ಬಾಲಿವುಡ್

ಇರಾ ಖಾನ್-ನೂಪುರ್ ಶಿಖರೆ ಆರತಕ್ಷತೆಯಲ್ಲಿ ಪಾಲ್ಗೊಂಡ ಶಾರುಖ್ ಖಾನ್, ಸಲ್ಮಾನ್ ಖಾನ್, ಸಚಿನ್ ತೆಂಡೂಲ್ಕರ್

ಶಾರುಖ್ ಖಾನ್, ಸಲ್ಮಾನ್ ಖಾನ್, ಸಚಿನ್ ತೆಂಡೂಲ್ಕರ್, ಸೂರ್ಯ ಮತ್ತು ಜೂಹಿ ಚಾವ್ಲಾ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ರಂಗಭೂಮಿ ನಿರ್ದೇಶಕಿ ಇರಾ ಖಾನ್ ಮತ್ತು ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇರಾ ಖಾನ್-ನೂಪುರ್ ಶಿಖರೆ ಆರತಕ್ಷತೆಯಲ್ಲಿ ಪಾಲ್ಗೊಂಡ ಶಾರುಖ್ ಖಾನ್, ಸಲ್ಮಾನ್ ಖಾನ್, ಸಚಿನ್ ತೆಂಡೂಲ್ಕರ್
ನಟ ಅಮೀರ್ ಖಾನ್ ಅವರು ತಮ್ಮ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ಆರತಕ್ಷತೆ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕಿ ರೀನಾ ದತ್ತಾ ಮತ್ತು ಇತರರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ
Published On :

ಮುಂಬೈ: ಶಾರುಖ್ ಖಾನ್, ಸಲ್ಮಾನ್ ಖಾನ್, ಸಚಿನ್ ತೆಂಡೂಲ್ಕರ್, ಸೂರ್ಯ ಮತ್ತು ಜೂಹಿ ಚಾವ್ಲಾ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ರಂಗಭೂಮಿ ನಿರ್ದೇಶಕಿ ಇರಾ ಖಾನ್ ಮತ್ತು ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಟ ಅಮೀರ್ ಖಾನ್ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿಯಾದ ಇರಾ ಮತ್ತು ನೂಪುರ್ ಜನವರಿ 8 ರಂದು ರಾಜಸ್ಥಾನದ ಉದಯಪುರದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು.

ಅಮೀರ್ ಖಾನ್‌ರೊಂದಿಗೆ ಶಾರುಖ್ ಖಾನ್ ಮತ್ತು ಗೌರಿ ದಂಪತಿ
ಅಮೀರ್ ಖಾನ್‌ರೊಂದಿಗೆ ಶಾರುಖ್ ಖಾನ್ ಮತ್ತು ಗೌರಿ ದಂಪತಿ

ಆರತಕ್ಷತೆ ಕಾರ್ಯಕ್ರಮಕ್ಕೆ ನಟಿ ರೇಖಾ, ಜಯಾ ಬಚ್ಚನ್, ಹೇಮಾ ಮಾಲಿನಿ, ರಣಬೀರ್ ಕಪೂರ್, ಮಾಧುರಿ ದೀಕ್ಷಿತ್, ಕತ್ರಿನಾ ಕೈಫ್, ಕಂಗನಾ ರನೌತ್, ನಾಗ ಚೈತನ್ಯ, ಅನಿಲ್ ಕಪೂರ್, ಸೋನಾಲಿ ಬೇಂದ್ರೆ, ಫರ್ಹಾನ್ ಅಖ್ತರ್, ಜೋಯಾ ಅಖ್ತರ್, ಸುನಿಧಿ ಚೌಹಾಣ್, ಕಾರ್ತಿಕ್ ಆರ್ಯನ್, ಸುಶ್ಮಿತಾ ಸೇನ್, ಶ್ವೇತಾ ತಿವಾರಿ, ಭೂಮಿ ಪಡ್ನೇಕರ್ ಮತ್ತು ಕಪಿಲ್ ಶರ್ಮಾ ಅವರು ಶನಿವಾರ ಸಂಜೆ ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ನಡೆದ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಇರಾ ಖಾನ್ - ನೂಪುರ್ ಶಿಖರೆ
ಇರಾ ಖಾನ್ - ನೂಪುರ್ ಶಿಖರೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉದ್ಯಮಿ ದಂಪತಿ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಕೂಡ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಆರತಕ್ಷತೆಗಾಗಿ, ಇರಾ ಕಸೂತಿ ಮಾಡಿದ ಕೆಂಪು ಲೆಹೆಂಗಾವನ್ನು ಧರಿಸಿದ್ದರು ಮತ್ತು ನೂಪುರ್ ಸಂಪೂರ್ಣ ಕಪ್ಪು ಬಣ್ಣದ ಶೇರ್ವಾನಿ ಜಾಕೆಟ್ ಮತ್ತು ಧೋತಿಯನ್ನು ಧರಿಸಿದ್ದರು.

ರಣಬೀರ್ ಕಪೂರ್
ರಣಬೀರ್ ಕಪೂರ್

ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಇಬ್ಬರು ಮಕ್ಕಳಲ್ಲಿ ಇರಾ ಕಿರಿಯವರು. ಇರಾ ಅವರ ಹಿರಿಯ ಸಹೋದರ ಜುನೈದ್ ಮತ್ತು ಅಮೀರ್ ಖಾನ್ ಅವರ ಮತ್ತೋರ್ವ ಪುತ್ರ ಆಜಾದ್ ರಾವ್ ಖಾನ್ ಕೂಡ ಕಾರ್ಯಕ್ರಮದಲ್ಲಿದ್ದರು.

ಹೇಮಾ ಮಾಲಿನಿ ಮತ್ತು ರೇಖಾ
ಹೇಮಾ ಮಾಲಿನಿ ಮತ್ತು ರೇಖಾ

ಮಾನಸಿಕ ಆರೋಗ್ಯ ಬೆಂಬಲ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಕೂಡ ಆಗಿರುವ ಇರಾ, ಈ ಹಿಂದೆ ಜನವರಿ 3 ರಂದು ಮುಂಬೈನ ಉಪನಗರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ನೂಪುರ್ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದರು.

ಪುತ್ರಿ ಶ್ವೇತಾ ಬಚ್ಚನ್ ಅವರೊಂದಿಗೆ ಜಯಾ ಬಚ್ಚನ್ ಮತ್ತು ಸೋನಾಲಿ ಬೇಂದ್ರೆ
ಪುತ್ರಿ ಶ್ವೇತಾ ಬಚ್ಚನ್ ಅವರೊಂದಿಗೆ ಜಯಾ ಬಚ್ಚನ್ ಮತ್ತು ಸೋನಾಲಿ ಬೇಂದ್ರೆ

ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರು 2023ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಅನಿಲ್ ಕಪೂರ್ ಮತ್ತು ನಾಗ ಚೈತನ್ಯ
ಅನಿಲ್ ಕಪೂರ್ ಮತ್ತು ನಾಗ ಚೈತನ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.