ಬಾಲಿವುಡ್ ನ ಎಲ್ಲಾ ದಾಖಲೆ ಧೂಳಿಪಟ ಮಾಡಿದ 'ಪಠಾಣ್'
ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಹಿಂದಿ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ. ಬಿಡುಗಡೆಯಾದ ಆರಂಭದಲ್ಲಿಯೇ ಅತ್ಯಂತ ವೇಗವಾಗಿ ರೂ. 100 ಕೋಟಿ, ರೂ. 200 ಕೋಟಿ ಮತ್ತು ರೂ.300 ಕೋಟಿ ಗಳಿಸಿದ ಪಠಾಣ್, ಅಷ್ಟೇ ವೇಗವಾಗಿ ರೂ. 400 ಕೋಟಿ ಕ್ಲಬ್ ಸೇರಿತ್ತು.

ಮುಂಬೈ: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಹಿಂದಿ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ. ಬಿಡುಗಡೆಯಾದ ಆರಂಭದಲ್ಲಿಯೇ ಅತ್ಯಂತ ವೇಗವಾಗಿ ರೂ. 100 ಕೋಟಿ, ರೂ. 200 ಕೋಟಿ ಮತ್ತು ರೂ.300 ಕೋಟಿ ಗಳಿಸಿದ ಪಠಾಣ್, ಅಷ್ಟೇ ವೇಗವಾಗಿ ರೂ. 400 ಕೋಟಿ ಕ್ಲಬ್ ಸೇರಿತ್ತು.
ಇದೇ ರೀತಿ ಸುಲಭವಾಗಿ ಬಾಲಿವುಡ್ ನಲ್ಲಿ ರೂ. 500 ಕೋಟಿ ಕಲೆಕ್ಷನ್ ಮಾಡಿದ ಚಿತ್ರ ಇದೀಗ ಬಾಲಿವುಡ್ ಹಿಂದಿ ಆವೃತ್ತಿಯ ಸಾರ್ವಕಾಲಿಕ ರೂ. 511 ಕೋಟಿ ದಾಖಲೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಹಿಂದಿ ವರ್ಸನ್ ಒಂದರಲ್ಲಿಯೇ ರೂ. 516 ಕೋಟಿ ದೋಚಿರುವ ಪಠಾಣ್, ಒಟ್ಟಾರೇ ಕಲೆಕ್ಷನ್ ಸುಮಾರು ರೂ. 534 ಕೋಟಿ ಸಮೀಪದಲ್ಲಿ ಇದೆ ಎನ್ನಲಾಗಿದೆ.
ಈ ವಾರದಲ್ಲಿ ಯಾವುದೇ ಹೊಸ ಚಿತ್ರ ಬಿಡುಗಡೆಯಾಗದಿರುವುದರಿಂದ ಮತ್ತೆ ರೂ. 5.50 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಕಡಿಮೆಯಾದ ಟಿಕೆಟ್ ದರ ಹಾಗೂ ಹೋಳಿ ರಜೆ ಪಠಾಣ್ ಗೆ ಅನುಕೂಲವಾಗಬಹುದು. ಏಳನೇ ವಾರ ಆರಂಭದಲ್ಲಿಯೇ ರೂ. 3 ರಿಂದ 4 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಬಾಲಿವುಡ್ ಚಿತ್ರೋದ್ಯಮದ ವಿಶ್ಲೇಷಕರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


