ಮದುವೆಯಾಗಿಲ್ಲ, ಆದರೆ ಬೇಷರತ್ ಪ್ರೀತಿಯಿಂದ ಆವರಿಸಲ್ಪಟ್ಟಿದ್ದೇನೆ: ಸುಶ್ಮಿತಾ ಸೇನ್
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಅವರು ನಟಿ ಸುಶ್ಮಿತಾ ಸೇನ್ ಅವರನ್ನು ಬೆಟರ್ ಹಾಫ್ ಎಂದು ಕರೆದಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು....

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಅವರು ನಟಿ ಸುಶ್ಮಿತಾ ಸೇನ್ ಅವರನ್ನು ಬೆಟರ್ ಹಾಫ್ ಎಂದು ಕರೆದಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಸುಶ್ಮಿತಾ ಸೇನ್ ಮಕ್ಕಳೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.
ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು ಗುರುವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತಗೊಳಿಸಿದ್ದ ಅವರು, ತಮ್ಮ ಟ್ವೀಟ್‌ನಲ್ಲಿ ಸುಶ್ಮಿತಾ ಸೇನ್ ಅವರನ್ನು ಬೆಟರ್ ಹಾಫ್ ಎಂದು ಕರೆದಿದ್ದು, ನಾವು ಮದುವೆಯಾಗಿಲ್ಲ. ಕೇವಲ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.
ಇನ್ ಸ್ಟಾಗ್ರಾಮ್ ನಲ್ಲಿ ತನ್ನ ಇಬ್ಬರು ಪುತ್ರಿಯರಾದ ರೆನೀ ಮತ್ತು ಅಲಿಸಾ ಅವರೊಂದಿಗೆ ಫೋಟೋವನ್ನು ಹಂಚಿಕೊಂಡಿರುವ ಸುಶ್ಮಿತಾ ಸೇನ್, ನಾವು ಮದುವೆಯಾಗಿಲ್ಲ, ಉಂಗುರವನ್ನು ಬದಲಾಯಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

''ನಾನು ಸಂತೋಷ ಭರಿತ ಸ್ಥಳದಲ್ಲಿದ್ದೇನೆ!!! ಮದುವೆಯಾಗಿಲ್ಲ. ಯಾವುದೇ ಉಂಗುರಗಳಿಲ್ಲ. ಬೇಷರತ್ತಾದ ಪ್ರೀತಿಯಿಂದ ಆವರಿಸಲ್ಪಟ್ಟಿದ್ದೇನೆ! !.. ಇಷ್ಟು ಸ್ಪಷ್ಟನೆ ಸಾಕು ಅಂದುಕೊಳ್ಳುತ್ತೇನೆ. ನೀವು ಕೆಲಸಕ್ಕೆ ಮರಳಿ ಎಂದು ಸುಶ್ಮಿತಾ ಸೇನ್ ತಮ್ಮ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


