ಶೂಟಿಂಗ್ ವೇಳೆ ನಟಿ ಹಿಮಾಂಶಿ ಖುರಾನಾ ಮೂಗಿನಿಂದ ರಕ್ತಸ್ರಾವ: ರೊಮೇನಿಯಾದಲ್ಲಿ ಆಸ್ಪತ್ರೆಗೆ ದಾಖಲು
'ಬಿಗ್ ಬಾಸ್ 13' ಖ್ಯಾತಿಯ ಹಿಮಾಂಶಿ ಖುರಾನಾ ಅವರ ಮೂಗಿನಿಂದ ರಕ್ತಸ್ರಾವಾಗಿದ್ದು ಅಲ್ಲದೆ ತೀವ್ರ ಜ್ವರದಿಂದ ಬಳಲುತ್ತಿರುವ ಅವರನ್ನು ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದೆ.

ನವದೆಹಲಿ: 'ಬಿಗ್ ಬಾಸ್ 13' ಖ್ಯಾತಿಯ ಹಿಮಾಂಶಿ ಖುರಾನಾ ಅವರ ಮೂಗಿನಿಂದ ರಕ್ತಸ್ರಾವಾಗಿದ್ದು ಅಲ್ಲದೆ ತೀವ್ರ ಜ್ವರದಿಂದ ಬಳಲುತ್ತಿರುವ ಅವರನ್ನು ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದೆ.
ನಟಿ ತನ್ನ ಮುಂಬರುವ ಪಂಜಾಬಿ ಚಿತ್ರ 'ಫಟ್ಟೋ ದೇ ಯಾರ್ ಬಡೇ ನೆ' ಚಿತ್ರೀಕರಣದಲ್ಲಿದ್ದರು. 'ಜೀತ್ ಜಾಯೇಂಗೆ ಜಹಾನ್', 'ಸದ್ದಾ ಹಕ್', 'ಲೆದರ್ ಲೈಫ್', 'ಅಫ್ಸರ್' ಮತ್ತು ಇನ್ನೂ ಅನೇಕ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ಹಿಮಾಂಶಿ, ಚಿತ್ರದ ಸೀಕ್ವೆನ್ಸ್ಗಾಗಿ ಮಳೆಯ ಅಡಿಯಲ್ಲಿ ಚಿತ್ರೀಕರಣ ಮಾಡಬೇಕಾದರೆ ಅಸ್ವಸ್ಥರಾಗಿದ್ದಾರೆ.
ಹಿಮಾಂಶಿ ಅವರು ರೊಮೇನಿಯಾದಲ್ಲಿ ಮೈನಸ್ 7 ಡಿಗ್ರಿ ಸೆಲ್ಸಿಯಸ್ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಈ ಕಾರಣದಿಂದಾಗಿ ನಟಿಗೆ ತೀವ್ರ ಜ್ವರ ಕಾಣಿಸಿಕೊಂಡಿತು ಮತ್ತು ನಂತರ ಅವರ ಮೂಗಿನಿಂದ ರಕ್ತಸ್ರಾವವಾಗ ತೊಡಗಿತು. ಅನಾರೋಗ್ಯದ ಹೊರತಾಗಿಯೂ ಅವರು ಚಿತ್ರೀಕರಣವನ್ನು ಮುಂದುವರೆಸಿದ್ದು ನಂತರ ಆಸ್ಪತ್ರೆಗೆ ದಾಖಲಾದರು.
ಹಿಮಾಂಶಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ 'ಬಿಗ್ ಬಾಸ್ 13' ಮನೆಗೆ ಪ್ರವೇಶಿಸಿದ್ದರು. ಅವರು ಶಹನಾಜ್ ಗಿಲ್ ಅವರೊಂದಿಗೆ ಸಾಕಷ್ಟು ಜಗಳವಾಡಿದ್ದರು. ಬಿಗ್ ಬಾಸ್ ನಲ್ಲಿ ತನ್ನ ಸಹ-ಸ್ಪರ್ಧಿ ಅಸಿಮ್ ರಿಯಾಜ್ ಪ್ರೀತಿ ಪಾಶದಲ್ಲಿ ಬಿದ್ದಳು. ಇಬ್ಬರೂ ಮನೆಯೊಳಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಅವರ ಸಂಬಂಧ ಮುಂದುವರೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


