ಬಾಲಿವುಡ್

'ತೂ ಚೀಜ್ ಬಡಿ ಹೈ ಮಸ್ಕ್ ಮಸ್ಕ್': ಟ್ವಿಟರ್'ನಲ್ಲಿ ಬ್ಲ್ಯೂಟಿಕ್ ಮರು ಸ್ಥಾಪನೆ, ಎಲಾನ್ ಮಸ್ಕ್'ಗೆ ಅಮಿತಾಬ್ ಬಚ್ಚನ್ ಧನ್ಯವಾದ ಹೇಳಿದ್ದು ಹೀಗೆ....

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬ್ಲ್ಯೂಟಿಕ್ ಮರುಸ್ಥಾಪನೆಗೊಂಡಿದ್ದು, ಇದಕ್ಕೆ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಹೇಳಿದ್ದಾರೆ.

'ತೂ ಚೀಜ್ ಬಡಿ ಹೈ ಮಸ್ಕ್ ಮಸ್ಕ್': ಟ್ವಿಟರ್'ನಲ್ಲಿ ಬ್ಲ್ಯೂಟಿಕ್ ಮರು ಸ್ಥಾಪನೆ, ಎಲಾನ್ ಮಸ್ಕ್'ಗೆ ಅಮಿತಾಬ್ ಬಚ್ಚನ್ ಧನ್ಯವಾದ ಹೇಳಿದ್ದು ಹೀಗೆ....
ಅಮಿತಾಭ್ ಬಚ್ಚನ್
Published On :

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬ್ಲ್ಯೂಟಿಕ್ ಮರುಸ್ಥಾಪನೆಗೊಂಡಿದ್ದು, ಇದಕ್ಕೆ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಹೇಳಿದ್ದಾರೆ.

ಬ್ಲ್ಯೂಟಿಕ್ ಮರುಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಹೇ ಮಸ್ಕ್ ಬ್ರದರ್! ಧನ್ಯವಾದಗಳು. ನನ್ನ ಹೆಸರಿನ ಮುಂದೆ ಬ್ಲ್ಯೂ ಟಿಕ್ ಮರುಸ್ಥಾಪನೆಯಾಗಿದೆ. ಇದೀಗ ನಾನೇನು ಹೇಳಲಿ? ಹಾಡು ಹೇಳಬೇಕೆಂದು ಎನಿಸುತ್ತಿದೆ. ಕೇಳಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ಇದೇ ವೇಳೆ ತೂ ಚೀಜ್ ಬಡಿ ಹೈ ಮಸ್ಕ್ ಮಸ್ಕ್... ತೂ ಚೀಜ್ ಬಡಿ ಹೈ ಮಸ್ಕ್ ಎಂದು ಹೇಳಿದ್ದಾರೆ.

ಶುಕ್ರವಾರವಷ್ಟೇ ದಿಟ್ಟ ಹೆಜ್ಜೆ ಇಟ್ಟಿದ್ದ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್, ಹಣ ಪಾವತಿಸದ ಹಲವು ಸೇಲಿಬ್ರಿಟಿಗಳ ಟ್ವಿಟ್ಟರ್ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದುಹಾಕಿತ್ತು. ಇದರೊಂದಿಗೆ ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದ ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಬ್ಲೂ ಟಿಕ್ ನ್ನೂ ಕೂಡ ಕಸಿದುಕೊಂಡಿತ್ತು.

ಈ ಕುರಿತು ಟ್ವೀಟ್ ಮಾಡಿದ್ದ ಅಮಿತಾಭ್ ಬಚ್ಚನ್ ಅವರು, 'ಟಿ4623 ಎ ಟ್ವಿಟ್ಟರ್ ಅಣ್ಣ! ಕೇಳ್ತಾ ಇದೀಯಾ? ಇದೀಗ ನಾನು  ಹಣವನ್ನು ಕಟ್ಟಿದ್ದಾಗಿದೆ... ಹೀಗಾಗಿ ನನ್ನ ಹೆಸರಿನ ಮುಂದೆ ಇರುತ್ತಲ್ಲ ಆ ನೀಲ ಕಮಲ, ಅದಾದರೂ ವಾಪಸ್ ಕೊಡು, ಜನರಿಗೆ ನಾನು ಅಮಿತಾಭ್ ಬಚ್ಚನ್ ಅಂತ ಗೊತ್ತಾಗಲಿ. ಕೈಮುಗಿದಿದ್ದಾಗಿದೆ, ಇನ್ನೇನು ನಿಮ್ಮ ಕಾಲಿಗೂ ಬೀಳಬೇಕೆ?' ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.