ತಲೈವಿ ತಮಿಳು ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ಸಂಸ್ಥೆ ನಕಾರ: ಸ್ಟಾರ್ ನಟರ ಕಾಲೆಳೆದ ಕಂಗನಾ
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ, ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಮುಂಬೈ: ನಿರೀಕ್ಷೆ ಹುಟ್ಟುಹಾಕಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನಾಧರಿಸಿದ ತಲೈವಿ ಚಿತ್ರದ ಬಿಡುಗಡೆಗೆ ಮತ್ತೊಂದು ವಿಘ್ನ ಎದುರಾಗಿದೆ. ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸಂಸ್ಥೆ 'ತಲೈವಿ' ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕಿದೆ.
ಸೆಪ್ಟೆಂಬರ್ 10 ರಂದು ದೇಶಾದ್ಯಂತ ತಲೈವಿ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಪ್ರಮುಖ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳದೇ ಇರುವುದಕ್ಕೆ ನಟಿ ಕಂಗನಾ ರಣಾವತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಸಿನಿಮಾದಲ್ಲಿ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ.
ಮಲ್ಟಿಪ್ಲೆಕ್ಸ್ ಸಂಸ್ಥೆಯ ನಿರ್ಧಾರದ ಕುರಿತು ಆಕ್ರೋಶ ಹೊರಹಾಕಿರುವ ಕಂಗನಾ, ದೊಡ್ಡ ದೊಡ್ಡ ಸ್ಟಾರ್ ನತರ ಸಿನಿಮಾಗಳಿಗಾದರೆ ಎಲ್ಲಾ ನಿಯಮಗಳನ್ನು ಮುರಿದು ಅವರ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾರೆ. ನನ್ನ ಸಿನಿಮಾಗೆ ಯಾಕೆ ಈ ನಿರ್ಬಂಧ ಎಂದು ಪ್ರಶ್ನೆ ಮಾಡಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ ಚಿತ್ರಮಂದಿರ ಮತ್ತು ಒಟಿಟಿ ಪ್ಲಾಟ್ ಫಾರ್ಮುಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಿತ್ತು. ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 2 ವಾರಗಳ ನಂತರ ಒಟಿಟಿ ಸೇವೆಯಾದ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿತ್ತು ಎಂದು ಕಂಗನಾ ಅಂಕಿ ಅಂಶ ಮುಂದಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


