ಹಿರಿಯ ಸಂಗೀತ ಸಂಯೋಜಕ ವನ್‌ರಾಜ್ ಭಾಟಿಯಾ ನಿಧನ
ಹಿರಿಯ ಸಂಗೀತ ಸಂಯೋಜಕ ವನ್‌ರಾಜ್ ಭಾಟಿಯಾ (94) ಶುಕ್ರವಾರ ಮುಂಬೈನಲ್ಲಿ ಅಲ್ಪಾವಧಿಯ ಅನಾರೋಗ್ಯದ ನಂತರ ನಿಧನರಾದರು

ಹಿರಿಯ ಸಂಗೀತ ಸಂಯೋಜಕ ವನ್‌ರಾಜ್ ಭಾಟಿಯಾ (94) ಶುಕ್ರವಾರ ಮುಂಬೈನಲ್ಲಿ ಅಲ್ಪಾವಧಿಯ ಅನಾರೋಗ್ಯದ ನಂತರ ನಿಧನರಾದರು
ಶ್ಯಾಮ್ ಬೆನೆಗಲ್ ಕ್ಲಾಸಿಕ್‌ಗಳಾದ ಅಂಕುರ್ ಮತ್ತು ಭೂಮಿಕಾ ಮತ್ತು ಟಿವಿ ಸರಣಿ ಯಾತ್ರಾ ಮತ್ತು ಭಾರತ್ ಏಕ್ ಖೋಜ್ (ಡಿಸ್ಕವರಿ ಆಫ್ ಇಂಡಿಯಾ) ಗಾಗಿ ಸಂಗೀತ ಸಂಯೋಜನೆ ಮಾಡಿದ್ದ ಭಾಟಿಯಾ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.
ಮುಂಬೈನ ಎಲ್ಫಿನ್‌ಸ್ಟೋನ್ ಕಾಲೇಜಿನಿಂದ ಪದವಿ ಪಡೆದ ನಂತರ ಲಂಡನ್ ಮತ್ತು ಪ್ಯಾರಿಸ್‌ನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ಭಾಟಿಯಾ ಭಾರತಕ್ಕೆ ಹಿಂತಿರುಗಿದ ನಂತರ ಜಾಹೀರಾತು ಜಗತ್ತಿನ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.ಅದ್ಭುತವಾದ 6,000 ಜಾಹೀರಾತು ಜಿಂಗಲ್‌ಗಳಿಗಾಗಿ ಕೆಲಸ ಮಾಡಿದರು,
ಶ್ಯಾಮ್ ಬೆನಗಲ್ ಜೊತೆ, ಅವರು ಸಿನಿಮಾ ಪ್ರಪಂಚಕ್ಕೆ ಕಾಲಿರಿಸಿದ್ದ ನಂತರ ಪಾಶ್ಚಾತ್ಯ ಸಂಗೀತವನ್ನು ಭಾರತೀಯ ಶಾಸ್ತ್ರೀಯ ಭಾಷಾವೈಶಿಷ್ಟ್ಯದೊಂದಿಗೆ ಬೆರೆಸಿ ನೂತನ ಪ್ರಯೋಗಗಳನ್ನು ನಡೆಸಿದರು.ಅಪರ್ಣಾ ಸೇನ್ ಅವರ 36 ಚೌರಿಂಗೀ ಲೇನ್ ಮತ್ತು ಕುಂದನ್ ಷಾ ಅವರ ಜಾನೆ ಭಿ ದೋ ಯಾರೊ ಚಿತ್ರಕ್ಕಾಗಿ ಹಾಡುಗಳನ್ನು ಸಂಯೋಜನೆ ಮಾಡಿದ್ದರು.
ಅಗ್ನಿ ವರ್ಷ ಎಂಬ ಒಪೆರಾ ಚಿತ್ರ ಒಂದಕ್ಕೆ ಅವರು ಕಡೆಯದಾಗಿ ಸಂಗೀತ ನೀಡಿದ್ದರು, ಅದು ನ್ಯೂಯಾರ್ಕ್‌ನಲ್ಲಿ ಪ್ರದರ್ಶನವಾಗಿತ್ತು. ಗೋವಿಂದ್ ನಿಹಲಾನಿಯವರ ಟಿವಿ ಸರಣಿ ತಮಾಷ್ ಗಾಗಿ ರಾಷ್ಟ್ರ ಪ್ರಶಸ್ತಿಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಅಲ್ಲದೆ 2012 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


