ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊದಲ ಮೊಬೈಲ್ ಥಿಯೇಟರ್; ನಟ ಅಕ್ಷಯ್ ಗೆ ಗೌರವ!
ಭಾರತದ ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಆರಂಭಗೊಂಡಿದೆ.

ಮುಂಬೈ: ಭಾರತದ ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಆರಂಭಗೊಂಡಿದೆ.
ಸಮುದ್ರ ಮಟ್ಟದಿಂದ ಸುಮಾರು 11,562 ಅಡಿ ಎತ್ತರದಲ್ಲಿ ಕಡಿಮೆ ವೆಚ್ಚದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಮೊಬೈಲ್ ಥಿಯೇಟರ್ ಅನ್ನು ನಿರ್ಮಿಸಲಾಗಿದೆ. ದೂರದ ಕುಗ್ರಾಮಗಳ ಜನರೂ ಸಹ ಸಿನಿಮಾಗಳಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಚಿತ್ರಮಂದಿರವನ್ನು ಸೇವೆಗೆ ಲಭ್ಯವಾಗಿಸಿರುವೆ ಎಂದು ಪಿಕ್ಚರ್ ಟೈಮ್ ಸ್ಥಾಪಕ, ಸಿಇಒ ಸುಶೀಲ್ ಹೇಳಿದ್ದಾರೆ.
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಮ್' ಚಿತ್ರವನ್ನು ಈ ಥಿಯೇಟರ್ ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈ ವಿಷಯವನ್ನು ಅಕ್ಷಯ್ ಕುಮಾರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಲಡಾಖ್‌ನ ಲೇಹ್‌ನಲ್ಲಿ ಸ್ಥಾಪಿಸಲಾಗಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ 'ಬೆಲ್ ಬಾಟಮ್' ಚಲನಚಿತ್ರವನ್ನು ಪ್ರದರ್ಶಿಸುವುದು ನನಗೆ ದೊರೆತ ಗೌರವ ಎಂದು ಭಾವಿಸಿದ್ದೇನೆ. ಇದರಿಂದ ನನ್ನ ಮನಸ್ಸು ಆನಂದಗೊಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಚಿತ್ರ ಆಕ್ಷನ್ ಥ್ರಿಲ್ಲರ್ ಆಗಿದ್ದು ಇದನ್ನು ರಂಜಿತ್ ಎಂ. ತಿವಾರಿ ನಿರ್ದೇಶಿಸಿದ್ದಾರೆ. ವಾಣಿ ಕಪೂರ್, ಲಾರಾ ದತ್ತಾ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಹಲವಾರು ಬಾರಿ ವಿಳಂಬಗೊಂಡು ನಂತರ ಬಿಡುಗಡೆಗೊಂಡ ಈ ಚಿತ್ರ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


