ರಾಘವ್ ಚಡ್ಡಾ ಜೊತೆ ಮದುವೆ ವದಂತಿಗಳ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ!
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ವೇಗವಾಗಿ ಹರಡಿದೆ. ರಾಘವ್ ಚಡ್ಡಾ ಅವರೊಂದಿಗೆ ಮದುವೆ ವದಂತಿಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಪರಿಣಿತಿ ಚೋಪ್ರಾ ನಾಚಿ ನೀರಾಗಿರುವುದು ಇದೀಗ ವದಂತಿಗಳಿಗೆ ಇಂಬು ನೀಡಿದೆ.

ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ವೇಗವಾಗಿ ಹರಡಿದೆ. ರಾಘವ್ ಚಡ್ಡಾ ಅವರೊಂದಿಗೆ ಮದುವೆ ವದಂತಿಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಪರಿಣಿತಿ ಚೋಪ್ರಾ ನಾಚಿ ನೀರಾಗಿರುವುದು ಇದೀಗ ವದಂತಿಗಳಿಗೆ ಇಂಬು ನೀಡಿದೆ.
ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪರಿಣಿತಿ ಅವರು ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ ತಮ್ಮ ಕಾರಿನ ಬಳಿಗೆ ಹೋಗುತ್ತಿರುವುದು ಕಂಡುಬಂದಿದೆ.
ಈ ವೇಳೆ ಅವರನ್ನು ಸುತ್ತುವರಿದ ಹಲವಾರು ಛಾಯಾಗ್ರಾಹಕರು ಆಕೆಯ ಮದುವೆಯ ಬಗ್ಗೆ ಹರಡಿರುವ 'ಸುದ್ದಿ' ಬಗ್ಗೆ ಕೇಳುತ್ತಾರೆ. ಈ ವೇಳೆ ನಾಚಿಕೊಳ್ಳುವ ಪರಿಣಿತಿ, ನಗುತ್ತಾ ಮುಂದೆ ಸಾಗುತ್ತಾರೆ.
ಅವರನ್ನು ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ, 'ಹ್ಮ್?' ಎಂದು ಉತ್ತರಿಸುತ್ತಾರೆ. ಕನ್ಫರ್ಮ್ ಮಾಡಿಕೊಳ್ಳಲು ಮತ್ತೆ ಆಕೆಯನ್ನು ಕೇಳಿದಾಗ, 'ಧನ್ಯವಾದಗಳು. ಬೈ. ಗುಡ್‌ನೈಟ್' ಎನ್ನುವ ಪರಿಣಿತಿ, ನಾಚಿಕೊಂಡು ಮತ್ತೆ ಮುಗುಳ್ನಗುತ್ತಾರೆ.
ಪರಿಣಿತಿ ಚೋಪ್ರಾ, ಇಮ್ತಿಯಾಜ್ ಅಲಿ ನಿರ್ದೇಶನದ 'ಚಮ್ಕಿಲಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿಲ್ಜಿತ್ ದೋಸಾಂಜ್ ನಟಿಸಿರುವ ಈ ಚಿತ್ರವು ಇಬ್ಬರು ಜನಪ್ರಿಯ ಪಂಜಾಬಿ ಗಾಯಕರಾದ ಅಮರಜೋತ್ ಕೌರ್ ಮತ್ತು ಅಮರ್ ಸಿಂಗ್ ಚಮ್ಕಿಲಾ ಅವರ ಸುತ್ತ ಸುತ್ತುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


