ಸಲ್ಮಾನ್ ಖಾನ್ ಗೆ ಡೆಂಗ್ಯೂ, ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹರ್
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಡೆಂಗ್ಯೂನಿಂದ ಬಳಲುತ್ತಿರುವ ಕಾರಣ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 16ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್...

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಡೆಂಗ್ಯೂನಿಂದ ಬಳಲುತ್ತಿರುವ ಕಾರಣ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 16ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಮೂಲಗಳು ಶನಿವಾರ ತಿಳಿಸಿವೆ.
ವರದಿಗಳ ಪ್ರಕಾರ, ಸಲ್ಮಾನ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಮತ್ತು ದೀರ್ಘಕಾಲದ ಕಲರ್ಸ್ ಚಾನೆಲ್ ಕಾರ್ಯಕ್ರಮದ ಹೋಸ್ಟಿಂಗ್ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಕರಣ್ ಜೋಹರ್ ವಹಿಸಿಕೊಂಡಿದ್ದಾರೆ.
"ಸಲ್ಮಾನ್ ಅವರು ಅಸ್ವಸ್ಥರಾಗಿದ್ದಾರೆ ಎಂದು ಅವರ ತಂಡದಿಂದ ನಮಗೆ ತಿಳಿಸಲಾಗಿದೆ. ಅವರು ಈ ಗುರುವಾರ ಶೂಟಿಂಗ್‌ಗೆ ಬಂದಿಲ್ಲ. ಸಾಮಾನ್ಯವಾಗಿ ಅವರು ಶುಕ್ರವಾರ ಮತ್ತು ಶನಿವಾರದ ಸಂಚಿಕೆಗಳ 'ವೀಕೆಂಡ್ ಕಾ ವಾರ್' ಅನ್ನು ಗುರುವಾರವೇ ಶೂಟ್ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
"ಕರಣ್ ಜೋಹರ್ ಅವರು ಸಲ್ಮಾನ್ ಸ್ಥಾನವನ್ನು ತುಂಬುತ್ತಿದ್ದಾರೆ. ಅವರು ದೀಪಾವಳಿ ವಿಶೇಷ ಸೇರಿದಂತೆ ಬಿಗ್ ಬಾಸ್ ನ ಮೂರು ಸಂಚಿಕೆಗಳಿಗೆ ಚಿತ್ರೀಕರಣ ಮಾಡಲಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಬದಲಾಗಿ ಸೋಮವಾರ ಪ್ರಸಾರವಾಗಲಿದೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಶನಿವಾರ ರಾತ್ರಿ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ 'ಸಲ್ಮಾನ್ ಖಾನ್ ಅಸ್ವಸ್ಥರಾಗಿದ್ದಾರೆ. ಅವರ ಬದಲಿಗೆ ಕರನ್ ಜೋಹರ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ' ಎಂದು ಬಿಗ್ ಬಾಸ್ ತಂಡ ಘೋಷಿಸಲಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


