ಹಿಂದೆ ನನ್ನಲ್ಲಿ ಇಷ್ಟು ಆತ್ಮವಿಶ್ವಾಸ ಇರಲಿಲ್ಲ, ನಾನು ಬೆಳೆದ ರೀತಿಯಿಂದ ನನ್ನಲ್ಲಿ ಆತ್ಮವಿಶ್ವಾಸ ಬೆಳೆಯುತ್ತಾ ಹೋಯಿತು: ವಿದ್ಯಾ ಬಾಲನ್
ಬಾಲಿವುಡ್ ನ ಖ್ಯಾತ ಅಭಿನೇತ್ರಿ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಅಡ್ಡಾಡಿದ್ದರು. ಅಲ್ಲಿ ಕರಾವಳಿ ಹೊಟೇಲ್ ಗೆ ಊಟಕ್ಕೆ ಹೋಗಿದ್ದರು.ನಂತರ ಅಲ್ಲಿನ ಕಾರ್ನರ್ ಹೌಸ್ ಗೆ ಐಸ್ ಕ್ರೀಮ್ ಸವಿಯಲೆಂದು ಹೋಗಿದ್ದರು.

ಬಾಲಿವುಡ್ ನ ಖ್ಯಾತ ಅಭಿನೇತ್ರಿ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಅಡ್ಡಾಡಿದ್ದರು. ಅಲ್ಲಿ ಕರಾವಳಿ ಹೊಟೇಲ್ ಗೆ ಊಟಕ್ಕೆ ಹೋಗಿದ್ದರು.ನಂತರ ಅಲ್ಲಿನ ಕಾರ್ನರ್ ಹೌಸ್ ಗೆ ಐಸ್ ಕ್ರೀಮ್ ಸವಿಯಲೆಂದು ಹೋಗಿದ್ದರು.
ಚರ್ಚ್ ಸ್ಟ್ರೀಟ್ ನ ಗ್ರಾಫಿಟಿ ಗೋಡೆ ಮುಂದೆ ಚಿತ್ರಗಳನ್ನು ತೆಗೆಸಿಕೊಂಡರು. ನನ್ನ ಅಕ್ಕ-ಬಾವ ಬೆಂಗಳೂರಿನಲ್ಲಿ ವಾಸವಾಗಿದ್ದರು. ಹೀಗಾಗಿ ನನಗೆ ಬೆಂಗಳೂರು ಹೊಸತಲ್ಲ, ಅನೇಕ ಬಾರಿ ಬಂದು ಹೋಗಿದ್ದೇನೆ ಎನ್ನುತ್ತಾರೆ ವಿದ್ಯಾ ಬಾಲನ್.
ತಮ್ಮ ಮುಂಬರುವ ಚಿತ್ರ 'ನೀಯತ್' ನ ಪ್ರಚಾರಾರ್ಥ ಬೆಂಗಳೂರಿಗೆ ಬಂದಿದ್ದ ವಿದ್ಯಾ ಬಾಲನ್ ಇದರಲ್ಲಿ ಮೀರಾ ರಾವ್ ಎಂಬ ಪತ್ತೇದಾರಿ ಪಾತ್ರ ವಹಿಸಿದ್ದು ಒಂದು ಕೊಲೆ ಕೇಸನ್ನು ಬೇಧಿಸುತ್ತಾರೆ. Glass Onion: A Knives out Mystery ಎಂಬ ಸ್ಕಾಟಿಷ್ ಕಥೆಯ ರೀತಿ ಚಿತ್ರವನ್ನು ಹೆಣೆಯಲಾಗಿದ್ದು ಮೀರಾ ರಾವ್ ಪಾತ್ರವನ್ನು ಡೇನಿಯಲ್ ಕ್ರೈಗ್ಸ್ ಅವರ ಬೆನಾಯ್ಟ್ ಬ್ಲಾಂಕ್ ಗೆ ಹೋಲಿಸಿದರೆ ಅಚ್ಚರಿಯಿಲ್ಲ. ಆದರೆ ನಿರ್ದೇಶಕಿ ಅನು ಮೆನನ್ ಅವರು ಎರಡೂ ಪಾತ್ರಗಳ ನಡುವೆ ಸ್ಪಷ್ಟವಾದ ಭಿನ್ನತೆಯನ್ನು ತೋರಿಸುತ್ತಾರೆ.
