ಪಾರ್ಟಿ ಎಫೆಕ್ಟ್: ಕರೀನಾ, ಅಮೃತಾ ಆರೋರಾ ಬೆನ್ನಲ್ಲೇ ಸೊಹೇಲ್ ಖಾನ್ ಪತ್ನಿ ಸೀಮಾ ಖಾನ್ ಗೂ ಕೋವಿಡ್ ಸೋಂಕು ದೃಢ
ಬಾಲಿವುಡ್ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ನಟಿಮಣಿಯರಿಗೆ ಕೊರೋನಾ ಸೋಂಕು ಒಕ್ಕರಿಸುತ್ತಿದ್ದು, ಕರೀನಾ ಕಪೂರ್, ಅಮೃತಾ ಆರೋರಾ ಬೆನ್ನಲ್ಲೇ ಇದೀಗ ಬಾಲಿವುಡ್ ನಟ, ನಿರ್ಮಾಪಕ ಸೊಹೇಲ್ ಖಾನ್ ಪತ್ನಿ ಸೀಮಾ ಖಾನ್ ಗೂ ಕೊರೋನಾ ಸೋಂಕು ಒಕ್ಕರಿಸಿದೆ.

ಮುಂಬೈ: ಬಾಲಿವುಡ್ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ನಟಿಮಣಿಯರಿಗೆ ಕೊರೋನಾ ಸೋಂಕು ಒಕ್ಕರಿಸುತ್ತಿದ್ದು, ಕರೀನಾ ಕಪೂರ್, ಅಮೃತಾ ಆರೋರಾ ಬೆನ್ನಲ್ಲೇ ಇದೀಗ ಬಾಲಿವುಡ್ ನಟ, ನಿರ್ಮಾಪಕ ಸೊಹೇಲ್ ಖಾನ್ ಪತ್ನಿ ಸೀಮಾ ಖಾನ್ ಗೂ ಕೊರೋನಾ ಸೋಂಕು ಒಕ್ಕರಿಸಿದೆ.
ಈ ಬಗ್ಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸ್ಪಷ್ಟನೆ ನೀಡಿದ್ದು, ಕರೀನಾ ಮತ್ತು ಅಮೃತಾ ಅವರಿಗೆ ಕೊರೋನಾ ಸೋಂಕು ದೃಢಪಡುವ ಮುನ್ನಲೇ ಸೀಮಾ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು ಎಂದು ಹೇಳಿದೆ. ಡಿಸೆಂಬರ್ 8 ರಂದು ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ಮನೆಯಲ್ಲಿ ನಡೆದ ಗೆಟ್ ಟುಗೆದರ್ ಪಾರ್ಟಿಯಲ್ಲಿ ಕರೀನಾ ಮತ್ತು ಅಮೃತಾ, ಸೀಮಾಖಾನ್ ಸೇರಿದಂತೆ ಬಾಲಿವುಡ್ ಖ್ಯಾತನಾಮರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕರೀನಾ ಕಪೂರ್, ಅಮೃತಾ ಅರೋರಾಗೆ ಕೋವಿಡ್ ಪಾಸಿಟಿವ್ ದೃಢ
ಸೀಮಾ ಖಾನ್ ಅವರಿಗೆ ಸಣ್ಣಪುಟ್ಟ ರೋಗ ಲಕ್ಷಣಗಳಿದ್ದರಿಂದ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಡಿಸೆಂಬರ್ 11 ರಂದು, ಸೀಮಾ ಅವರ COVID-19 ವರದಿ ಪಾಸಿಟಿವ್ ಬಂದಿತ್ತು. ಅದೇ ದಿನ ಕರೀನಾ ಮತ್ತು ಅಮೃತಾ ಕೂಡ ತಮ್ಮನ್ನು ಪರೀಕ್ಷೆಗೆ ಒಳಪಡಿಸಿದರು ಮತ್ತು ಅವರ ವರದಿಗಳು ಭಾನುವಾರ ಪಾಸಿಟಿವ್ ಬಂದಿತ್ತು. ಸದ್ಯಕ್ಕೆ, BMC ಸಂಪರ್ಕ ಪತ್ತೆಗಾಗಿ ವಾರ್ಡ್ ಮಟ್ಟದಲ್ಲಿ ವಿವಿಧ ತಂಡಗಳನ್ನು ರಚನೆ ಮಾಡಿದೆ.
ಅವರು ಪಾರ್ಟಿಯಲ್ಲಿ ಭಾಗವಹಿಸಿದ ಜನರಿಂದ ವಿವರಗಳನ್ನು ಪಡೆಯುತ್ತಿದ್ದಾರೆ, ಅದರ ಆಧಾರದ ಮೇಲೆ ಹೆಚ್ಚಿನ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಈಗಾಗಲೇ BMC ಯಿಂದ 15 ಕ್ಕೂ ಹೆಚ್ಚು ನಿಕಟ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದ್ದು, ಹೆಚ್ಚಿನ ಸಂಪರ್ಕ ಪತ್ತೆಹಚ್ಚುವಿಕೆ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿದುಹಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


