ಮಿರ್ಜಾಪುರ ವೆಬ್ ಸೀರೀಸ್ ನಟ ಬ್ರಹ್ಮ ಮಿಶ್ರಾ ಮುಂಬೈನ ಫ್ಲಾಟ್ನಲ್ಲಿ ಶವವಾಗಿ ಪತ್ತೆ
ಮಿರ್ಜಾಪುರ ವೆಬ್ ಸರಣಿಯಲ್ಲಿ ಮುನ್ನಾ ಭಯ್ಯಾ ಸ್ನೇಹಿತ ಲಲಿತ್ ಪಾತ್ರದಲ್ಲಿ ನಟಿಸಿದ್ದ ಬ್ರಹ್ಮ ಮಿಶ್ರಾ ಅವರು ಮುಂಬೈನ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮುಂಬೈ: ಮಿರ್ಜಾಪುರ ವೆಬ್ ಸರಣಿಯಲ್ಲಿ ಮುನ್ನಾ ಭಯ್ಯಾ ಸ್ನೇಹಿತ ಲಲಿತ್ ಪಾತ್ರದಲ್ಲಿ ನಟಿಸಿದ್ದ ಬ್ರಹ್ಮ ಮಿಶ್ರಾ ಅವರು ಮುಂಬೈನ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ, ನವೆಂಬರ್ 29 ರಂದು ನಟ ಎದೆ ನೋವೆಂದು ವೈದ್ಯರನ್ನು ಭೇಟಿ ಮಾಡಿದ್ದರು. ವೈದ್ಯರು ಬಳಿಕ ಗ್ಯಾಸ್ಟ್ರಿಕ್ಗೆ ಔಷಧಿ ನೀಡಿದ ನಂತರ ಅವರನ್ನು ಮನೆಗೆ ಕಳುಹಿಸಲಾಯಿತು. ಆದರೆ ನಂತರ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬ್ರಹ್ಮ ಅವರು ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ಬದುಕುತ್ತಿದ್ದರು.
ಬ್ರಹ್ಮ ಮಿಶ್ರಾ ಮುಂಬೈನ ಎನ್ಲಕ್ಸ್ ನಗರ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಅವರ ಮೃತ ದೇಹವು ಸ್ನಾನಗೃಹದಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬಂದ ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ನಂತರ ಫ್ಲಾಟ್ ಪ್ರವೇಶಿಸಿದ ಪೊಲೀಸರಿಗೆ ಬಾತ್ ರೂಂನಿಂದ ವಾಸನೆ ಬರುತ್ತಿರುವುದು ಗೊತ್ತಾಗಿದೆ. ಅವರು ಸ್ನಾನಗೃಹದ ಬಾಗಿಲು ತೆರೆದಾಗ ಬ್ರಹ್ಮ ಅವರ ದೇಹವು ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸರು ಆಕಸ್ಮಿಕ ಸಾವೆಂದು ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ. ಹೃದಯಾಘಾತದಿಂದ ನಟ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಬ್ರಹ್ಮ ಮಿಶ್ರಾ ಅವರ ಸಹೋದರ ಸಂದೀಪ್ ಹೇಳಿದ್ದಾರೆ.
ಅನೇಕ ಖ್ಯಾತ ನಟರು ಬ್ರಹ್ಮ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ದಿ ಮೌಂಟೇನ್ ಮ್ಯಾನ್, ದಂಗಲ್, ಕೇಸರಿ ಮತ್ತು ವೆಬ್ ಸರಣಿ ಮಿರ್ಜಾಪುರದಂತಹ ಸಿನಿಮಾಗಳಲ್ಲಿನ ಪಾತ್ರಗಳಿಗೆ ಬ್ರಹ್ಮ ಅವರು ಹೆಚ್ಚು ಹೆಸರುವಾಸಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


