'ಚೆಂದಕ್ಕಿಂತ ಚೆಂದ' ಖ್ಯಾತಿಯ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ!
ನಟ ಕಿಚ್ಚಾ ಸುದೀಪ್ ಅಭಿನಯದ ಚೊಚ್ಚಲ ‘ಸ್ಪರ್ಶ’ ಚಿತ್ರದ 'ಚೆಂದಕ್ಕಿಂತ ಚೆಂದ ನೀನೆ ಸುಂದರ' ಗೀತೆಯ ಗಾಯಕ ಪಂಕಜ್ ಉಧಾಸ್ ನಿಧನರಾಗಿದ್ದಾರೆ.

ಮುಂಬೈ: ನಟ ಕಿಚ್ಚಾ ಸುದೀಪ್ ಅಭಿನಯದ ಚೊಚ್ಚಲ ‘ಸ್ಪರ್ಶ’ ಚಿತ್ರದ 'ಚೆಂದಕ್ಕಿಂತ ಚೆಂದ ನೀನೆ ಸುಂದರ' ಗೀತೆಯ ಗಾಯಕ ಪಂಕಜ್ ಉಧಾಸ್ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉಧಾಸ್ ಅವರು, ಇಂದು ನಿಧನರಾಗಿದ್ದು, ಅವರಿಗೆ 72 ವರ್ಷವಾಗಿತ್ತು. ಪಂಕಜ್ ಅವರ ನಿಧನದ ಮಾಹಿತಿಯನ್ನು ಅವರ ಕುಟುಂಬ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 'ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರುವರಿ 26, 2024ರಂದು ಪಂಕಜ್ ಉಧಾಸ್ ಅವರು ನಿಧನರಾದರು. ಅವರ ನಿಧನದ ಬಗ್ಗೆ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಉಧಾಸ್ ಅವರು ಮೇ 17, 1951 ರಂದು ಗುಜರಾತ್‌ನ ಜೆಟ್‌ಪುರದಲ್ಲಿ ಜನಿಸಿದರು. ಪ್ರಸಿದ್ಧ ಗಾಯಕರೂ ಆಗಿದ್ದ ಅವರ ತಂದೆ ಮನುಭಾಯ್ ಉಧಾಸ್ ಅವರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಪಾಠ ಕಲಿತರು. ಕಾಲೇಜಿನಲ್ಲಿ ಪದವಿ ಪಡೆದ ನಂತರ, ಪಂಕಜ್ ಬಾಲಿವುಡ್ ಚಲನಚಿತ್ರಗಳಿಗೆ ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಆದಾಗ್ಯೂ, ಅವರ ಅನನ್ಯವಾದ ಭಾವಪೂರ್ಣ ಧ್ವನಿಯು ಗಜಲ್ ಗಾಯನದಲ್ಲಿ ಅದರ ನಿಜವಾದ ಕರೆಯನ್ನು ಕಂಡುಕೊಂಡಿತು.
1980ರ ದಶಕದಲ್ಲಿ ಪಂಕಜ್ ಉಧಾಸ್ ಅವರು ಗಝಲ್ ಗಾಯನದ ಮೂಲಕ ಫೇಮಸ್ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಮಹೇಶ್ ಭಟ್ ಅವರ 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್’ ಚಿತ್ರದ ‘ಚಿಟ್ಟಿ ಆಯಿ ಹೈ’ ಹಾಡು ಪಂಕಜ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಪಂಕಜ್ ಅವರು 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಹಿನ್ನೆಲೆ ಗಾಯಕರಾಗಿ ಪಂಕಜ್ ಹಾಡಿದ್ದಾರೆ. ಸ್ಪರ್ಶ ಚಿತ್ರದ ಬರೆಯದ ಮೌನ ಕವಿತೆ, ಚಂದಕ್ಕಿಂತ ಚಂದ ಹಾಡನ್ನು ಪಂಕಜ್ ಹಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




