ಬಾಲಿವುಡ್

ಕಾಂಜಾವಾಲಾ ಅಪಘಾತ: ಅಂಜಲಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಶಾರುಖ್ ಖಾನ್

ಕಾಂಜಾವಾಲಾ ಅಪಘಾತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಡಿಸೆಂಬರ್ 31ರ ರಾತ್ರಿ ಸುಲ್ತಾನಪುರಿಯಲ್ಲಿ ಸಂಭವಿಸಿದ ಭಯಾನಕ ರಸ್ತೆ ಅಪಘಾತದಲ್ಲಿ ಅಂಜಲಿ ಸಿಂಗ್ ಸಾವನ್ನಪ್ಪಿದರು. ಇದೀಗ ಅಂಜಲಿ ಕುಟುಂಬಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಸಹಾಯಹಸ್ತ ಚಾಚಿಸಿದ್ದಾರೆ.

ಕಾಂಜಾವಾಲಾ ಅಪಘಾತ: ಅಂಜಲಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಶಾರುಖ್ ಖಾನ್
ಶಾರುಖ್ ಖಾನ್
Published On :

ನವದೆಹಲಿ: ಕಾಂಜಾವಾಲಾ ಅಪಘಾತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಡಿಸೆಂಬರ್ 31ರ ರಾತ್ರಿ ಸುಲ್ತಾನಪುರಿಯಲ್ಲಿ ಸಂಭವಿಸಿದ ಭಯಾನಕ ರಸ್ತೆ ಅಪಘಾತದಲ್ಲಿ ಅಂಜಲಿ ಸಿಂಗ್ ಸಾವನ್ನಪ್ಪಿದರು. ಇದೀಗ ಅಂಜಲಿ ಕುಟುಂಬಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಸಹಾಯಹಸ್ತ ಚಾಚಿಸಿದ್ದಾರೆ. 

ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಅಂಜಲಿ ಸಿಂಗ್ ಅವರ ತಾಯಿಗೆ ಹಣವನ್ನು ದೇಣಿಗೆ ನೀಡಿದೆ. ವರದಿಗಳ ಪ್ರಕಾರ, ಅಂಜಲಿ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದರು. ತಾಯಿ ಮತ್ತು ಒಡಹುಟ್ಟಿದವರಿಗೆ ನೆರವಾಗಿದ್ದರು. ಶಾರುಖ್ ಖಾನ್ ರ ಪ್ರತಿಷ್ಠಾನವು ಅಂಜಲಿ ಸಿಂಗ್ ಅವರ ತಾಯಿಯ ಆರೋಗ್ಯಕ್ಕೆ ಸಹಾಯ ಮಾಡಲು ಮತ್ತು ಅಂಜಲಿಯ ಒಡಹುಟ್ಟಿದವರಿಗೆ ಆರ್ಥಿಕ ಸಹಾಯ ಮಾಡಿದೆ ಎಂದು ವರದಿಯಾಗಿದೆ. 

ಮೀರ್ ಫೌಂಡೇಶನ್ ಅಧಿಕೃತ ಹೇಳಿಕೆಯಲ್ಲಿ, 'ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಬಹಿರಂಗಪಡಿಸದ ಮೊತ್ತವನ್ನು ದೇಣಿಗೆ ನೀಡಿದೆ. ದೆಹಲಿಯ ಕಂಜಾವಾಲಾದಲ್ಲಿ 20 ವರ್ಷದ ಅಂಜಲಿ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಳು. 

ಅಂಜಲಿಯ ತಂದೆ ಎಂಟು ವರ್ಷಗಳ ಹಿಂದೆ ನಿಧನರಾಗಿದ್ದು ಅವರ ತಾಯಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೇವಲ 10ನೇ ತರಗತಿವರೆಗೆ ಓದಿರುವ ಅಂಜಲಿ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಹಲವು ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದಳು.

ಹೊಸ ವರ್ಷದಂದು ದೆಹಲಿಯ ಹೊರವಲಯದಲ್ಲಿ ಅಂಜಲಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಕೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬಲೆನೋ ಕಾರು ಆಕೆಗೆ ಡಿಕ್ಕಿ ಹೊಡೆದು 10 ಕಿ.ಮೀ.ವರೆಗೆ ವಾಹನದ ಕೆಳಗೆ ಎಳೆದೊಯ್ದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.