ಬಾಲಿವುಡ್

ಗುಲ್ಮಾರ್ಗ್ ಫೈರಿಂಗ್ ತರಬೇತಿ ಸ್ಥಳಕ್ಕೆ ನಟಿ ವಿದ್ಯಾ ಬಾಲನ್ ಹೆಸರು ನಾಮಕರಣ: ಭಾರತೀಯ ಸೇನೆಯಿಂದ ಅತ್ಯುನ್ನತ ಗೌರವ

ಭಾರತೀಯ ಚಿತ್ರರಂಗಕ್ಕೆ ನಟಿ ವಿದ್ಯಾ ಬಾಲನ್ ನೀಡಿರುವ ಕೊಡುಗೆ ಗೌರವಿಸಿ ಭಾರತೀಯ ಸೇನೆ ಬಹಳ ವಿಶೇಷವಾಗಿ ಗೌರವಿಸಿದೆ. ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳ ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್‌ಗೆ ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡಲಾಗಿದೆ.

ಗುಲ್ಮಾರ್ಗ್ ಫೈರಿಂಗ್ ತರಬೇತಿ ಸ್ಥಳಕ್ಕೆ ನಟಿ ವಿದ್ಯಾ ಬಾಲನ್ ಹೆಸರು ನಾಮಕರಣ: ಭಾರತೀಯ ಸೇನೆಯಿಂದ ಅತ್ಯುನ್ನತ ಗೌರವ
ವಿದ್ಯಾ ಬಾಲನ್
Published On :

ಭಾರತೀಯ ಚಿತ್ರರಂಗಕ್ಕೆ ನಟಿ ವಿದ್ಯಾ ಬಾಲನ್ ನೀಡಿರುವ ಕೊಡುಗೆ ಗೌರವಿಸಿ ಭಾರತೀಯ ಸೇನೆ ಬಹಳ ವಿಶೇಷವಾಗಿ ಗೌರವಿಸಿದೆ. ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳ ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್‌ಗೆ ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡಲಾಗಿದೆ.

ಮಿಲಟರಿ ಫೈರಿಂಗ್ ರೇಂಜ್‌ಗೆ ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾ ಬಾಲನ್‌ಗೆ ಶುಭಾಶಯ ಹರಿದು ಬರುತ್ತಿದೆ. ಆಕೆಯ ವೃತ್ತಿ ಜೀವನದಲ್ಲಿ ಇದು ಬಹಳ ಹೆಮ್ಮೆಯ ವಿಚಾರ ಎಂದು ಶ್ಲಾಘಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಆಯೋಜಿಸಿದ್ದ 'ಗುಲ್ಮಾರ್ಗ್ ವಿಂಟರ್ ಫೆಸ್ಟಿವಲ್'ನಲ್ಲಿ ವಿದ್ಯಾ ಬಾಲನ್, ಪತಿ ಸಿದ್ದಾರ್ಥ್ ರಾಯ್ ಕಪೂರ್ ಜೊತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.