ಬಾಲಿವುಡ್

ಮದುವೆ ಬಳಿಕ ಮೊದಲ ಬಾರಿಗೆ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಾಲಿವುಡ್ ತಾರಾ ಜೋಡಿ!

ಬಾಲಿವುಡ್ ತಾರೆಯರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಬಳಿಕ ಮೊದಲ ಬಾರಿಗೆ ಮುಂಬೈಗೆ ಬಂದಿಳಿದಿದ್ದು, ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಮದುವೆ ಬಳಿಕ ಮೊದಲ ಬಾರಿಗೆ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಾಲಿವುಡ್ ತಾರಾ ಜೋಡಿ!
ವಿಕ್ಕಿ-ಕತ್ರಿನಾ
Published On :

ಮುಂಬೈ: ಬಾಲಿವುಡ್ ತಾರೆಯರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಬಳಿಕ ಮೊದಲ ಬಾರಿಗೆ ಮುಂಬೈಗೆ ಬಂದಿಳಿದಿದ್ದು, ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ವಿಕ್ಕಿ ಕೌಶಲ್ ಮನೆಗೆ ತೆರಳುವ ಸಂದರ್ಭದಲ್ಲಿ ವಿಕ್ಕಿ ಕೌಶಲ್ ಕೈ ಹಿಡಿದಿರುವ ಕತ್ರಿನಾ ಕೈಫ್ ಅಭಿಮಾನಿಗಳ ಕಡೆಗೆ ನಗುಮೊಗದಿಂದ ಕೈ ಬೀಸಿದ್ದು, ನವದಂಪತಿ ಶುಭಾಶಯ ಕೋರಿದ ಪ್ರತೊಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ಸಂಬಂಧದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳು ವೈರಲ್ ಆಗಿದೆ.

Story image

ಡಿಸೆಂಬರ್ 9 ರಂದು ಇವರಿಬ್ಬರು ಕುಟುಂಬಸ್ಥರು, ಆತ್ಮೀಯ ಸ್ನೇಹಿತರ ನಡುವೆ ಖಾಸಗಿಯಾಗಿ ರಾಜಸ್ಥಾನದ ಬರ್ವಾರ ಸಿಕ್ಸ್ ಸೆನ್ಸಸ್ ರೆಸಾರ್ಟ್‍ನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

Story image

ಅಂದಿನಿಂದ ಇಂದಿನವರೆಗೂ ಕತ್ರಿನಾ ಕೈಫ್ ಮೆಹಂದಿ, ಅರಿಶಿಣ ಫೋಟೋಗಳ ಜೊತೆಗೆ ವಿಕ್ಕಿ ಕೌಶಲ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡುತ್ತಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.