ಚೊಚ್ಚಲ ನಿರ್ದೇಶನದ ಮಾಹಿತಿಯನ್ನು ಜಾಲತಾಣದಲ್ಲಿ ಹಂಚಿಕೊಂಡ ಆರ್ಯನ್ ಖಾನ್
ಆರ್ಯನ್ ಖಾನ್ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ: ಆರ್ಯನ್ ಖಾನ್ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಾಟರ್ ಮಾರ್ಕ್ ಹೊಂದಿರುವ ಸ್ಕ್ರಿಪ್ಟ್ ಮೇಲೆ ಆರ್ಯನ್ ಖಾನ್ ಗೆ ಎಂಬ ಬರಹವಿರುವ ಫೋಟೋವನ್ನು ಆರ್ಯನ್ ಖಾನ್ ಹಂಚಿಕೊಂಡಿದ್ದಾರೆ, ಇದರೊಂದಿಗೆ ತಮ್ಮ ಕುಟುಂಬ ಒಡೆತನದ ಕಂಪನಿ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಎಂಬ ಪ್ರೊಡಕ್ಷನ್ ಸಂಸ್ಥೆಯ ಕ್ಲ್ಯಾಪ್ ಬೋರ್ಡ್ ನ್ನೂ ಹಂಚಿಕೊಂಡಿದ್ದಾರೆ.
ನಾನು ಆಕ್ಷನ್ ಹೇಳುವುದಕ್ಕೆ ಕಾಯಲು ಆಗುತ್ತಿಲ್ಲ, ಎಂಬ ಶೀರ್ಷಿಕೆಯಡಿ ಫೋಟೋವನ್ನು ಹಂಚಿಕೊಂಡಿದ್ದು, ಆರ್ಯನ್ ಖಾನ್ ತಂದೆ ಶಾರೂಖ್ ಖಾನ್, ಗೌರಿ ಖಾನ್ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಶಾರೂಖ್ ಖಾನ್ ಹಾಗೂ ಆಯನ್ ಖಾನ್ ಇಬ್ಬರೂ ಕಾಮೆಂಟ್ ಗಳಲ್ಲಿ ಪರಸ್ಪರ ಲಘು ಹಾಸ್ಯದ ಮಾತುಗಳನ್ನಾಡಿದ್ದಾರೆ.
ಇನ್ನು ಆರ್ಯನ್ ಖಾನ್ ಸಹೋದರಿ ಸುಹಾನ ಖಾನ್ ಝೋಯಾ ಅಖ್ತಾರ್ ಅವರ ದಿ ಆರ್ಚೀಸ್ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಶ್ವೇತಾ ನಂದಾ ಅವರ ಪುತ್ರ ಅಗಸ್ತ್ಯ ನಂದಾ ಹಾಗೂ ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್ ಮೊದಲ ಬಾರಿಗೆ ನಟಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಆರ್ಯನ್ ಖಾನ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದರು. ಎನ್ ಸಿಬಿ ಆರ್ಯನ್ ಖಾನ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ ಬಿಡುಗಡೆ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


