ನೀವು ಕನಸಗಳನ್ನು ಪ್ರತಿನಿಧಿಸಿದ್ದಿರಿ: 'ಭಾಗ್ ಮಿಲ್ಕಾ ಭಾಗ್' ನಾಯಕ ಫರ್ಹಾನ್ ಅಖ್ತರ್ ರಿಂದ ಮಿಲ್ಖಾ ಸಿಂಗ್ ಸ್ಮರಣೆ
"ಭಾಗ್ ಮಿಲ್ಖಾ ಭಾಗ್" ಚಿತ್ರದಲ್ಲಿ ಮಿಲ್ಖಾ ಸಿಂಗ್ ಪಾತ್ರದಲ್ಲಿ ನಟಿಸಿರುವ ನಟ ಫರ್ಹಾನ್ ಅಖ್ತರ್, ಕೋವಿಡ್ -19 ಜತೆಗೆ ಸುದೀರ್ಘ ಹೋರಾಟದ ನಂತರ 91 ನೇ ವಯಸ್ಸಿನಲ್ಲಿ ನಿಧನರಾದ ಚಾರಿತ್ರಿಕ ಭಾರತೀಯ ಕ್ರೀಡಾಪಟುವಿನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಭಾಗ್ ಮಿಲ್ಖಾ ಭಾಗ್" ಚಿತ್ರದಲ್ಲಿ ಮಿಲ್ಖಾ ಸಿಂಗ್ ಪಾತ್ರದಲ್ಲಿ ನಟಿಸಿರುವ ನಟ ಫರ್ಹಾನ್ ಅಖ್ತರ್, ಕೋವಿಡ್ -19 ಜತೆಗೆ ಸುದೀರ್ಘ ಹೋರಾಟದ ನಂತರ 91 ನೇ ವಯಸ್ಸಿನಲ್ಲಿ ನಿಧನರಾದ ಚಾರಿತ್ರಿಕ ಭಾರತೀಯ ಕ್ರೀಡಾಪಟುವಿನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
'ಫ್ಲೈಯಿಂಗ್ ಸಿಖ್' ಎಂದು ಜನಪ್ರಿಯವಾಗಿದ್ದ ಮಿಲ್ಖಾ ಅವರೊಂದಿಗೆ ಪೋಸ್ ನೀಡುವ ಚಿತ್ರವನ್ನು ಫರ್ಹಾನ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಿಲ್ಖಾ ಸಿಂಗ್ ಇನ್ನಿಲ್ಲಒಪ್ಪಿಕೊಳ್ಳಲು ನಿರಾಕರಿಸುತ್ತೇನೆ ಎಂದು ನಟ ಬರೆದುಕೊಂಡಿದ್ದಾರೆ.
"ಪ್ರೀತಿಯ ಮಿಲ್ಖಾ ಜಿ, ನನ್ನಲ್ಲಿ ಒಂದು ಭಾಗವೇ ನೀವು, ಇನ್ನು ಮುಂದಿಲ್ಲಎಂದು ಒಪ್ಪಿಕೊಳ್ಳಲು ಇನ್ನೂ ನಿರಾಕರಿಸುತ್ತೇನೆ. ಬಹುಶಃ ನಾನು ನಿಮ್ಮಿಂದ ಆನುವಂಶಿಕವಾಗಿ ಪಡೆದ ಮೊಂಡುತನ ಇದಾಗಿರಬಹುದು. ನಾನು ಏನನ್ನಾದರೂ ಬಯಸಿದಾಗ , ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಮತ್ತು ಸತ್ಯವೆಂದರೆ ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಯಾಕೆಂದರೆ ನೀವು ದೊಡ್ಡ ಹೃದಯವಂತರು, ಪ್ರೀತಿಯ ದ್ಯೋತಕ ನೀವು ಒಂದು ಕಲ್ಪನೆಯನ್ನು ಪ್ರತಿನಿಧಿಸಿದ್ದೀರಿ. ನೀವು ಒಂದು ಕನಸನ್ನು ಪ್ರತಿನಿಧಿಸಿದ್ದೀರಿ ) ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ದೃಢ ನಿಶ್ಚಯವು ವ್ಯಕ್ತಿಯನ್ನು ಮೊಣಕಾಲಿನಿಂದ ಆಕಾಶದೆತ್ತರಕ್ಕೆ ಮುಟ್ಟುವಂತೆ ಮಾಡುತ್ತದೆ. "
ಚಾರಿತ್ರಿಕ ಕ್ರೀಡಾತಾರೆಎಲ್ಲರ ಜೀವನವನ್ನು ಮುಟ್ಟಿದ್ದಾರೆ ಎಂದು ಫರ್ಹಾನ್ ಹೇಳಿದ್ದಾರೆ. "ನಿಮ್ಮ ಕಥೆ ನಿರಂತರ ಸ್ಫೂರ್ತಿಯ ಮೂಲವಾಗಿತ್ತು ನಾನು ನಿನ್ನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ" ಅವರು ಹೇಳಿದ್ದಾರೆ.
ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ, "ಭಾಗ್ ಮಿಲ್ಖಾ ಭಾಗ್", ಮಿಲ್ಖಾ ಸಿಂಗ್ ಅವರ ಜೀವನವನ್ನು ಆಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


