'ಕಾಲೇಜು ಹುಡುಗಿಯರು ಪ್ರತಿ ವಾರ ಬಾಯ್ ಫ್ರೆಂಡ್ ಚೇಂಜ್ ಮಾಡ್ತಾರೆ, ಮುರಿದುಬಿದ್ದ ನನ್ನ ನಿಶ್ಚಿತಾರ್ಥದ ಬಗ್ಗೆ ಯಾಕೆ ಗೂಗಲ್ ಸರ್ಚ್ ಮಾಡ್ತೀರಿ?'
ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ.

ಮುಂಬಯಿ: ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ.
1995ರ ನಂತರದಲ್ಲಿ ನಟಿ ರವೀನಾ ಟಂಡನ್ ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಆಗಿತ್ತು. ಇನ್ನೇನು ಇವರಿಬ್ಬರು ಮದುವೆಯಾಗ್ತಾರೆ ಎಂದುಕೊಳ್ಳುವಾಗ ನಿಶ್ಚಿತಾರ್ಥ ಮುರಿದು ಬಿತ್ತು. ಇವರಿಬ್ಬರು ಬೇರೆ ಬೇರೆ ಸಂಗಾತಿಯನ್ನು ಹುಡುಕಿಕೊಂಡು, ಮದುವೆಯಾಗಿ ಖುಷಿಯಾಗಿದ್ದಾರೆ. ಆದರೂ ಕೂಡ ಪದೇ ಪದೇ ನಿಶ್ಚಿತಾರ್ಥದ ವಿಷಯದ ಬಗ್ಗೆ ಮಾತನಾಡುವುದು ರವೀನಾಗೆ ಬೇಸರ ತರಿಸಿದೆ.
1994ರಲ್ಲಿ 'ಮೊಹ್ರಾ' ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಈ ಚಿತ್ರ ಹಿಟ್ ಆಯ್ತು. ಅದಾಗಿ 1995ರಲ್ಲಿ ರವೀನಾ ಟಂಡನ್, ಅಕ್ಷಯ್ ಕುಮಾರ್ ಅವರು ಡೇಟ್ ಮಾಡಲು ಆರಂಭಿಸಿದೆವು.
ನಮ್ಮಿಬ್ಬರ ನಿಶ್ಚಿತಾರ್ಥ ಮುರಿದೋಯ್ತು. ಆಮೇಲೆ ನಾನು ಬೇರೆಯವರ ಜೊತೆ ಡೇಟ್ ಮಾಡಿದೆ, ಅಕ್ಷಯ್ ಕೂಡ ಬೇರೆಯವರ ಜೊತೆ ಡೇಟ್ ಮಾಡಿದರು. ಆದರೂ ಕೂಡ ಗೂಗಲ್ನಲ್ಲಿ ನಮ್ಮ ನಿಶ್ಚಿತಾರ್ಥದ ಬಗ್ಗೆ ಯಾಕೆ ಸರ್ಚ್ ಮಾಡ್ತೀರಿ? ಇಬ್ಬರೂ ಬೇರೆ ಬೇರೆ ದಾರಿ ಕಂಡುಕೊಂಡು ಬಂದಾಗಿದೆ. ಈಗ ಇಬ್ಬರ ಮಧ್ಯೆ ಅಸೂಯೆ, ಹೊಟ್ಟೆಕಿಚ್ಚು ಎಲ್ಲಿಂದ ಬರುತ್ತದೆ?" ಎಂದು ರವೀನಾ ಟಂಡನ್ ಹೇಳಿದ್ದಾರೆ.
ಇದನ್ನೂ ಓದಿ: 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಮಾಲೀಕ ಎನ್ನುವ ಸುದ್ದಿಗಳಿಗೆ ನಟ ಅಕ್ಷಯ್ ಕುಮಾರ್ ಖಡಕ್ ಉತ್ತರ...
ಮೊಹ್ರಾ ಸಿನಿಮಾ ಟೈಮ್ನಲ್ಲಿ ನಾವಿಬ್ಬರೂ ಹಿಟ್ ಜೋಡಿಗಳು. ನಾವಿಬ್ಬರೂ ಭೇಟಿಯಾದ್ರೆ ಮಾತನಾಡುತ್ತೇವೆ. ಎಲ್ಲರೂ ಜೀವನದಲ್ಲಿ ಮುಂದೆ ಸಾಗುತ್ತಾರೆ. ವಾರಕ್ಕೊಮ್ಮೆ ಕಾಲೇಜಿನಲ್ಲಿ ಹುಡುಗಿಯರು ಬಾಯ್ಫ್ರೆಂಡ್ ಬದಲಾಯಿಸುತ್ತಾರೆ. ಆದರೆ ಒಂದು ಮುರಿದುಬಿದ್ದ ನಿಶ್ಚಿತಾರ್ಥ ನನ್ನ ತಲೆಗೆ ಇನ್ನೂ ಅಂಟಿಕೊಂಡಿದ್ದು ಯಾಕೆ ಅಂತ ಅರ್ಥ ಆಗುತ್ತಿಲ್ಲ. ಎಲ್ಲರೂ ಮುಂದೆ ಸಾಗ್ತಾರೆ, ವಿಚ್ಛೇದನ ಆಗಿ ಇನ್ನೊಂದು ಜೀವನ ನೋಡಿಕೊಳ್ತಾರೆ. ಅದರಲ್ಲಿ ಏನಿದೆ? ಎಂದು ರವೀನಾ ಟಂಡನ್ ಗರಂ ಆಗಿದ್ದಾರೆ.
ಬ್ರೇಕಪ್ ಆದ್ಮೇಲೆ ರವೀನಾ ಟಂಡನ್ ರೀತಿ ಕಾಣುವ ಹುಡುಗಿಯ ಜೊತೆ ಅಕ್ಷಯ್ ಕುಮಾರ್ ಡೇಟ್ ಮಾಡಲು ಆರಂಭಿಸಿದ್ರು ಅಂತ ಹೇಳಲಾಗಿತ್ತಂತೆ. ಆದರೆ ಅದು ಆಗ ನನಗೆ ಗೊತ್ತಾಗಲಿಲ್ಲ ಎಂದು ರವೀನಾ ಟಂಡನ್ ಹೇಳಿದ್ದಾರೆ. ರವೀನಾ ಟಂಡನ್ ಅವರು ಉದ್ಯಮಿ ಅನಿಲ್ ತಡಾನಿಯವರನ್ನು ಮದುವೆಯಾಗಿದ್ದಾರೆ. ಇನ್ನೂ ಅಕ್ಷಯ್ ಕುಮಾರ್ ಕೂಡ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