ಮೀರಾ ರಾವ್ ಕ್ಲಾಸಿಕ್ ಪತ್ತೇದಾರಿಯಲ್ಲ. ಪತ್ತೇದಾರಿಗಳೊಂದಿಗೆ ಸಂಬಂಧ ಹೊಂದಬಹುದಾದಂತಹ ಅಬ್ಬರ ಮತ್ತು ಶೈಲಿಯನ್ನು ಅವಳು ಹೊಂದಿಲ್ಲ. ಬದಲಾಗಿ, ಅವಳು ಸಾಮಾಜಿಕವಾಗಿ ವಿಚಿತ್ರವಾಗಿ ವರ್ತಿಸುವವಳು. ಅವಳು ತುಂಬಾ ತೀಕ್ಷ್ಣ ಸ್ವಭಾವದವಳಾಗಿದ್ದರೂ ನಾಚಿಕೆ ಸ್ವಭಾವದವಳು ಎಂದು ಬಾಬಿ ಜಾಸ್ಸೋಸ್‌ನಲ್ಲಿ ಮಹತ್ವಾಕಾಂಕ್ಷೆಯ ಪತ್ತೇದಾರಿ ಪಾತ್ರವನ್ನು ನಿರ್ವಹಿಸಿದ ಬಾಲನ್ ವಿವರಿಸುತ್ತಾರೆ.
ನಿರ್ದೇಶಕಿ ಅನು ಮೆನನ್ ಜೊತೆ ವಿದ್ಯಾ ಬಾಲನ್ ಎರಡನೇ ಬಾರಿ ಚಿತ್ರ ಮಾಡುತ್ತಿದ್ದಾರೆ. 2020ರಲ್ಲಿ ಶಕುಂತಲಾ ದೇವಿ ಚಿತ್ರ ಮಾಡಿದ್ದರು. ಅನು ಮೆನನ್ ಅವರು ಮುಂದೆ ಏನು ಮಾಡುತ್ತಾರೆ, ಯಾವ ರೀತಿಯ ಚಿತ್ರ ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಶಕುಂತಲಾ ದೇವಿ ಮತ್ತು ನೀಯತ್ ಸಂಪೂರ್ಣ ಭಿನ್ನ ಚಿತ್ರ ಎನ್ನುತ್ತಾರೆ.
ಹಿಂದೆ ನನಗೆ ಆತ್ಮವಿಶ್ವಾಸವಿರಲಿಲ್ಲ, ಕೆಲಸ ಮಾಡುತ್ತಾ, ಮಾಡುತ್ತಾ ಬೆಳೆಯುತ್ತಾ ಹೋಯಿತು. ನಮ್ಮಲ್ಲಿನ ಆತ್ಮವಿಶ್ವಾಸ ನಾವು ಬೆಳೆಯುವ ರೀತಿಯಿಂದ ಬರುತ್ತದೆ ಎಂಬುದು ನನ್ನ ಅಭಿಪ್ರಾಯ. ನಾನು ಮತ್ತು ನನ್ನ ಸೋದರಿಯನ್ನು ಯಾವತ್ತೂ ಹೋಲಿಕೆ ಮಾಡುತ್ತಿರಲಿಲ್ಲ ನಮ್ಮ ಪೋಷಕರು ಇದು ನಮಗೆ ವರವಾಯಿತು ಎನ್ನುತ್ತಾರೆ.
ನೀಯತ್ ನಟ-ನಟಿಯರು: ಚಿತ್ರದಲ್ಲಿ ರಾಮ್ ಕಪೂರ್, ರಾಹುಲ್ ಬೋಸ್, ನಿಕಿ ಅನೇಜಾ ವಾಲಿಯಾ ದೀಪನ್ನಿತಾ ಶರ್ಮಾ, ಶಶಾಂಕ್ ಅರೋರಾ, ಶಹಾನಾ ಗೋಸ್ವಾಮಿ, ನೀರಜ್ ಕಬಿ, ಪ್ರಜಕ್ತಾ ಕೊಹ್ಲಿ ಮತ್ತು ಅಮೃತಾ ಪುರಿ - ಮೊದಲಾದವರ ದೊಡ್ಡ ತಾರಾಗಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


