ಬಾಲಿವುಡ್

ಬರೆಯುವ ಮೊದಲು ಒಮ್ಮೆ ಪರಿಶೀಲಿಸಿ: ಮಲೈಕಾ ಅರೋರಾ ಗರ್ಭಿಣಿ ಎಂಬ ವಿಚಾರಕ್ಕೆ ಅರ್ಜುನ್ ಕಪೂರ್ ಗರಂ

ಅರ್ಜುನ್‌ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು. ಈ ವಿಚಾರವಾಗಿ ನಟ ಅರ್ಜುನ್‌ ಕಪೂರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರೆಯುವ ಮೊದಲು ಒಮ್ಮೆ ಪರಿಶೀಲಿಸಿ: ಮಲೈಕಾ ಅರೋರಾ ಗರ್ಭಿಣಿ ಎಂಬ ವಿಚಾರಕ್ಕೆ ಅರ್ಜುನ್ ಕಪೂರ್ ಗರಂ
ಮಲೈಕಾ ಮತ್ತು ಅರ್ಜುನ್ ಕಪೂರ್
Published On :

ಬಾಲಿವುಡ್​ ಸೆಲೆಬ್ರಿಟಿಗಳಾದ ಮಲೈಕಾ ಅರೋರಾ  ಮತ್ತು ಅರ್ಜುನ್​ ಕಪೂರ್​ ಅವರು ಲಿವ್​-ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಇಬ್ಬರ ನಡುವೆ ಅನೇಕ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲದಕ್ಕೂ ಅವರು ಪ್ರತಿಕ್ರಿಯೆ ನೀಡುವುದಿಲ್ಲ.

ಕೆಲವೊಮ್ಮೆ ತೀರಾ ಕೆಳಮಟ್ಟದ ಗಾಸಿಪ್​ಗಳು  ಹರಡಿದಾಗ ಅದನ್ನು ತಳ್ಳಿಹಾಕುವುದು ಅನಿವಾರ್ಯ ಆಗುತ್ತದೆ. ಕಳೆದ ವರ್ಷ ಮಲೈಕಾ ಅರೋರಾ ಅವರು ಪ್ರೆಗ್ನೆಂಟ್​ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

ಅರ್ಜುನ್‌ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು. ಈ ವಿಚಾರವಾಗಿ ನಟ ಅರ್ಜುನ್‌ ಕಪೂರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನೆಗೆಟಿವಿಟಿಯನ್ನು ಹರಡುವುದು ಸುಲಭ. ಎಲ್ಲೆಡೆ ನೆಗೆಟಿವ್‌ ವಿಚಾರಗಳ ಬಹುಬೇಗನೇ ಹರಡುವುದರಿಂದ ಜನ ಅದರತ್ತ ಹೆಚ್ಚು ಗಮನ ಹರಿಸುತ್ತಾರೆ. ನಾವು ನಟರು, ನಮ್ಮ ವೈಯಕ್ತಿಕ ಜೀವನ ಯಾವಾಗಲೂ ತುಂಬಾ ಖಾಸಗಿಯಾಗಿರುವುದಿಲ್ಲ. ನಾವೆಲ್ಲರೂ ಮನುಷ್ಯರು ಎಂಬ ಕನಿಷ್ಠ ಅರಿವು ನಮಗಿರಬೇಕು. ಆದ್ದರಿಂದ, ನೀವು ಬಹಳ ಮುಖ್ಯವಾದದ್ದನ್ನು ಬರೆಯಲು ಹೊರಟಿದ್ದರೆ ಒಮ್ಮೆ ಪರಿಶೀಲಿಸಿ. ಹಾಗೆ ಮಾಡಿದರೆ ನಮಗೂ ನಾವು ಮಾಡಿದ್ದು ಸರಿ ಎಂದು ಭಾಸವಾಗುತ್ತದೆ. ಸುಮ್ಮನೆ ನೀವು ಊಹಿಸಿ ಎಲ್ಲವನ್ನೂ ಬರೆಯಬೇಡಿ” ಎಂದು ಹೇಳಿದ್ದಾರೆ.

ನಮ್ಮ ಮಾತುಗಳು ಸಾಮಾನ್ಯ ಜನರಿಗೆ ಹೇಗೆ ತಲುಪುತ್ತಿವೆ ಎಂಬುದರ ಕುರಿತು ನಾವು ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದೇವೆ. ನಾವು ಸಹ ಮನುಷ್ಯರು ಎಂದು ನೀವು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ಏನನ್ನಾದರೂ ಬರೆಯುವ ಮೊದಲು, ಒಮ್ಮೆ ನಮ್ಮೊಂದಿಗೆ ದೃಢೀಕರಿಸಿ ಎಂದಿದ್ದಾರೆ.

ಅನೇಕ ಸಂದರ್ಭದಲ್ಲಿ ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ಈ ಜೋಡಿ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ. ಇಬ್ಬರು ನಡುವೆ ವಯಸ್ಸಿನ ಅಂತರ ಇದೆ. ಮಲೈಕಾಗಿಂತ ಅರ್ಜುನ್​ ಕಪೂರ್​ ಅವರು 12 ವರ್ಷ ಚಿಕ್ಕವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.