ದಿವಂಗತ ಗಣಿ ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅಕ್ಷಯ್ ಕುಮಾರ್
1989ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರವಾಹಕ್ಕೆ ಸಿಲುಕಿದ ಕ್ವಾರಿಯಿಂದ 64 ಗಣಿಗಾರರನ್ನು ರಕ್ಷಿಸಿದ ಗಣಿ ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಅವರ ಪಾತ್ರದಲ್ಲಿ ಮುಂದಿನ ಸಿನಿಮಾದಲ್ಲಿ ನಟಿಸುವುದಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಬುಧವಾರ ಹೇಳಿದ್ದಾರೆ.

ಮುಂಬೈ: 1989ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರವಾಹಕ್ಕೆ ಸಿಲುಕಿದ ಕ್ವಾರಿಯಿಂದ 64 ಗಣಿಗಾರರನ್ನು ರಕ್ಷಿಸಿದ ಗಣಿ ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಅವರ ಪಾತ್ರದಲ್ಲಿ ಮುಂದಿನ ಸಿನಿಮಾದಲ್ಲಿ ನಟಿಸುವುದಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಬುಧವಾರ ಹೇಳಿದ್ದಾರೆ.
ದೇಶದ 'ಮೊದಲ ಕಲ್ಲಿದ್ದಲು ಗಣಿ ರಕ್ಷಣಾ ಮಿಷನ್' ನ 33ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಿಲ್ ಅವರನ್ನು ನೆನಪಿಸಿಕೊಂಡ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರ ಟ್ವಿಟರ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ನಟ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ.
33 ವರ್ಷಗಳ ಹಿಂದೆ ಈ ದಿನ ಭಾರತದ ಮೊದಲ ಕಲ್ಲಿದ್ದಲು ಗಣಿ ರಕ್ಷಣಾ ಕಾರ್ಯಾಚರಣೆಯನ್ನು ನೆನಪಿಸಿಕೊಂಡಿದ್ದಕ್ಕಾಗಿ ಕೇಂದ್ರ ಸಚಿವಲ ಪ್ರಲ್ಹಾದ್ ಜೋಶಿ ಜೀ ಅವರಿಗೆ ಕೃತಜ್ಞತೆಗಳು. ಸಿನಿಮಾದಲ್ಲಿ ಸರ್ದಾರ್ ಜಸ್ವಂತ್ ಸಿಂಗ್ ಗಿಲ್ ಪಾತ್ರವನ್ನು ನಿರ್ವಹಿಸುತ್ತಿರುವುದು ನನಗೆ ಹೆಮ್ಮೆಯಿದೆ. ಇದು ಈವರೆಗೂ ಬಂದಿಲ್ಲದ ಕಥೆ! ಎಂದು ಅಕ್ಷಯ್ ಕುಮಾರ್ ಸಚಿವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಅಮೃತಸರದ ನಿವಾಸಿಯಾದ ಗಿಲ್ ಅವರು 1989 ರಲ್ಲಿ ತಾವು ತೋರಿದ ಧೈರ್ಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು. ಅವರು ಪಶ್ಚಿಮ ಬಂಗಾಳದ ರಾಣಿಗಂಜ್ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಗಣಿಯಿಂದ 64 ಜನರ ಪ್ರಾಣವನ್ನು ರಕ್ಷಿಸಿದ್ದರು. ಗಿಲ್ 2019 ರಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.
ಇದನ್ನೂ ಓದಿ: 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಮಾಲೀಕ ಎನ್ನುವ ಸುದ್ದಿಗಳಿಗೆ ನಟ ಅಕ್ಷಯ್ ಕುಮಾರ್ ಖಡಕ್ ಉತ್ತರ...
ಇನ್ನೂ ಹೆಸರಿಡದ ಈ ಚಿತ್ರವನ್ನು ಪೂಜಾ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿದ್ದು, ಅಕ್ಷಯ್ ಅಭಿನಯದ 'ರುಸ್ತೋಮ್' ಚಿತ್ರವನ್ನು ನಿರ್ದೇಶಿಸಿದ್ದ ಟಿನು ಸುರೇಶ್ ದೇಸಾಯಿ ಅವರೇ ಈ ಸಿನಿಮಾದ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ ಎಂದು ವರದಿಯಾಗಿದೆ.
ಇಂದು ಗಿಲ್ ಅವರನ್ನು ಸ್ಮರಿಸಿದ್ದಕ್ಕಾಗಿ ಪ್ರಲ್ಹಾದ್ ಜೋಶಿ ಜೀ ಅವರಿಗೆ ಕೃತಜ್ಞತೆಗಳು. ಅತ್ಯಂತ ಶಕ್ತಿಶಾಲಿ ವೀರರು ನೆನಪಿನಲ್ಲಿ ಉಳಿಯುತ್ತಾರೆ. ಇದು ಅನೇಕರ ಜೀವಗಳನ್ನು ಉಳಿಸಲು ಸ್ಫೂರ್ತಿಯಾಗಿರುತ್ತದೆ!. ಬಹಳ ಹೆಮ್ಮೆಯಿಂದ ದಿವಂಗತ ಸರ್ದಾರ್ ಜಸ್ವಂತ್ ಸಿಂಗ್ ಗಿಲ್ ಅವರ ದೇಶದ ಮೊದಲನೇ ರಕ್ಷಣಾ ಸಾಹಸವನ್ನು ನಾವು ನಿಮ್ಮ ಮುಂದೆ ತರುತ್ತೇವೆ' ಎಂದು ಪ್ರೊಡಕ್ಷನ್ ಬ್ಯಾನರ್ ಟ್ವೀಟ್ ಮಾಡಿದೆ.
1989ರಲ್ಲಿ ಪ್ರವಾಹಕ್ಕೆ ಸಿಲುಕಿದ ಕಲ್ಲಿದ್ದಲು ಗಣಿಯಿಂದ 65 ಕಾರ್ಮಿಕರನ್ನು ರಕ್ಷಿಸುವಲ್ಲಿನ ಅವರ ವೀರೋಚಿತ ಪಾತ್ರಕ್ಕಾಗಿ ದಿವಂಗತ ಸರ್ದಾರ್ ಜಸ್ವಂತ್ ಸಿಂಗ್ ಗಿಲ್ ಜಿ ಅವರನ್ನು ಸ್ಮರಿಸುತ್ತಿದ್ದೇವೆ. ಭಾರತದ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿನಿತ್ಯ ಹೋರಾಡುವ ನಮ್ಮ ಕೋಲ್ ವಾರಿಯರ್ಸ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


