ಬಾಲಿವುಡ್

ರಣ್ಬೀರ್ ಕಪೂರ್ ನಟನೆಯ Animal ಸಿನಿಮಾಗೆ A ಪ್ರಮಾಣಪತ್ರ; ಟ್ರೈಲರ್ ಬಿಡುಗಡೆ

ರಣ್ಬೀರ್ ಕಪೂರ್ ನಟನೆಯ ಅನಿಮಲ್ Animal ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.

ರಣ್ಬೀರ್ ಕಪೂರ್ ನಟನೆಯ Animal ಸಿನಿಮಾಗೆ A ಪ್ರಮಾಣಪತ್ರ; ಟ್ರೈಲರ್ ಬಿಡುಗಡೆ
ರಣ್ ಬೀರ್ ಕಪೂರ್ ನಟನೆಯ Animal ಸಿನಿಮಾ ದೃಶ್ಯ
Published On :

ನವದೆಹಲಿ: ರಣ್ಬೀರ್ ಕಪೂರ್ ನಟನೆಯ ಅನಿಮಲ್ Animal ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. 

ಸಿನಿಮಾಗೆ A (adults only) ಪ್ರಮಾಣಪತ್ರ ನೀಡಲಾಗಿದೆ ಎಂದು ಸಿನಿಮ ತಂಡ ಹೇಳಿದೆ.ರಣ್ಬೀರ್ ಕಪೂರ್ ಹಾಗೂ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ.  ಈ ಚಲನಚಿತ್ರದಲ್ಲಿ ಅನಿಲ್ ಕಪೂರ್ ತಂದೆಯ ಪಾತ್ರ ನಿರ್ವಹಿಸಿದ್ದು, ಮಗನ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸಿದ್ದಾರೆ.

ಈ ಸಿನಿಮಾದ ಅವಧಿ 3ಗಂಟೆ 21 ನಿಮಿಷಗಳಾಗಿರಲಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವ ದೀರ್ಘ ಅವಧಿಯ ಸಿನಿಮಾ ಇದಾಗಿರಲಿದೆ.

ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಸಿನಿಮಾ ಟೀಸರ್ ನ ಕೊನೆಯ ಭಾಗದಲ್ಲಿ ಬಾಬಿ ಡಿಯೋಲ್ ಕಾಣಿಸಿಕೊಂಡು ಸಿನಿಮಾ ಬಗ್ಗೆ ಕೂತೂಹಲ ಹೆಚ್ಚಿತ್ತು. ಈಗ ಟ್ರೇಲರ್ ಸಹ ಬಿಡುಗಡೆಯಾಗಿದ್ದು,  ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.