ಬಾಲಿವುಡ್

ಹಿಂದೂ ತೀವ್ರವಾದಿಗಳನ್ನು ವಿರೋಧಿಸುತ್ತೇನೆ, ಮುಸ್ಲಿಂ ಮೂಲಭೂತವಾದಿಗಳನ್ನೂ ವಿರೋಧಿಸುತ್ತೇನೆ: ಜಾವೇದ್ ಅಖ್ತರ್

ತಮಗೆ ಮುಸ್ಲಿಮರೂ ಜೀವ ಬೆದರಿಕೆ ಒಡ್ಡಿದ್ದಾರೆ ಹೀಗಾಗಿ ತಾವು ಯಾರೊಬ್ಬರ ಪರವಲ್ಲ. ಜನಸಾಮಾನ್ಯರ ಪರ ಎಂದು ಹೇಳಿದ್ದಾರೆ.

ಹಿಂದೂ ತೀವ್ರವಾದಿಗಳನ್ನು ವಿರೋಧಿಸುತ್ತೇನೆ, ಮುಸ್ಲಿಂ ಮೂಲಭೂತವಾದಿಗಳನ್ನೂ ವಿರೋಧಿಸುತ್ತೇನೆ: ಜಾವೇದ್ ಅಖ್ತರ್
ಜಾವೇದ್ ಅಖ್ತರ್
Published On :

ಮುಂಬೈ: ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್ ತಾವು ಜನರನ್ನು ಒಡೆಯುವ ಯಾವುದೇ ಶಕ್ತಿಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಮುಸ್ಲಿಂ ಮೂಲಭೂತವಾದಿಗಳನ್ನು, ಹಿಂದೂ ತೀವ್ರವಾದಿಗಳನ್ನೂ ತಾವು ಸಹಿಸುವುದಿಲ್ಲ ಎಂದಿದ್ದಾರೆ. 

ಇತ್ತೀಚಿಗೆ ಅವರು ತಾಲಿಬಾನ್ ಮತ್ತು ಹಿಂದೂ ತೀವ್ರವಾದಿಗಳ ನಡುವೆ ಹೋಲಿಕೆ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಜಾವೇದ್ ಸ್ಪಷ್ಟನೆ ನೀಡಿದ್ದಾರೆ.  ತಮಗೆ ಮುಸ್ಲಿಮರೂ ಜೀವ ಬೆದರಿಕೆ ಒಡ್ಡಿದ್ದಾರೆ ಹೀಗಾಗಿ ತಾವು ಯಾರೊಬ್ಬರ ಪರವಲ್ಲ. ಜನಸಾಮಾನ್ಯರ ಪರ ಎಂದು ಹೇಳಿದ್ದಾರೆ.

ಭಾರತೀಯರು ಯಾವತ್ತೂ ತಾಲಿಬಾನಿಗಳಾಗಲು ಸಾಧ್ಯವಿಲ್ಲ. ಒಳ್ಲೆಯತನ ಎನ್ನುವುದು ನಮ್ಮೆಲ್ಲರ ವಂಶವಾಹಿಯಲ್ಲೇ ಹರಿಯುತ್ತಿದೆ. ನಾವು ಎಲ್ಲವನ್ನೂ ಸಮತೋಲನ ಮಾಡಲಿಚ್ಛಿಸುವವರು. ಲೆಫ್ಟೂ ಅಲ್ಲ ರೈಟೂ ಅಲ್ಲ ರಸ್ತೆಯ ಮಧ್ಯದಲ್ಲಿರುವವರು ಎಂದು ಅಖ್ತರ್ ಮಾರ್ಮಿಕವಾಗಿ ನುಡಿದಿದ್ದಾರೆ.

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.