ಬಾಲಿವುಡ್

ಲಗಾನ್, ಜೋಧಾ ಅಕ್ಬರ್ ಸಿನಿಮಾ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ!

ಬಾಲಿವುಡ್‌ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣಾಗಿದ್ದಾರೆ. ಹಲವು ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದರು.

ಲಗಾನ್, ಜೋಧಾ ಅಕ್ಬರ್ ಸಿನಿಮಾ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ!
ನಿತಿನ್ ದೇಸಾಯಿ
Published On :

ಬಾಲಿವುಡ್‌ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣಾಗಿದ್ದಾರೆ. ಹಲವು ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದರು.   

ನಿರ್ದೇಶಕ ನಿತಿನ್ ದೇಸಾಯಿ ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ ಇವರು ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿ ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದರು.

ಸಂಜಯ್‌ ಲೀಲಾ ಬನ್ಸಾಲಿ, ವಿದ್ಯು ವಿನೋದ್ ಚೋಪ್ರಾ, ಹೀಗೆ ಹಲವಾರು ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಇವರು ತಮ್ಮ ಉತ್ತಮ ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರಪ್ರಶಸ್ತಿ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನಿರ್ದೇಶಕ ಮುಂದಿನ ವಾರ (ಆಗಸ್ಟ್‌ 9) ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಕರ್ಜತ್‌ನ ಎನ್‌ಡಿ ಸ್ಟುಡಿಯೋದಲ್ಲಿ ನೇಣಿಗೆ ಶರಣಾಗಿದ್ದಾರೆ. ಕಲಾ ನಿರ್ದೇಶಕ ನಿತಿನ್‌ ದೇಸಾಯಿ ಲಗಾನ್, ದೇವದಾಸ್, ಜೋದಾ ಅಕ್ಬರ್, ಹಮ್ ದಿಲ್ ದೆ ಜುಕೆ ಸನಂ, ಪ್ರೇಮ್ ರತನ್ ದನ್ ಪಾಯೋದಂತಹ ಸೂಪರ್‌ ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು.

2019 ರ ಪಾಣಿಪತ್ ಸಿನಿಮಾದಲ್ಲಿ ಅಶುತೋಷ್ ಗೋವಾರಿಕರ್ ಅವರೊಂದಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದು ಕೊನೆಯ ಚಿತ್ರವಾಗಿತ್ತು. ಅವರ ಕೆಲಸಕ್ಕಾಗಿ, ಹಾಲಿವುಡ್‌ನ ಪ್ರತಿಷ್ಠಿತ ಕಲಾ ನಿರ್ದೇಶಕರ ಗಿಲ್ಡ್ ಫಿಲ್ಮ್ ಸೊಸೈಟಿ ಮತ್ತು ಅಮೇರಿಕನ್ ಸಿನಿಮಾಥೆಕ್ ಅವರನ್ನು ಗೌರವಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.