ಬಾಲಿವುಡ್

ಶಿಶುವಿಗೆ 16 ಕೋಟಿ ರೂ. ಬೆಲೆಯ ಇಂಜೆಕ್ಷನ್: ನೆರವು ನೀಡಲು ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದು

ಬಾಲಿವುಡ್ ಸೂಪರ್‌ ಸ್ಟಾರ್‌, ಬಿಗ್‌ ಬಿ ಅಮಿತಾಬ್ ಬಚ್ಚನ್ ಪುಟ್ಟ ಮಗುವಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಕಿರುತೆರೆಯಲ್ಲಿ "ಕೌನ್‌ ಬನೇಗಾ ಕರೋಡ್‌ ಪತಿ" ಕಾರ್ಯಕ್ರಮದ ನಿರೂಪಕರಾಗಿರುವ ಅವರು ಪ್ರಸ್ತುತ 13 ನೇ ಸೀಸನ್‌ ಕೆಬಿಸಿ ನಡೆಸಿಕೊಡುತ್ತಿದ್ದಾರೆ.

ಶಿಶುವಿಗೆ 16 ಕೋಟಿ ರೂ. ಬೆಲೆಯ ಇಂಜೆಕ್ಷನ್: ನೆರವು ನೀಡಲು ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದು
ಅಮಿತಾಬ್ ಬಚ್ಚನ್
Published On :

ಮುಂಬೈ: ಬಾಲಿವುಡ್ ಸೂಪರ್‌ ಸ್ಟಾರ್‌, ಬಿಗ್‌ ಬಿ ಅಮಿತಾಬ್ ಬಚ್ಚನ್ ಪುಟ್ಟ ಮಗುವಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಕಿರುತೆರೆಯಲ್ಲಿ "ಕೌನ್‌ ಬನೇಗಾ ಕರೋಡ್‌ ಪತಿ" ಕಾರ್ಯಕ್ರಮದ ನಿರೂಪಕರಾಗಿರುವ ಅವರು ಪ್ರಸ್ತುತ 13 ನೇ ಸೀಸನ್‌ ಕೆಬಿಸಿ ನಡೆಸಿಕೊಡುತ್ತಿದ್ದಾರೆ. 

ಈ ಕಾರ್ಯಕ್ರಮಕ್ಕೆ ಯಾರೇ ಬಂದರೂ ಗೆದ್ದ ಬಹುಮಾನ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುತ್ತಾರೆ. ಹೊಸದಾಗಿ ಈ ಕಾರ್ಯಕ್ರಮಕ್ಕೆ ಬಾಲಿವುಡ್‌ ನೃತ್ಯ ನಿರ್ದೇಶಕಿ ಫರಾಖಾನ್, ನಾಯಕಿ ದೀಪಿಕಾ ಪಡುಕೋಣೆ ಅತಿಥಿಗಳಾಗಿದ್ದರು. ಈ ಸಂಚಿಕೆಗೆ ಸಂಬಂಧಿಸಿದ ಹೊಸ ಪ್ರೋಮೋವನ್ನು ಸೋನಿ ಟಿವಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. 

ಎಲ್ಲರಂತೆ, ತಾವು ಗೆದ್ದ ಬಹುಮಾನದ ಹಣವನ್ನು ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 17 ತಿಂಗಳ ಪುಟ್ಟ ಮಗು ಅಯಾನ್ಶ್ ಸಹಾಯಾರ್ಥ ನೀಡಲಾಗುವುದು ಎಂದು ಫರಾಖಾನ್‌ ಹೇಳಿದರು. ಆ ಮಗುವಿಗೆ ಎರಡನೇ ವರ್ಷಕ್ಕೆ ನೀಡಬೇಕಿರುವ ಇಂಜೆಕ್ಷನ್ ಖರೀದಿಗೆ 16 ಕೋಟಿ ರೂ.ಬೇಕಾಗಿದೆ. ಹಾಗಾಗಿ ಚಿಕಿತ್ಸೆಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ಹೇಳಿ ಫರಾ ಖಾನ್‌ ಭಾವುಕರಾದರು.

ಅಮಿತಾಬ್ ಬಚ್ಚನ್ ಮಾತನಾಡಿ, ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿರುವ ಮಗು ಆಯಾನ್ಶ್‌ಗಾಗಿ ಫರಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನನಗೆ ಇಲ್ಲಿ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಆದರೆ, ಆ ಮಗುವಿಗೆ ನಾನು ಕೂಡ ಆರ್ಥಿಕ ಸಹಾಯ ಮಾಡುತ್ತೇನೆ ಎಂದರು. ಆದರೆ ಎಷ್ಟು ಹಣ ನೀಡಲಾಗುವುದು ಎಂಬುದನ್ನು ಮಾತ್ರ ಬಿಗ್‌ ಬಿ ಹೇಳಲಿಲ್ಲ. 

ನಟಿ ದೀಪಿಕಾ ಪಡುಕೋಣೆ ತಮ್ಮ ಫೌಂಡೇಶನ್ 'ಲೀವ್‌ ಲವ್ ಲಾಫ್' ಬಗ್ಗೆ ಮಾತನಾಡಿದರು. 2014 ರಲ್ಲಿ ತಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ ಆ ಸಮಯದಲ್ಲಿ ಸಾಯಬೇಕೆಂದು ಎಂದು ಭಾವಿಸಿದ್ದೇ ಎಂದು ಹೇಳುವ ಮೂಲಕ ಭಾವೋದ್ವೇಗಕ್ಕೊಳಗಾದರು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಈ ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.