ಜಗ್ ಜಗ್ ಜೀಯೋ ಚಿತ್ರ ಉತ್ತಮ ಆರಂಭ; ಮೊದಲ ದಿನವೇ 9 ಕೋಟಿ ಬಾಚಿದ ವರುಣ್ ಧವನ್
ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರ ಶುಕ್ರವಾರ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ದಿನವೇ ಬರೊಬ್ಬರಿ 9 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ವರದಿ...

ಮುಂಬೈ: ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರ ಶುಕ್ರವಾರ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ದಿನವೇ ಬರೊಬ್ಬರಿ 9 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ವರದಿ ಮಾಡಿದ್ದಾರೆ.
ವರುಣ್ ಧವನ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನೀತು ಕಪೂರ್, ಕಿಯಾರಾ ಅಡ್ವಾಣಿ, , ಮನೀಶ್ ಪಾಲ್ ಮತ್ತು ಪ್ರಜಕ್ತಾ ಕೋಲಿ ನಟಿಸಿದ್ದಾರೆ. ಮುಂಬೈ ಮತ್ತು ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಚಿತ್ರವು ವಿಶೇಷವಾಗಿ ಉತ್ತಮವಾಗಿ ಪ್ರದರ್ಶನ ಕಂಡಿದೆ ಎಂದು ತರಣ್ ಆದರ್ಶ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಜಗ್‌ಜಗ್ ಜೀಯೋ ಚಿತ್ರವನ್ನ ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಲನಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


