ಬಾಲಿವುಡ್

ಕೊನೆಗೂ ರಾಖಿ ಸಾವಂತ್ ಜೊತೆಗಿನ ವಿವಾಹ ಒಪ್ಪಿಕೊಂಡ ಆದಿಲ್ ಖಾನ್: ಸುಖಾಂತ್ಯ ಕಂಡ ಮದುವೆ ಗಲಾಟೆ!

ರಾಖಿ ಜೊತೆಗಿನ ವಿವಾಹವನ್ನು ಆದಿಲ್ ಖಾನ್ ಅವರು ದೃಢಪಡಿಸಿದ್ದು, ಕೊನೆಗೂ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ಅವರ ನಡುವಿನ ಮದುವೆ ಗಲಾಟೆ ಸುಖಾಂತ್ಯ ಕಂಡಿದೆ.

ಕೊನೆಗೂ ರಾಖಿ ಸಾವಂತ್ ಜೊತೆಗಿನ ವಿವಾಹ ಒಪ್ಪಿಕೊಂಡ ಆದಿಲ್ ಖಾನ್: ಸುಖಾಂತ್ಯ ಕಂಡ ಮದುವೆ ಗಲಾಟೆ!
ಆದಿಲ್ ಖಾನ್ ಹಾಗೂ ರಾಖಿ ರಾವಂತ್.
Published On :

ಮುಂಬೈ: ರಾಖಿ ಜೊತೆಗಿನ ವಿವಾಹವನ್ನು ಆದಿಲ್ ಖಾನ್ ಅವರು ದೃಢಪಡಿಸಿದ್ದು, ಕೊನೆಗೂ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ಅವರ ನಡುವಿನ ಮದುವೆ ಗಲಾಟೆ ಸುಖಾಂತ್ಯ ಕಂಡಿದೆ.

ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಆದಿಲ್ ಖಾನ್ ದುರಾನಿ ಕೊನೆಗೂ ತಮ್ಮ ಮದುವೆ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ.

ಕೊನೆಗೂ ನಾನು ಈ ಮದುವೆಯನ್ನು ಘೋಷಿಸುತ್ತಿದ್ದೇನೆ. ನಾನು ರಾಖಿಯನ್ನು ಮದುವೆಯಾಗಿಲ್ಲ ಎಂದು ಎಲ್ಲಿಯೂ ಹೇಳಿರಲಿಲ್ಲ. ಕೆಲ ವಿಚಾರ, ಸಮಸ್ಯೆಗಳ ಸರಿಪಡಿಸುವ ಸಲುವಾದಿ ಈ ವಿಚಾರದಲ್ಲಿ ಮೌನ ತಾಳಿದ್ದೆಯಷ್ಟೇ. ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ರಾಖಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಆವರಣದ ಒಳಗಡೆ ಪಾಪ್ಪುಡಿ ಎಂದು ಬರೆದಿರುವುದು ಕಂಡು ಬಂದಿದೆ. ಬಹುಶಃ ಆದಿಲ್ ಇದೇ ಹೆಸರಿನಿಂದ ರಾಖಿ ಅವರನ್ನು ಕರೆಯುತ್ತಾರೆಂದೆನಿಸುತ್ತದೆ.

ಜೊತೆಗೆ ಆದಿಲ್ ಅವರು ತಮ್ಮ ಮದುವೆ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿದ್ದು, ಇದರಲ್ಲಿ ಆದಿಲ್ ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಶರ್ಟ್ ಧರಿಸಿರುವುದು ಕಂಡು ಬಂದಿದೆ.

ಇನ್ನು ರಾಖಿ ಸಾವಂತ್ ಸಾಂಪ್ರದಾಯಿಕ ಉಡುಗೆ ಧರಿಸಿದ್ದು, ಕುಂಕುಮ ಅಥವಾ ಬಿಂದಿ ಇಟ್ಟಿರಲಿಲ್ಲ. ತಲೆಯ ಮೇಲೆ ದುಪಟ್ಟಾ ಕವರ್ ಮಾಡಿಕೊಂಡಿರುವುದು ಕಂಡು ಬಂದಿದೆ.

