'ಹಮಾರೆ ಬಾರಹ್' ಚಿತ್ರದಲ್ಲಿ ಮುಸ್ಲಿಮರ ವಿರುದ್ಧ ಯಾವುದೇ ಅಕ್ಷೇಪಾರ್ಹ ದೃಶ್ಯಗಳಿಲ್ಲ: ಬಾಂಬೆ ಹೈಕೋರ್ಟ್
ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಯ ಉದ್ದೇಶ ಹೊಂದಿದೆ. ಭಾರತೀಯ ಸಾರ್ವಜನಿಕರು "ಮೋಸಗಾರರಲ್ಲ ಅಥವಾ ಮೂರ್ಖರಲ್ಲ" ಎಂದು ಹೇಳಿದೆ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.

ನಟ ಅನ್ನು ಕಪೂರ್ ಅಭಿನಯದ 'ಹಮಾರೆ ಬಾರಹ್' ಚಿತ್ರಕ್ಕೆ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗಿರುವಂತೆಯೇ, ಈ ಸಿನಿಮಾ ವೀಕ್ಷಿಸಿದ್ದು, ಇದರಲ್ಲಿ ಕುರಾನ್ ಅಥವಾ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾದ ಯಾವುದೇ ಆಕ್ಷೇಪಾರ್ಹದದ್ದು ಏನೂ ಇಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ. ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಯ ಉದ್ದೇಶ ಹೊಂದಿದೆ. ಭಾರತೀಯ ಸಾರ್ವಜನಿಕರು "ಮೋಸಗಾರರಲ್ಲ ಅಥವಾ ಮೂರ್ಖರಲ್ಲ" ಎಂದು ಹೇಳಿದೆ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.
ಚಿತ್ರದ ಮೊದಲ ಟ್ರೇಲರ್ ಆಕ್ಷೇಪಾರ್ಹವಾಗಿತ್ತು. ಆದರೆ ಅದನ್ನು ತೆಗೆದುಹಾಕಲಾಗಿದೆ ಮತ್ತು ಅಂತಹ ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ಚಲನಚಿತ್ರದಿಂದ ಡಿಲೀಟ್ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿಪಿ ಕೊಲಬಾವಾಲ್ಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠ ಹೇಳಿದೆ. ಇದು ವಾಸ್ತವವಾಗಿ "ಚಿಂತನಾತ್ಮಕ ಚಲನಚಿತ್ರ" ಎಂದು ನ್ಯಾಯಾಲಯ ಪರಿಗಣಿಸಿದ್ದು, ಪ್ರೇಕ್ಷಕರು ತಮ್ಮ ಜ್ಞಾನವನ್ನು ಮನೆಯಲ್ಲಿ ಇರಿಸಿಕೊಳ್ಳಲು ನಿರೀಕ್ಷಿಸುವ ರೀತಿಯಲ್ಲಿ ಇಲ್ಲ. ಕೇವಲ ಚಿತ್ರ ವೀಕ್ಷಿಸಿ ಆನಂದಿಸಿ ಎಂದು ಹೇಳಿತು.
"ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಗಾಗಿಯೇ ಇದೆ. ಚಿತ್ರದಲ್ಲಿ ಮೌಲನಾ ಒಬ್ಬರು ಕುರಾನ್ ಅನ್ನು ತಪ್ಪಾಗಿ ಅರ್ಥೈಸುವುದು ಇದೆ. ವಾಸ್ತವವಾಗಿ ಒಬ್ಬ ಮುಸ್ಲಿಂ ವ್ಯಕ್ತಿ ಅದೇ ದೃಶ್ಯವನ್ನು ವಿರೋಧಿಸುತ್ತಾನೆ. ಆದ್ದರಿಂದ ಜನರು ತಮ್ಮ ಮನಸ್ಸಿನ ಮಾತು ಕೇಳಬೇಕು. ಅಂತಹ ಮೌಲಾನಾಗಳನ್ನು ಕುರುಡಾಗಿ ಅನುಸರಿಸಬಾರದು ಎಂದು ತೋರಿಸುತ್ತದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿದೆ ಮತ್ತು ಕುರಾನ್ ಹೇಳುವುದನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಲನಚಿತ್ರವನ್ನು ನಿಷೇಧಿಸುವಂತೆ ಕೋರಿ ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ನಲ್ಲಿ ಅನೇಕ ಅರ್ಜಿಗಳ ಸಲ್ಲಿಕೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



