ಬಾಲಿವುಡ್

ನಟ ಸಲ್ಮಾನ್ ಖಾನ್ ಜೊತೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲವೆಂದು ಅತ್ತಿದ್ದ ನಟಿ ಭಾಗ್ಯಶ್ರೀ: ಸೂಪರ್ ಐಡಿಯ ಮಾಡಿದ ನಿರ್ದೇಶಕರು

ತಾನು ಕಿಸ್ ಮಾಡುವುದಿಲ್ಲ ಎಂದು ನಟಿ ಭಾಗ್ಯಶ್ರೀ ಒಂದೇ ಸಮನೆ ಹಠ ಮಾಡಿ ಕೂತು ಬಿಟ್ಟಿದ್ದರು. ಕೋಲು ಮುರಿಯಬಾರದು, ಹಾವೂ ಸಾಯಬಾರದು ಎನ್ನುವಂತೆ ನಿರ್ದೇಶಕ ಸೂರಜ್ ಬಜ್ರಾತಿಯ ಒಂದು ಸೂಪರ್ ಐಡಿಯಾ ಮಾಡಿ ಕಿಸ್ಸಿಂಗ್ ಸೀನ್ ಶೂಟ್ ಮಾಡಿಯೇ ಬಿಟ್ಟರು.

ನಟ ಸಲ್ಮಾನ್ ಖಾನ್ ಜೊತೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲವೆಂದು ಅತ್ತಿದ್ದ ನಟಿ ಭಾಗ್ಯಶ್ರೀ: ಸೂಪರ್ ಐಡಿಯ ಮಾಡಿದ ನಿರ್ದೇಶಕರು
ನಟಿ ಭಾಗ್ಯಶ್ರೀ
Published On :

ಮುಂಬೈ: 'ಮೈನೇ ಪ್ಯಾರ್ ಕಿಯಾ', ಸಲ್ಮಾನ್ ಖಾನ್ ರನ್ನು ಬಾಲಿವುಡ್ ನಲ್ಲಿ ತಳವೂರುವಂತೆ ಮಾಡಿದ ಸಿನಿಮಾ. 1989ರಲ್ಲಿ ತೆರೆಕಂಡಿದ್ದ ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ಜೋಡಿಯಾಗಿ ಭಾಗ್ಯಶ್ರೀ ನಟಿಸಿದ್ದರು. 

ಆ ಸಿನಿಮಾ ಚಿತ್ರೀಕರಣ ವೇಳೆ ನಡೆದ ಸ್ವಾರಸ್ಯಕರ ಸಂಗತಿಯನ್ನು ಅವರೀಗ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಮತ್ತು ಭಾಗ್ಯಶ್ರೀ ಕಿಸ್ ಮಾಡುವ ದೃಶ್ಯವಿತ್ತು. ಈ ವಿಷಯ ತಿಳಿಯುತ್ತಲೇ ಭಾಗ್ಯಶ್ರೀ ಅಳಲು ಶುರುಮಾಡಿದ್ದರು. 

ತಾನು ಕಿಸ್ ಮಾಡುವುದಿಲ್ಲ ಎಂದು ನಟಿ ಒಂದೇ ಸಮನೆ ಹಠ ಮಾಡಿ ಕೂತು ಬಿಟ್ಟಿದ್ದರು. ಭಾಗ್ಯಶ್ರೀ ಅವರನ್ನು ಕಂಡು ನಿರ್ದೇಶಕರು ತಲೆ ಮೇಲೆ ಕೈಹೊತ್ತು ಕೂತರು. ಕೋಲು ಮುರಿಯಬಾರದು, ಹಾವೂ ಸಾಯಬಾರದು ಎನ್ನುವಂತೆ ನಿರ್ದೇಶಕ ಸೂರಜ್ ಬಜ್ರಾತಿಯ ಒಂದು ಸೂಪರ್ ಐಡಿಯಾ ಮಾಡಿದರು.

ನಂತರ ಬೇರೆ ದಾರಿ ಕಾಣದೆ ನಿರ್ದೇಶಕರು ಸಲ್ಮಾನ್ ಮತ್ತು ಭಾಗ್ಯಶ್ರೀ ನಡುವೆ ಗ್ಲಾಸ್ ಪೀಸ್ ಇಟ್ಟು ಕಿಸ್ ಮಾಡಿಸಿ ಆ ದೃಶ್ಯವನ್ನು ಶೂಟ್ ಮಾಡಿದರು.  

ಆಗಿನ್ನೂ ತಮಗೆ 18 ವರ್ಷ. ಆ ಸಮಯದಲ್ಲಿ ತಾವು ಲವ್ ಮಾಡುತ್ತಿದ್ದರೂ ಅದುವರೆಗೂ ಯಾವುದೇ ವ್ಯಕ್ತಿಯನ್ನು ಕಿಸ್ ಮಾಡಿರಲಿಲ್ಲ. ಮದುವೆ ಮಾಡಿಕೊಂಡು ಚೆನ್ನಾಗಿ ಬಾಳಿ ಬದುಕಬೇಕು ಅಂದುಕೊಂಡಿದ್ದೆ. ಹೀಗಾಗಿ ಕಿಸ್ಸಿಂಗ್ ಸೀನ್ ನಿರಾಕರಿಸಿದ್ದಾಗಿ ಅವರೀಗ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.