ಆದಿಲ್ ಅವರ ಈ ಪೋಸ್ಟ್'ಗೆ ಕಮೆಂಟ್ ಮಾಡಿರುವ ರಾಖಿ ಸಾವಂತ್ ಅವರು, ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್ ಎಂದು ಬರೆದಿದ್ದಾರೆ.

ಬಾಲಿವುಡ್‌ ನಟಿ ರಾಖಿ ಸಾವಂತ್‌ ಇತ್ತೀಚೆಗೆ ತಮ್ಮ ಬಾಯ್‌ಫ್ರೆಂಡ್‌ ಆದಿಲ್ ಖಾನ್‌ ದುರ್ರಾನಿ ಅವರನ್ನು ಮದುವೆ ಆಗಿದ್ದಾರೆ ಎನ್ನಲಾದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಆದರೆ, ಆದಿಲ್ ಅವರು ಮಾತ್ರ ಈ ಬಗ್ಗೆ ಮೌನ ತಾಳಿದ್ದರು.

ಈ ನಡುವೆ ರಾಖಿ ಸಾವಂತ್ ಅವರ ಮಾತ್ರ ನನಗೆ ಮೋಸವಾಗಿದೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು.

ರಾಖಿ ಸಾವಂತ್‌ ತಾಯಿ ಜಯಾ ಭೇಡಾ ಅವರು ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಾಖಿ, ಆಸ್ಪತ್ರೆಯಿಂದಲೇ ಲೈವ್‌ ಮಾಡಿ ತನ್ನ ತಾಯಿಗೆ ಬ್ರೈನ್‌ ಟ್ಯೂಮರ್‌ ಇದ್ದು ನೀವೆಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಕೂಡಾ ರಾಖಿ ಸಾವಂತ್‌ ತೋರಿಸಿದ್ದರು.

ಇದರ ಬೆನ್ನಲ್ಲೇ ರಾಖಿ ಸಾವಂತ್‌, ತಾವು ಆದಿಲ್‌ ಖಾನ್‌ನನ್ನು ಮದುವೆ ಆಗಿದ್ದಾರೆ ಎನ್ನಲಾದ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿದ ಹಲವರು ಅತ್ತ ನಿಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮಗೆ ಮದುವೆ ಬೇಕಿತ್ತಾ? ಎಂದು ಪ್ರಶ್ನಿಸಿದ್ದರು.

ಇನ್ನೂ ಕೆಲವರು ರಾಖಿ ಸಾವಂತ್‌ ಗರ್ಭಿಣಿ, ಆದ್ದರಿಂದಲೇ ಇಷ್ಟು ತರಾತುರಿಯಲ್ಲಿ ಮದುವೆಯಾಗಿದ್ದಾರೆ ಎಂದಿದ್ದರು. ಆದರೆ, ನಂತರವಷ್ಟೇ ರಾಖಿ ಹಾಗೂ ಆದಿಲ್‌ 6 ತಿಂಗಳ ಹಿಂದೆಯೇ ಮದುವೆಯಾಗಿದ್ದಾರೆ ಎಂಬ ನಿಜ ಎಲ್ಲರಿಗೂ ತಿಳಿದುಬಂದಿತ್ತು.

ಆದರೆ ರಾಖಿ ಸಾವಂತ್‌, ಆದಿಲ್‌ ಖಾನ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಆದಿಲ್‌ ಖಾನ್‌ ಹಾಗೂ ನಾನು 6 ತಿಂಗಳ ಹಿಂದೆಯೇ ಮದುವೆಯಾಗಿದ್ದೆವು. ಆತನ ಇಷ್ಟದಂತೆ ನಾನು ಫಾತಿಮಾ ಆಗಿ ಬದಲಾದೆ. ನಮ್ಮ ಮದುವೆ ವಿಚಾರವನ್ನು ಆದಿಲ್‌ ಖಾನ್‌ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು. ಈಗ ನೋಡಿದರೆ ಆತ ನನ್ನನ್ನು ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಕಳೆದ ಒಂದು ವಾರದಿಂದ ರಾಖಿ ಆದಿಲ್‌ ಮದುವೆ ವಿಚಾರವೇ ಭಾರೀ ಸುದ್ದಿ ಮಾಡುತ್ತಿತ್ತು. ಆದರೆ, ಇದೀಗ ಈ ವಿವಾದ ಸುಖಾಂತ್ಯ ಕಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.