೆ ಎಂದು ಸ್ಕ್ವೇರ್ ಯಾರ್ಡ್ಸ್ ಹೇಳಿದೆ.

ಕರನ್‌ಜಿತ್ ಕೌರ್ ವೆಬರ್ ಖರೀದಿಸಿದ ಈ ಆಸ್ತಿ, ವೀರ್ ಗ್ರೂಪ್‌ನ ವಾಣಿಜ್ಯ ಯೋಜನೆಯಾದ ವೀರ್ ಸಿಗ್ನೇಚರ್‌ನಲ್ಲಿದೆ.

ಕರೆನ್‌ಜಿತ್ ಕೌರ್ ವೆಬರ್ ಖರೀದಿಸಿದ ಕಚೇರಿ ಸ್ಥಳವು 176.98 ಚದರ ಮೀಟರ್ (ಸುಮಾರು 1,904.91 ಚದರ ಅಡಿ) ಕಾರ್ಪೆಟ್ ಪ್ರದೇಶವನ್ನು ಮತ್ತು 194.67 ಚದರ ಮೀಟರ್ (2,095 ಚದರ ಅಡಿ) ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದೆ.

ಆನಂದ್ ಕಮಲನಾಯನ್ ಪಂಡಿತ್ ಮತ್ತು ರೂಪಾ ಆನಂದ್ ಪಂಡಿತ್ ಒಡೆತನದ ಐಶ್ವರ್ಯಾ ಪ್ರಾಪರ್ಟಿ ಅಂಡ್ ಎಸ್ಟೇಟ್ಸ್‌ನಿಂದ ಸನ್ನಿ ಲಿಯೋನ್ ಕಚೇರಿ ಸ್ಥಳವನ್ನು ಖರೀದಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.