ಬಾಲಿವುಡ್

‘ನಾನು ಬದುಕಿದ್ದೇನೆ’: ಮಗ ತನ್ನನ್ನು ಕೊಂದಿದ್ದಾನೆ ಎಂಬ ವದಂತಿ ವಿರುದ್ಧ ಕೇಸ್ ದಾಖಲಿಸಿದ ನಟಿ ವೀಣಾ ಕಪೂರ್

ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಪುತ್ರನೇ ಕೊಲೆ ಮಾಡಿದ್ದಾನೆ ಎಂಬ ವದಂತಿಗಳು ಹರಡಿದ ಕೆಲವು ದಿನಗಳ ನಂತರ, ಸ್ವತಃ ನಟಿ ತನ್ನ ಮಗನೊಂದಿಗೆ ಮುಂಬೈ ಪೊಲೀಸ್ ಠಾಣೆ ಆಗಮಿಸಿ ತಪ್ಪು ಮಾಹಿತಿ ಹರಡಿದವರ...

‘ನಾನು ಬದುಕಿದ್ದೇನೆ’: ಮಗ ತನ್ನನ್ನು ಕೊಂದಿದ್ದಾನೆ ಎಂಬ ವದಂತಿ ವಿರುದ್ಧ ಕೇಸ್ ದಾಖಲಿಸಿದ ನಟಿ ವೀಣಾ ಕಪೂರ್
ನಟಿ ವೀಣಾ ಕಪೂರ್
Published On :

ಮುಂಬೈ: ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಪುತ್ರನೇ ಕೊಲೆ ಮಾಡಿದ್ದಾನೆ ಎಂಬ ವದಂತಿಗಳು ಹರಡಿದ ಕೆಲವು ದಿನಗಳ ನಂತರ, ಸ್ವತಃ ನಟಿ ತನ್ನ ಮಗನೊಂದಿಗೆ ಮುಂಬೈ ಪೊಲೀಸ್ ಠಾಣೆ ಆಗಮಿಸಿ ತಪ್ಪು ಮಾಹಿತಿ ಹರಡಿದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ, ಇದು ಸುಳ್ಳು ಸುದ್ದಿ ಮತ್ತು ವಾಸ್ತವವಾಗಿ ಎಲ್ಲೋ ಹತ್ಯೆಗೀಡಾದ ವ್ಯಕ್ತಿಯೊಂದಿಗೆ ತನ್ನ ಹೆಸರು ತಳಕುಹಾಕಿದ್ದಾರೆ. ಆ ಕೊಲೆ ಜುಹುದಲ್ಲಿ ನಡಿದಿದೆ. ಆದರೆ ನಾನು ಇರುವುದು ಗೋರೆಗಾಂವ್‌ನಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.

ವೀಣಾ ಕಪೂರ್ ಅವರ ಪುತ್ರ ಅಭಿಷೇಕ್ ಚಡಾ ಕೂಡ ಈ ವದಂತಿಗಳನ್ನು ಖಂಡಿಸಿದ್ದಾರೆ. ಹಲವರು ಕರೆ ಮಾಡಿ ತಾನು ತಮ್ಮ ತಾಯಿಯನ್ನು ಕೊಂದ ವದಂತಿ ಬಗ್ಗೆ ವಿಚಾರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿ ಹರಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.